ಮೂಡಬಿದ್ರೆ: SSF ಮೂಡಬಿದ್ರೆ ಡಿವಿಷನ್ ಹಾಗೂ SYS ಕೈಕಂಬ ಸೆಂಟರ್ ವತಿಯಿಂದ ಉತ್ತರ ಕರ್ನಾಟಕದ ನೆರೆ ಸಂತ್ರಸ್ತರ ಮಕ್ಕಳಿಗೆ ಸುಮಾರು ರೂ. 2,30,000 ಮೌಲ್ಯದ ಶಾಲಾ ನೋಟ್ ಪುಸ್ತಕ ಹಾಗೂ ರೂ. 2,00,000 ಮೌಲ್ಯದ ಶಾಲಾ ಬ್ಯಾಗ್ ಬಿಡುಗಡೆ ಮಾಡಲಾಯಿತು.
SSF ಮೂಡಬಿದ್ರೆ ಡಿವಿಷನ್ ಹಾಗೂ SჄS ಕೈಕಂಬ ಸೆಂಟರ್ ನಾಯಕರು ಇತ್ತೀಚೆಗೆ ಪ್ರಕ್ರತಿ ವಿಕೋಪದಿಂದ ತತ್ತರಿಸಿದ ಉತ್ತರ ಕರ್ನಾಟಕದ ಬಾಗಲಕೋಟೆಯ ಕಲಾಡಗಿ, ಮುಧೋಳ್,ಮತ್ತು ಬಾದಾಮಿಯ ನೆರೆ ಸಂತ್ರಸ್ತರಿಗೆ ರೂ. 5 ಲಕ್ಷ
ಮೌಲ್ಯದ ಅಕ್ಕಿ, ಬಟ್ಟೆ ಬರೆಗಳು, ತಿಂಡಿ ತಿನಿಸುಗಳು, ಔಷಧಿಗಳು ಮತ್ತು ವಿವಿಧ ಅಗತ್ಯ ವಸ್ತುಗಳನ್ನು ವಿತರಿಸಿದ್ದಾರೆ.
ಇದೀಗ ಅಲ್ಲಿನ ಶಾಲಾ ಮಕ್ಕಳಿಗೆ ಬೇಕಾಗುವ ಪುಸ್ತಕಗಳು, ಬಟ್ಟೆ ಗಳು, ಆಹಾ ರೋತ್ಪನ್ನಗಳನ್ನು ಸಂಗ್ರಹಿಸಿ, ಅದರಲ್ಲಿ ಕೊಡಗು ಜಿಲ್ಲೆಯ ಕುಶಾಲನಗರದ ದಂಡಿನಪೇಟೆಯ ನೆರೆ ಸಂತ್ರಸ್ತರಿಗೆ ರೂ. 1 ಲಕ್ಷ ಮೌಲ್ಯದ ಅಕ್ಕಿ, ಬಟ್ಟೆ ಬರೆಗಳು, ಪುಸ್ತಕಗಳನ್ನು ಹಂಚಿದ್ದಾರೆ.
2 ನೇ ಬಾರಿಗೆ ಉತ್ತರ ಕರ್ನಾಟಕಕ್ಕೆ ತೆರಳಿದ ನಾಯಕರು, ಬೆಳಗಾವಿ ಜಿಲ್ಲೆಯ ರಾಮ್ ದುರ್ಗ ತಾಲೂಕಿನ ಪಢಕೋತಿಗಲ್ಲಿ, ಕಿಲುಬನೂರ್, ನೇಕಾರ್ಪೇಟೆ ಹಾಗೂ ರೋಣ್ಕಲ್ ಕಪ್ಪ ಎಂಬೀ ಗ್ರಾಮದ ನೆರೆ ಸಂತ್ರಸ್ತರಿಗೆ ರೂ. 5 ಲಕ್ಷ
ಮೌಲ್ಯದ ಅಕ್ಕಿ, ಬಟ್ಟೆ ಬರೆಗಳು ಮತ್ತು 1 ರಿಂದ 10 ನೇ ತರಗತಿಯ 1000 ಮಕ್ಕಳಿಗೆ ಶಾಲಾ ಕಿಟ್ ಹಂಚಿದ್ದಾರೆ.

