janadhvani

Kannada Online News Paper

ಸೌದಿ: ವಿದೇಶಿ ಕಾರ್ಮಿಕರಿಗೆ ವಿಧಿಸುವ ಲೆವಿ, ತೆರಿಗೆ ಶುಲ್ಕದ ಮರು ಪರಿಶೀಲನೆ

ರಿಯಾದ್: ವಿದೇಶಿ ಕಾರ್ಮಿಕರು ಮತ್ತು ಅವರ ಅವಲಂಬಿತರಿಗೆ ವಿಧಿಸುವ ಲೆವಿ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ವಿಧಿಸಿರುವ ಸರಕಾರದ ತೆರಿಗೆ ಶುಲ್ಕವನ್ನು ಸೌದಿ ಅರೇಬಿಯಾ ಮರು ಪರಿಶೀಲಿಸಲಿದೆ ಎಂದು ವಾಣಿಜ್ಯ ಮತ್ತು ಹೂಡಿಕೆ ಸಚಿವ ಡಾ.ಮಾಜಿದ್ ಅಲ್ಖಸಬಿ ತಿಳಿಸಿದ್ದಾರೆ. ಸಚಿವಾಲಯದ ಅಡಿಯಲ್ಲಿ ವಿಶೇಷ ಸಮಿತಿಯು ಈ ಕುರಿತು ಸಮಗ್ರ ಅಧ್ಯಯನವನ್ನು ನಡೆಸುತ್ತಿದೆ ಎಂದವರು ತಿಳಿಸಿದ್ದಾರೆ.

ಆದರೆ ಅದನ್ನು ಹಿಂಪಡೆಯುವುದು, ಕಡಿತ ಗೊಳಿಸುವುದು ಅಥವಾ ಏರಿಕೆ ಬಗ್ಗೆ ಯಾವುದೇ ಸೂಚನೆಗಳನ್ನು ನೀಡಲಾಗಿಲ್ಲ. ಲೆವಿ ಶುಲ್ಕಗಳನ್ನು ವಿಧಿಸಿದ ನಂತರದ ಪರಿಣಾಮಗಳನ್ನು ಅಧ್ಯಯನ ಮಾಡಲಾಗುತ್ತಿದೆ. ನಾಲ್ಕು ವರ್ಷಗಳ ಹಿಂದೆ, ಸೌದಿಯಲ್ಲಿರುವ ವಿದೇಶೀಯರು ಮತ್ತು ಅವರ ಅವಲಂಬಿತರಿಗೆ ಮಾಸಿಕ ತೆರಿಗೆ ವಿಧಿಸಲು ಪ್ರಾರಂಭಿಸಲಾಗಿತ್ತು.

ಪ್ರತಿವರ್ಷ ಹೆಚ್ಚುತ್ತಿರುವ ಲೆವಿ ವಿದೇಶಿಯರ ಮೇಲೆ ಭಾರವಾಗಿ ಪರಿಣಮಿಸುತ್ತಿದೆ ಮತ್ತು ಸೌದಿ ಅರೇಬಿಯಾದಲ್ಲಿ ವಾಸಿಸುವ ಹೆಚ್ಚಿನ ಸಂಖ್ಯೆಯ ವಿದೇಶಿ ಕುಟುಂಬಗಳು ತಮ್ಮ ಕೆಲಸವನ್ನು ತ್ಯಜಿಸಿ ಊರಿಗೆ ಮರಳಿದ್ದಾರೆ. ಪೂರ್ವನಿರ್ಧರಿತ ನಿರ್ಧಾರದ ಪ್ರಕಾರ 2020 ರ ವೇಳೆಗೆ ಲೆವಿ ದರ ಹೆಚ್ಚಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಲೆವಿ ಬಗ್ಗೆ ಮರು ಪರಿಶೀಲನೆ ನಡೆಸುವ ಕುರಿತು ಸಚಿವರು ಹೇಳಿಕೆ ನೀಡಿದ್ದಾರೆ.

error: Content is protected !! Not allowed copy content from janadhvani.com