janadhvani

Kannada Online News Paper

ವಿಟ್ಲ : ಸಂಸ್ಥೆಯಲ್ಲಿ ನಡೆದ ಸಯ್ಯದ್ ಕೆ.ಎಸ್ ಆಟಕೋಯ ತಂಙಳ್, ಕುಂಬೊಲ್ ರವರ ನೇತೃತ್ವದ ಸಭೆಯಲ್ಲಿ ದಾರುನ್ನಜಾತ್ ಏಜ್ಯುಕೇಶನಲ್ ಸೆಂಟರ್ ಇದರ ನೂತನ ಅಡಳಿತ ಸಮಿತಿಯನ್ನು ರಚಿಸಲಾಯಿತು.

ಸಂಸ್ಥೆಯ ಶಿಲ್ಪಿ ಮರ್ಹೂಂ ಶೈಖುನಾ ಅಬೂಬಕ್ಕರ್ ಉಸ್ತಾದ್ ಇವರ ವಫಾತ್ ನಿಂದ ತೆರವಾದ ಸ್ಥಾನಕ್ಕೆ ಶೈಖುನಾ ವಾಲೆಮುಂಡೋವು ಉಸ್ತಾದ್ ರವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ದುಬೈ ಝರ್ವಾನಿ ಮಸ್ಜಿದ್ ಇಮಾಂ ಮುಹಮ್ಮದ್ ಮುಸ್ಲಿಯಾರ್ ಬಾಯಾರ್, ಉಪಾಧ್ಯಕ್ಷರಾಗಿ ಸಯ್ಯದ್ ಶಿಹಾಬುದ್ದೀನ್ ತಂಙಳ್ ಮದಕ, ಅಬೂಬಕ್ಕರ್ ಹಾಜಿ ಮಂಜೇಶ್ವರ, ಪ್ರಧಾನ ಕಾರ್ಯದರ್ಶಿ ಯಾಗಿ ಉಸ್ಮಾನ್ ಸಖಾಫಿ ಬಾಳೆಪುಣಿ, ಕಾರ್ಯದರ್ಶಿಗಳಾಗಿ ಅಬ್ದುಲ್ ಹಮೀದ್ ಸಖಾಫಿ ಕೊಡಂಗಾಯಿ, ಸಿರಾಜುದ್ದೀನ್ ಕೆ.ಸಿ.ರೋಡ್, ಕೋಶಾಧಿಕಾರಿ ಯಾಗಿ ಡಾ! ಹಸೈನಾರ್ ಹಾಜಿ, ಜನರಲ್ ಮ್ಯಾನೇಜರ್ ಆಗಿ ಹಮೀದ್ ಹಾಜಿ ಕೊಡಂಗಾಯಿ ಹಾಗೂ ಸಂಘಟನಾ ಕಾರ್ಯದರ್ಶಿಯಾಗಿ ಅಬ್ದುಲ್ ಕಾದರ್ ಫೈಝಿ ಇವರನ್ನು ಆಯ್ಕೆ ಮಾಡಲಾಯಿತು.

ಹಾಗೂ 19 ಮಂದಿಯ ಕಾರ್ಯಾಕಾರಿ ಸಮಿತಿಯ ಸದಸ್ಯರಾಗಿ ಟೆಲಿಫೋನ್ ಅಬೂಬಕ್ಕರ್ ಉಕ್ಕುಡ, ಆದಂ ಹಾಜಿ ಕಾನತ್ತಡ್ಕ, ಹಸೈನಾರ್ ಮುಸ್ಲಿಯಾರ್ ಬಾರೆಬೆಟ್ಟು, ಯೂಸುಫ್ ಸಾಜ, ಉಮರ್ ಸಅದಿ, ಇಬ್ರಾಹಿಂ ಮುಸ್ಲಿಯಾರ್ ಟಿಪ್ಪುನಗರ ಹಾಗೂ ಉಮರ್ ಬಾಕಿಮಾರ್ ವಿಟ್ಲ ಇವರನ್ನು ಆಯ್ಕೆಮಾಡಲಾಯಿತು.

ಸಭೆಯಲ್ಲಿ ದಾರುನ್ನಜಾತ್ ಮುದರ್ರಿಸ್ ಮುಹಮ್ಮದ್ ಫಾಳಿಲಿ ಅಲ್-ಕಾಮಿಲ್ ಸಖಾಫಿ, ಅಬ್ದುರ್ರಹ್ಮಾನ್ ಮುಸ್ಲಿಯಾರ್ ಮುಡಿಪು, ದಾರುನ್ನಜಾತ್ ದುಬೈ ಸಮಿತಿಯ ಅಬ್ದುಲ್ಲಾ ಮುಸ್ಲಿಯಾರ್ ಕುಡ್ತಮುಗೇರು, ಸದರ್ ಮುಅಲ್ಲಿಂ ರಝಾಕ್ ಸಅದಿ ಕೊಡಿಪ್ಪಾಡಿ, ಮುಅಲ್ಲಿಂ ಹಾಫಿಳ್ ಶರೀಫ್ ಮುಸ್ಲಿಯಾರ್ ಮೊದಲಾದವರು ಉಪಸ್ಥಿತರಿದ್ದರು.

ವರದಿ : ಡಿಎ ಮುಹಮ್ಮದ್ ಅಶ್ರಫ್ ಕೊಡಂಗಾಯಿ

error: Content is protected !!
%d bloggers like this: