ಉಮ್ರಾ ವಂಚನೆ ಮತ್ತು ಏಜೆಂಟರ ಹಸ್ತಕ್ಷೇಪಕ್ಕೆ ಕಡಿವಾಣ ಹಾಕಿದ ಸೌದಿ ಸರ್ಕಾರ

ರಿಯಾದ್: ಉಮ್ರಾ ವಂಚನೆಗಳಿಗೆ ಕಡಿವಾಣ ಹಾಕಲು ಮತ್ತು ಸೇವೆಯನ್ನು ಅಂತರ್‌ರಾಷ್ಟ್ರೀಯ ಮಾನದಂಡಗಳಿಗೆ ಏರಿಸುವ ಗುರಿಯನ್ನು ಹೊಂದಿರುವ ಸೌದಿ ಅರೇಬಿಯಾದ ಹೊಸ ಯೋಜನೆಯು ಉಮ್ರಾ ಯಾತ್ರಿಕರಿಗೆ ಪ್ರಯೋಜನವನ್ನು ನೀಡಲಿದೆ. ಅದೇ ಸಮಯದಲ್ಲಿ, ಉಮ್ರಾ ತೀರ್ಥಯಾತ್ರೆಯ ಭಾಗವಾಗಿ ದೇಶದಲ್ಲೂ, ವಿದೇಶಗಳಲ್ಲಿಯೂ ಕೆಲಸ ಮಾಡುವವರ ಮೇಲೆ ಪರಿಣಾಮ ಬೀರಲಿದೆ. ಹೊಸ ನಿಯಮಗಳ ಪ್ರಕಾರ ಉಮ್ರಾ ವೀಸಾ ಪಡೆಯಲು ಯಾತ್ರಿಕರು ಪ್ರಯಾಣ ಮತ್ತು ವಸತಿ ವೆಚ್ಚವನ್ನು ಮುಂಗಡವಾಗಿ ಪಾವತಿಸಬೇಕು.

ಹಣ ಪಾವತಿಸಲು ಮತ್ತು ಹೋಟೆಲ್‌ಗಳು ಮತ್ತು ಪ್ರಯಾಣದ ವಿಧಾನಗಳನ್ನು ಆಯ್ಕೆ ಮಾಡಲು ವಿಶೇಷ ಪೋರ್ಟಲ್ ತೆರೆಯಲಾಗಿದ್ದು, ಇದರ ನವೀಕರಣವು ಪ್ರಗತಿಯಲ್ಲಿದೆ. ಹೊಸ ಪೋರ್ಟಲ್‌ನಲ್ಲಿ ಪ್ರಸ್ತುತ ತ್ರೀಸ್ಟಾರ್ ಮತ್ತು ಫೋರ್‌ಸ್ಟಾರ್ ಹೋಟೆಲ್ಗಳು ಮಾತ್ರ ಲಭ್ಯವಿದೆ. ನವೀಕರಣ ಪೂರ್ಣಗೊಂಡ ಬಳಿಕ, ಹೆಚ್ಚಿನ ಹೋಟೆಲ್‌ಗಳು ಲಭ್ಯವಾಗಲಿವೆ. ಉಮ್ರಾ ಪ್ರಯಾಣದ ವಿಧಾನವನ್ನೂ ಇಲ್ಲಿ ಆರಿಸಬಹುದಾಗಿದೆ. ವೀಸಾ ಪಡೆಯುವುದಕ್ಕೆ ಹಣ ಮುಂಗಡ ಪಾವತಿಸುವುದು ಕಡ್ಡಾಯ. ಪಾವತಿಸಿದ ನಂತರ ಲಭಿಸುವ ರಸೀದಿಯೊಂದಿಗೆ ಅರ್ಜಿ ಸಲ್ಲಿಸಿದರೆ ಮಾತ್ರ ಉಮ್ರಾ ವೀಸಾವನ್ನು ಅನುಮತಿಸಲಾಗುತ್ತದೆ. ಉಮ್ರಾ ವೀಸಾಗೆ ಹಣ ಪಾವತಿಸಿ ನಂತರ ಪ್ರವಾಸವನ್ನು ರದ್ದುಗೊಳಿಸಿದರೆ, ಹಣ ಮರುಪಾವತಿ ಮಾಡಲಾಗುವುದಿಲ್ಲ.

