ರಿಯಾದ್: ಸೌದಿ ಅರೇಬಿಯಾದ ಮೊದಲ ಸಿನೆಮಾ ಮ್ಯೂಸಿಯಂ ಮದೀನಾದಲ್ಲಿ ಪ್ರಾರಂಭವಾಗುತ್ತಿದೆ. ಪ್ರವಾದಿ (ಸ) ಅವರ ಇತಿಹಾಸವನ್ನು ವಿವರಿಸುವ 3ಡಿ ಚಲನಚಿತ್ರಗಳನ್ನು ಪ್ರದರ್ಶಿಸಲಾಗುವ ಈ ಸಿನೇಮಾ ಮ್ಯೂಸಿಯಂ ಮುಂದಿನ ವರ್ಷದಿಂದ ಆರಂಭಗೊಳ್ಳಲಿದೆ.
ಪ್ರವಾದಿಯ ಇತಿಹಾಸವನ್ನು ವಿವರಿಸುವ 3ಡಿ ಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದ್ದು, 8ಡಿ ಧ್ವನಿ ತಂತ್ರಜ್ಞಾನದ ಮೂಲಕ ಭಾಷಾಂತರಿಸಿ, 8 ಭಾಷೆಗಳಲ್ಲಿ ಪ್ರದರ್ಶಿಸಲಾಗುವುದು. ಪ್ರವಾದಿ ಮುಹಮ್ಮದ್ (ಸ) ಅವರ ಜೀವನದ ಪ್ರಮುಖ ಇತಿಹಾಸಗಳನ್ನು ವಿವರಿಸುವ ಆರು ಚಿತ್ರಗಳೊಂದಿಗೆ ಚಲನಚಿತ್ರ ಮ್ಯೂಸಿಯಂ ತೆರೆಯಲಾಗುವುದು ಎಂದು ಯೋಜನೆಯ ಅಧ್ಯಕ್ಷ ಅಹ್ಮದ್ ಅಲ್-ಜುರೈಶಿ ಹೇಳಿದರು.
ಇದು ಮುಂದಿನ ವರ್ಷದ ಆರಂಭದಲ್ಲಿ ಪ್ರಾರಂಭಿಸಲು ಸಿದ್ಧವಾಗಿದೆ. ಅರೇಬಿಕ್, ಇಂಗ್ಲಿಷ್, ಫ್ರೆಂಚ್, ಟರ್ಕಿಶ್, ಹಿಂದಿ, ಉರ್ದು, ಮಲೇಷಿಯನ್ ಮತ್ತು ಇಂಡೋನೇಷ್ಯನ್ ಭಾಷೆಗಳನ್ನು ಚಿತ್ರದಲ್ಲಿ ಬಳಸಲಾಗುತ್ತದೆ ಎಂದು ಅವರು ಹೇಳಿದರು. ಯಾತ್ರಾರ್ಥಿಗಳು ಮತ್ತು ಸಂದರ್ಶಕರಿಗೆ ಪ್ರವಾದಿಯ ಇತಿಹಾಸವನ್ನು ಸುಲಭವಾಗಿ ಅರ್ಥಮಾಡಿಕೊಡುವುದು ಯೋಜನೆಯ ಉದ್ದೇಶವಾಗಿದೆ ಎಂದು ಅವರು ತಿಳಿಸಿದ್ದಾರೆ.















ಇನ್ನಷ್ಟು ಸುದ್ದಿಗಳು
ಸೌದಿಯಲ್ಲಿ ತೀವ್ರ ತಾಪಮಾನ: ವಾಹನಗಳಲ್ಲಿ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳನ್ನು ಇಡದಂತೆ ಸಿವಿಲ್ ಡಿಫೆನ್ಸ್ ಎಚ್ಚರಿಕೆ
ಪವಿತ್ರ ಕಅಬಾಗೆ ತೊಡಿಸುವ ಕಿಸ್ವಾದ ಹಿಂದಿರುವ ಅದ್ಭುತ ರಹಸ್ಯಗಳ ಬಗ್ಗೆ ನಿಮಗೆ ಗೊತ್ತೇ?
ಅನಿವಾಸಿಗಳಿಗೆ ನೆಮ್ಮದಿ: ಕುವೈತ್ ವಿಮಾನ ನಿಲ್ದಾಣದಲ್ಲಿ ವಿದೇಶಿ ವಿಮಾನಗಳ ಸಂಚಾರಕ್ಕೆ ಅನುಮತಿ
ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದ – ಸೌದಿ ಅರೇಬಿಯಾ ಸ್ವಾಗತ
ಸೌದಿಯಲ್ಲಿ ತಪಾಸಣೆ ತೀವ್ರ: ಒಂದೇ ವಾರದಲ್ಲಿ 10,700 ನಿಯಮ ಉಲ್ಲಂಘಕರ ಬಂಧನ- 8,000 ಮಂದಿ ಗಡೀಪಾರು
ದುಬೈ ಏರ್ಪೋರ್ಟ್ನಲ್ಲಿ ಅನಾಥ ಬ್ಯಾಗ್: ಓಪನ್ ಮಾಡಿದ ಅಧಿಕಾರಿಗಳಿಗೆ ಶಾಕ್- ಒಳಗೇನಿತ್ತು ಗೊತ್ತೇ?
ದುಬೈ ಮಿನಿಬಸ್ ಅಪಘಾತ: ಆರು ಮಂದಿ ಭಾರತೀಯರು ಸಹಿತ ಎಂಟು ಮಂದಿ ಮೃತ್ಯು
ಸೌದಿ ಅರೇಬಿಯಾದಲ್ಲಿ ತೀವ್ರಗೊಂಡ ಬಿಸಿಲಿನ ಬೇಗೆ- ಹವಾಮಾನ ಇಲಾಖೆಯಿಂದ ಹೈ ಅಲರ್ಟ್!
ಅಪಾರ್ಟ್ಮೆಂಟ್ ಕೇಂದ್ರೀಕರಿಸಿ ಅನೈತಿಕ ಚಟುವಟಿಕೆ- ನಜ್ರಾನ್ನಲ್ಲಿ 12 ವಿದೇಶಿಗರ ಬಂಧನ
ಕುವೈತ್ ವಿಮಾನ ನಿಲ್ದಾಣದ ಮೇಲೆ ದಾಳಿ: ಗಾಯಗೊಂಡವರಲ್ಲಿ 13 ಮಂದಿ ಭಾರತೀಯರು