ಸೌದಿ: ಒಂದು ವರ್ಷ ಕಾಲಾವಧಿಯ ಟೂರಿಸ್ಟ್ ವಿಸಾ- ಸೆಪ್ಟೆಂಬರ್ 27ರಿಂದ ಜಾರಿ

ರಿಯಾದ್: ಸೌದಿಯು ಸೆಪ್ಟೆಂಬರ್ 27ರಿಂದ ಟೂರಿಸ್ಟ್ ವಿಸಾ ಜಾರಿಗೊಳಿಸಲಿದೆ ಎಂದು ವರದಿಯಾಗಿದೆ. ಐವತ್ತೊಂದು ರಾಷ್ಟ್ರಗಳಿಗೆ ಪ್ರಥಮ ಹಂತದಲ್ಲಿ ವಿಸಾ ಅನುಮತಿಸಲಿದ್ದು, ಒಂದು ವರ್ಷ ಕಾಲಾವಧಿಯ ವಿಸಾ ಜಾರಿಯಾಗಲಿದೆ.

ಮುನ್ನೂರು ರಿಯಾಲ್ ವಿಸಾ ಶುಲ್ಕದೊಂದಿಗೆ 140 ರಿಯಾಲ್ ಮೆಡಿಕಲ್ ಇನ್ಸೂರೆನ್ಸ್ ವೆಚ್ಚವನ್ನೂ ಪಾವತಿಸಬೇಕು. ಮುನ್ನೂರ ಅರುವತ್ತು ದಿನ ಕಾಲಾವಧಿ ಮಧ್ಯೆ ಒಂದಕ್ಕಿಂತ ಹೆಚ್ಚಿನ ಬಾರಿ ದೇಶಕ್ಕೆ ಪ್ರವೇಶಿಸುವ ಅವಕಾಶ ದೊರೆಯಲಿದೆ. ಆದರೆ, ಪ್ರತೀ ಬಾರಿಯ ಪ್ರವೇಶದಲ್ಲಿ ಗರಿಷ್ಟ 90 ದಿನಗಳ ವರೆಗೆ ಮಾತ್ರ ತಂಗುವ ಅವಕಾಶ ನೀಡಲಾಗುತ್ತದೆ. ಒಟ್ಟು ಒಂದು ವರ್ಷ ಅವಧಿಯಲ್ಲಿ 180 ದಿನ ಮಾತ್ರ ಸೌದಿಯಲ್ಲಿ ತಂಗಬಹುದಾಗಿದೆ.

ಆನ್ ಲೈನ್ ಮೂಲಕ ವಿಸಾಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಪ್ರತ್ಯೇಕ ಕೆಲವು ರಾಷ್ಟ್ರಗಳ ಪ್ರಜೆಗಳಿಗೆ ವಿಮಾನ ನಿಲ್ದಾಣಗಳಲ್ಲಿ ಆನ್ ಅರೈವಲ್ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದು ವರದಿ ತಿಳಿಸಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಿಲ್ಲ. ಟೂರಿಸ್ಟ್ ವಿಸಾಗೆ ಸಂಬಂಧಿಸಿದಂತೆ ಹೊಸತಾಗಿ ಯಾವುದೇ ತೀರ್ಮಾನ ಕೈಗೊಳ್ಳಲಾಗಿಲ್ಲ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.

Leave a Reply

Your email address will not be published. Required fields are marked *

error: Content is protected !!