ಯಾತ್ರಾರ್ಥಿಗಳ ಹಣ ಪಾವತಿಸಿದರೆ ಮಾತ್ರ ಉಮ್ರಾ ವೀಸಾ ದೊರೆಯಲಿದ್ದು,
ಜಿದ್ದಾ ಮುಂತಾದೆಡೆ ವಿದೇಶಿಯರು ತಮ್ಮ ಕುಟುಂಬಗಳನ್ನು ಉಮ್ರಾ ವೀಸಾಗಳಲ್ಲಿ ಕರೆತಂದು ವಾಸವಿರುವ ಬಗ್ಗೆ ಹಜ್ ಉಮ್ರಾ ಸಚಿವಾಲಯ ಗಮನಿಸಿದೆ. ಹೋಟೆಲ್ ಶುಲ್ಕ ಮತ್ತು ವಾಹನ ಬಾಡಿಗೆಯನ್ನು ಮುಂಚಿತವಾಗಿ ಪಾವತಿಸಬೇಕಾಗಿರುವುದರಿಂದ, ಉಮ್ರಾ ವೀಸಾದಲ್ಲಿ ಕುಟುಂಬಕ್ಕೆ ಅವಕಾಶ ಕಲ್ಪಿಸುವ ವಿಧಾನವನ್ನು ನಿರ್ಬಂಧಿಸಲಾಗುತ್ತಿದೆ. ಕಾರಣ ಉಮ್ರಾ ವೀಸಾವನ್ನು ಕಾಯ್ದಿರಿಸುವಾಗ, ದೊಡ್ಡ ಮೊತ್ತದ ಶುಲ್ಕದೊಂದಿಗೆ ಹೋಟೆಲ್ ಅನ್ನು ಕಾಯ್ದಿರಿಸಬೇಕಾಗುತ್ತದೆ. ಸಾಮಾನ್ಯರಿಗೆ ಸ್ಟಾರ್ ಹೊಟೇಲ್ ಗಳ ದೊಡ್ಡ ಮೊತ್ತವನ್ನು ಪಾವತಿಸಲು ಸಾಧ್ಯವಿಲ್ಲ. ಈ ಮೊತ್ತವನ್ನು ಪಾವತಿಸಿದರೆ ಮಾತ್ರ ವೀಸಾ ಲಭ್ಯವಾಗಲಿದೆ.

ಏಜೆನ್ಸಿಗಳು ಊರಿನಿಂದ ಯಾತ್ರಿಕರ ಹಣವನ್ನು ಪಾವತಿಸದೆ ಉಮ್ರಾದಲ್ಲಿ ಬಂದವರು ಮೋಸ ಹೋಗುವುದು ವ್ಯಾಪಕವಾಗಿತ್ತು. ಏಜೆನ್ಸಿಗಳು ತಿಂಗಳ ಹಿಂದೆಯೇ ಉಮ್ರಾ ಯಾತ್ರಿಕರಿಂದ ಹಣವನ್ನು ಸಂಗ್ರಹಿಸುತ್ತಾರೆ. ಕೆಲವರು ಈ ಹಣದಲ್ಲಿ ಇತರ ವ್ಯವಹಾರವನ್ನೂ ಮಾಡುತ್ತಾರೆ. ಈ ಕಾರಣಕ್ಕಾಗಿ ನೂರಾರು ಜನರು ಈ ವರ್ಷ ಮಕ್ಕಾ ಮತ್ತು ಮದೀನಾದಲ್ಲಿ ಇಕ್ಕಟ್ಟಿಗೆ ಸಿಲುಕಿದ್ದರು. ವಿವಿಧ ವಿದೇಶ ರಾಷ್ಟ್ರಗಳಿಂದ ಇದೇ ರೀತಿಯ ದೂರುಗಳು ಮತ್ತು ಕಳಪೆ ವಸತಿ ಸೌಕರ್ಯಗಳನ್ನು ನೀಡಿದ ಕಾರಣಕ್ಕಾಗಿ ಹೊಸ ವ್ಯವಸ್ಥೆಯನ್ನು ಸ್ಥಾಪಿಸಲಾಗಿದೆ.

ಯಾತ್ರಾರ್ಥಿಗಳ ಹಣ ಪಾವತಿಸಿದರೆ ಮಾತ್ರ ಉಮ್ರಾ ವೀಸಾ ದೊರೆಯಲಿದೆ.
ಸೌದಿ ಹಜ್ ಉಮ್ರಾ ಸಚಿವಾಲಯದ ವೆಬ್‌ಸೈಟ್ https://www.haj.gov.sa/ದಲ್ಲಿ ಉಮ್ರಾ ವೀಸಾಗೆ ವಿಶೇಷ ಲಿಂಕ್ ಒದಗಿಸಿದೆ. ಇದರ ನವೀಕರಣ ಪೂರ್ಣಗೊಂಡ ನಂತರ ಯಾರಿಗೆ ಬೇಕಾದರೂ ನೇರವಾಗಿ ವೀಸಾಕ್ಕೆ ಅರ್ಜಿ ಸಲ್ಲಿಸಬಹುದು. ನಂತರ ಬರುವ ತೊಂದರೆಗಳನ್ನು ಪರಿಗಣಿಸಿ, ಉಮ್ರಾಕ್ಕೆ ಬರುವವರು ಏಜೆಂಟರ ಮುಖಾಂತರ ಉಮ್ರಾಗೆ ಹೋಗುತ್ತಾರೆ.

