ಡಿ.13 ರಂದು ಮುಡಿಪು ಎಜುಪಾರ್ಕ್ ನಲ್ಲಿ ಮಾಸಿಕ ಸಖಾಫಿಯ್ಯ ರಾತೀಬ್

ಮುಡಿಪು : ಮಜ್ಲಿಸ್ ಎಜುಪಾರ್ಕ್ ಮುಡಿಪು ಮಾಸಿಕ ಸಖಾಫಿಯ್ಯ ರಾತೀಬ್ ಡಿಸೆಂಬರ್ 13ರಂದು ಮುಡಿಪುವಿನಲ್ಲಿ ನಡೆಯಲಿದೆ. ಪ್ರತಿ ತಿಂಗಳು ನಡೆಸಿ ಬರುವ ಮಾಸಿಕ ಸಖಾಫಿಯ್ಯ ರಾತೀಬ್ ಈ ಬಾರಿ ಡಿಸೆಂಬರ್ 13 ಶುಕ್ರವಾರ ಅಸ್ತಮಿಸಿದ ಶನಿವಾರ ಮಗ್ರಿಬ್ ನಮಾಝಿನ ಬಳಿಕ ನಡೆಯಲಿದೆ.

ಮುಡಿಪು ಎಜುಪಾರ್ಕಿನ ರೂವಾರಿ ಸಯ್ಯದ್ ಮುಹಮ್ಮದ್ ಅಶ್ರಫ್ ಅಸ್ಸಖಾಫ್ ಆದೂರು ತಂಙಳ್ ಹಾಗೂ ಸಯ್ಯದ್ ಜಲಾಲುದ್ದೀನ್ ಜಮಲುಲ್ಲೈಲಿ ತಂಙಳ್ ಪಾತೂರು ರಾತೀಬ್ ನ ನೇತೃತ್ವ ವಹಿಸಲಿದ್ದಾರೆ. ಅಲ್ ಹಾಜ್ ಕೆ.ಪಿ.ಹುಸೈನ್ ಸಅದಿ ಉಸ್ತಾದ್ ಕೆ.ಸಿ.ರೋಡ್ ಅವರು ಮುಖ್ಯ ಪ್ರಭಾಷಣ ನಡೆಸಲಿದ್ದಾರೆ. ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಮಜ್ಲಿಸ್ ಎಜುಪಾರ್ಕ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com
error: Content is protected !!