ಈರುಳ್ಳಿ ದಾಸ್ತಾನು ಮಾಡಲಾಗಿದೆ-ಸಚಿವ ರಾಮ್‌ವಿಲಾಸ್ ಪಾಸ್ವಾನ್

ಹೊಸದಿಲ್ಲಿ: ಸಾಕಷ್ಟು ಪ್ರಮಾಣದಲ್ಲಿ ಈರುಳ್ಳಿಯನ್ನು ದಾಸ್ತಾನು ಮಾಡಲಾಗಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರ, ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ರಾಮ್‌ವಿಲಾಸ್ ಪಾಸ್ವಾನ್ ಹೇಳಿದ್ದಾರೆ.

ಕೇಂದ್ರ ಸರಕಾರ, ಇದುವರೆಗೂ ತ್ರಿಪುರಾ ರಾಜ್ಯಕ್ಕೆ 1.8 ಟನ್, ಹರಿಯಾಣಕ್ಕೆ 2 ಸಾವಿರ ಟನ್, ಆಂಧ್ರಪ್ರದೇಶಕ್ಕೆ 970 ಟನ್‌ಗಳನ್ನು ಪೂರೈಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಪಾಸ್ವಾನ್, ಸೆಪ್ಟೆಂಬರ್ 28ರಿಂದ ನವೆಂಬರ್ 5ರವರೆಗೆ ಪ್ರತಿನಿತ್ಯ ನೂರು ಟನ್‌ಗಳಷ್ಟು ಈರುಳ್ಳಿ ಪೂರೈಸುವಂತೆ ಹೊಸದಿಲ್ಲಿ ಸರಕಾರ ಬೇಡಿಕೆ ಇಟ್ಟಿದ್ದು, ಅದನ್ನು ಪೂರೈಸಲಾಗುವುದು ಎಂದು ಹೇಳಿದ್ದಾರೆ.

ಇದಲ್ಲದೇ, ರಾಜ್ಯಗಳಿಗೆ ಅಗತ್ಯವಿರುವ ಪ್ರಮಾಣದಲ್ಲಿ ಈರುಳ್ಳಿ ಪೂರೈಸಲು ಸರಕಾರ ಸಿದ್ಧವಿದೆ ಎಂದು ರಾಮ್‌ ವಿಲಾಸ್‌ ಪಾಸ್ವಾನ್‌ ಭರವಸೆ ನೀಡಿದ್ದಾರೆ.

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com
error: Content is protected !!