ಇದೀಗ 3 ನೇ ಬಾರಿಗೆ ಉತ್ತರ ಕರ್ನಾಟಕ ಹಾಗೂ ಕೊಡಗಿನ ನೆರೆ ಸಂತ್ರಸ್ತರ ಶಾಲಾ ಮಕ್ಕಳಿಗಾಗಿ ಸುಮಾರು ರೂ. 2,30,000 ಮೌಲ್ಯದ ಶಾಲಾ ನೋಟ್ ಪುಸ್ತಕ ಹಾಗೂ ರೂ. 2,00,000 ಮೌಲ್ಯದ ಶಾಲಾ ಬ್ಯಾಗ್ ಗಳನ್ನು SSF KARNATAKA EDU KIT ಎಂಬ ನಾಮದಲ್ಲಿ ಮುದ್ರಣಗೊಳಿಸಿದ್ದು ಇದರ ಬಿಡುಗಡೆ ಸಮಾರಂಭವು ಕೈಕಂಬದ ಮೆಗಾ ಪ್ಲಾಝಾ ಹಾಲ್ನಲ್ಲಿ ನಡೆಯಿತು. ಮರ್ಕಝ್ ಚೇರ್ಮ್ಯಾನ್ ಬದ್ರುದ್ದೀನ್ ಅಝ್ಹರಿಯವರು SSF KARNATAKA EDU KIT ಅನ್ನು ಮೆಗಾ ಪ್ಲಾಝಾ ಹಾಲ್ ಮಾಲಕರಾದ ಬಶರಿಯಾರವರಿಗೆ ನೀಡುವ ಮೂಲಕ ಬಿಡುಗಡೆ ಗೊಳಿಸಿದರು.

ಈ ಸಂದರ್ಭದಲ್ಲಿ ನೆರೆ ಸಂತ್ರಸ್ತರ ಪರಿಹಾರದ ಸೂತ್ರಧಾರಿ SSF ಮೂಡಬಿದ್ರೆ ಡಿವಿಶನ್ ಕೋಶಾಧಿಕಾರಿಯೂ ಆದ ನಜೀಬ್ ಕೈಕಂಬ (ಸೆಲೀನ ಟ್ರಾನ್ಸ್ಪೋರ್ಟ್), ಡಿವಿಶನ್ ಅಧ್ಯಕ್ಷರಾದ ರಿಯಾಝ್ ಸಅದಿ ಗುರುಪುರ, ಸಿರಾಜ್ ಎಡಪದವು, ಖಲೀಲ್ ಅಬ್ಬೆಟ್ಟು ಮತ್ತು ಡಿವಿಶನ್ ಕಾರ್ಯಕಾರಿ ಸದಸ್ಯರು ಹಾಗೂ SYS ನಾಯಕರಾದ ಬಶೀರ್ ಎಡಪದವು, ರಝಾಕ್ ಹಾಜಿ ಗಂಜಿಮಠ, ಅಝೀಝ್ ಕೈಕಂಬ, ಶರೀಫಾಕ ಪ್ಲಾಸ್ಟಿಕ್ ಅಡ್ಡೂರು, ಝೈನುದ್ದೀನ್ ಅಡ್ಡೂರು, ಉಮರಬ್ಬ ಅಡ್ಡೂರು, ಜಲೀಲ್ ಅಡ್ಡೂರು, ಶಮೀರ್ ಉಳಾಯಿಬೆಟ್ಟು ಹಾಗೂ ಇತರ ಸದಸ್ಯರು ಉಪಸ್ಥಿತರಿದ್ದರು.
By:ಮೀಡಿಯಾ ವಿಭಾಗ SSF ಮೂಡಬಿದ್ರೆ ಡಿವಿಶನ್















ಇನ್ನಷ್ಟು ಸುದ್ದಿಗಳು
ಬೆಳ್ಳಾರೆ: ದಾರುಲ್ ಹಿಕ್ಮ ಯುನಿಟಿ ಕಾನ್ಕ್ಲೇವ್ ಸಂಪನ್ನ
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