janadhvani

Kannada Online News Paper

ಯುಎಇ ಸ್ವದೇಶೀಕರಣ :ಶೈಖ್ ಹಮ್ದಾನ್ ಬಿನ್ ಮುಹಮ್ಮದ್ ಅಂಗೀಕಾರ

ದುಬೈ: ಯುಎಇಯ ಸ್ವದೇಶೀಕರಣ ಯೋಜನೆಗೆ ಕ್ರೌನ್ ಪ್ರಿನ್ಸ್ ಮತ್ತು ದುಬೈ ಕಾರ್ಯನಿರ್ವಾಹಕ ಮಂಡಳಿಯ ಅಧ್ಯಕ್ಷ ಶೈಖ್ ಹಮ್ದಾನ್ ಬಿನ್ ಮುಹಮ್ಮದ್ ಬಿನ್ ರಾಶಿದ್ ಆಲ್ ಮಕ್ತೂಮ್ ಅಂಗೀಕಾರ ನೀಡಿದ್ದಾರೆ. ಯುಎಇ ಉಪಾಧ್ಯಕ್ಷ, ಪ್ರಧಾನಿ ಮತ್ತು ದುಬೈ ಆಡಳಿತಗಾರ ಶೈಖ್ ಮುಹಮ್ಮದ್ ಬಿನ್ ರಾಶಿದ್ ಆಲ್ ಮಕ್ತೂಮ್ ಅವರ ವೀಕ್ಷಣೆಯಂತೆ ಈ ಕ್ರಮ ಕೈಗೊಳ್ಳಲಾಗಿದೆ.

ದೇಶದ ಎಲ್ಲಾ ನಾಗರಿಕರಿಗೆ ನ್ಯಾಯೋಜಿತವಾದ ಉದ್ಯೋಗವನ್ನು ಖಾತ್ರಿಪಡಿಸುವುದು ನಮ್ಮ ಮೊದಲ ಆದ್ಯತೆಯಾಗಿದೆ ಎಂದು ಶೈಖ್ ಹಮ್ದಾನ್ ಟ್ವೀಟ್ ಮಾಡಿದ್ದಾರೆ. ಪ್ರತಿಯೊಬ್ಬರಿಗೂ ಉದ್ಯೋಗವೆಂಬ ಗುರಿಯನ್ನು ಸಾಧಿಸಬಹುದು. ಯುಎಇಯ ಜನರು ಬಹಳ ಪ್ರತಿಭಾವಂತರು ಮತ್ತು ಅವರ ಸಾಧನೆಗಳ ಬಗ್ಗೆ ಹೆಮ್ಮೆ ಇದೆ ಎಂದು ಶೈಖ್ ಹಮ್ದಾನ್ ಟ್ವೀಟ್ ಮಾಡಿದ್ದಾರೆ.

ಮುಂದಿನ ಹಂತದಲ್ಲಿ ಸ್ವದೇಶೀಕರಣ ಪ್ರಯತ್ನಗಳು ಎದುರಿಸುತ್ತಿರುವ ಸವಾಲುಗಳು ಮತ್ತು ಅಡೆತಡೆಗಳನ್ನು ಪರಿಶೀಲಿಸಲಾಗುತ್ತದೆ ಮತ್ತು ಅವುಗಳನ್ನು ಪರಿಹರಿಸಲು ಪ್ರಯತ್ನಿಸಲಾಗುತ್ತದೆ. ಸಾರ್ವಜನಿಕ ಮತ್ತು ಖಾಸಗಿ ವಲಯಗಳ ಸಹಕಾರ ಈ ಕಾರ್ಯಕ್ಕೆ ಅತ್ಯಗತ್ಯ ಎಂದರು.

ದುಬೈನಲ್ಲಿ ಸ್ವದೇಶಿಕರಣ ಜಾರಿ ಸಂಬಂಧಿಸಿ ಪ್ರಯತ್ನಗಳನ್ನು ಮುನ್ನಡೆಸುವಂತೆ ಶೈಖ್ ಹಮ್ದಾನ್ ಈ ಹಿಂದೆ ಕಾರ್ಯಕಾರಿ ಮಂಡಳಿಯ ಪ್ರಧಾನ ಕಾರ್ಯಾಲಯಕ್ಕೆ ನಿರ್ದೇಶನ ನೀಡಿದ್ದರು. ದುಬೈ ನಾಲೇಜ್ ಮತ್ತು ಮಾನವ ಅಭಿವೃದ್ಧಿ ಪ್ರಾಧಿಕಾರ, ದುಬೈ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆ ಮತ್ತು ವಿವಿಧ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳ ಸಹಯೋಗದೊಂದಿಗೆ ಪ್ರಸ್ತುತ ಸ್ವದೇಶೀಕರಣ ಪ್ರಯತ್ನಗಳು ನಡೆಯುತ್ತಿವೆ.

error: Content is protected !! Not allowed copy content from janadhvani.com