ಊರಿನ ಉಮ್ರಾ ಏಜೆನ್ಸಿಗಳು ಸೌದಿ ಅರೇಬಿಯಾದ ಉಮ್ರಾ ಏಜೆನ್ಸಿಯೊಂದಿಗೆ ಕೈಜೋಡಿಸಿ ಕಾರ್ಯಾಚರಿಸುತ್ತಿವೆ. ಅಂದರೆ, ಸೌದಿ ಆಡಳಿತದ ಮುಂದೆ ಯಾತ್ರಾರ್ಥಿಗಳ ಉಸ್ತುವಾರಿಯು ಸೌದಿ ಉಮ್ರಾ ಏಜೆಂಟ್ ಆಗಿದೆ. ಅವರ ಪ್ರಯಾಣ ಮತ್ತು ಸೌಕರ್ಯಗಳಿಗೆ ಸೌದಿ ಏಜೆಂಟರು ಜವಾಬ್ದಾರರಾಗಿರುತ್ತಾರೆ. ಅವರ ಮರಳುವಿಕೆಯನ್ನು ಖಚಿತಪಡಿಸಿಕೊಳ್ಳುವುದು ಕೂಡ ಸೌದಿ ಏಜೆಂಟರ ಜವಾಬ್ದಾರಿಯಾಗಿದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಊರಿನ ಏಜೆಂಟರು ಮೋಸ ಮಾಡಿದರೂ ಕೂಡ, ಉಮ್ರಾ ಯಾತ್ರಾರ್ಥಿಗಳನ್ನು ವಾಪಸ್ ಕಳುಹಿಸುವುದು ಸೌದಿ ಏಜೆಂಟರ ಕರ್ತವ್ಯವಾಗಿದೆ. ನಂತರ, ಅವರು ಊರಿನ ಏಜೆಂಟರ ಪರವಾನಗಿಯನ್ನು ರದ್ದುಗೊಳಿಸುತ್ತಾರೆ. ಆದರೆ ಸೌದಿಯ ಏಜೆಂಟ್ ನಷ್ಟವನ್ನು ಹೊರಿಸಿಕೊಳ್ಳಬೇಕಾಗುತ್ತದೆ. ಇವೆಲ್ಲಕ್ಕೂ ಹೊಸ ವ್ಯವಸ್ಥೆ ಪರಿಹಾರವಾಗಲಿದೆ.

ಯಾತ್ರಿಕರನ್ನು ಸ್ಥಳಾಂತರಿಸುವ ವಿಧಾನ ಕೂಡ ಕೊನೆಗೊಳ್ಳಲಿದೆ. ಅತ್ಯುತ್ತಮ ಹೋಟೆಲ್‌ಗಳು ಮತ್ತು ವಾಹನಗಳು ಮಾತ್ರ ಉಮ್ರಾ ಪೋರ್ಟಲ್‌ನಲ್ಲಿ ಲಭ್ಯವಾಗಲಿವೆ. ಪ್ರತಿ ಯಾತ್ರಿಕರಿಗೆ ಉತ್ತಮ ಸೇವೆ ಲಭ್ಯವಾಗಲಿದೆ. ಉಮ್ರಾ ವೀಸಾಕ್ಕಾಗಿ ಹಣ ಪಾವತಿಸಿ, ಹೋಟೆಲ್ ಮತ್ತು ವಾಹನವನ್ನು ಕಾಯ್ದಿರಿಸಿ ನಂತರ ಅದನ್ನು ರದ್ದುಗೊಳಿಸಿದರೆ, ಯಾವುದೇ ಮರುಪಾವತಿ ಸಾಧ್ಯವಿಲ್ಲ. ಹಣ ಪಾವತಿಯು ಬ್ಯಾಂಕ್ ಮೂಲಕ ರವಾನೆಯಾಗುತ್ತದೆ.

ಹೊಸ ಪೋರ್ಟಲ್‌ನಲ್ಲಿ ಉನ್ನತ ಸೇವಾ ಸೌಕರ್ಯಗಳನ್ನು ಹೊಂದಿದ ಹೋಟೆಲ್‌ಗಳು ಮಾತ್ರ ಲಭ್ಯವಿದೆ. ಈ ಕಾರಣಕ್ಕಾಗಿ ಉಮ್ರಾ ವೀಸಾಗಳ ವಿತರಣೆಯನ್ನು ವಿಳಂಬಗೊಳಿಸುತ್ತದೆ ಎಂದು ಊರಿನ ಏಜೆಂಟರು ಹೇಳುತ್ತಾರೆ. ಪೋರ್ಟಲ್ ವ್ಯವಸ್ಥೆಯು ಕೆಲವೇ ದಿನಗಳಲ್ಲಿ ಸಂಪೂರ್ಣವಾಗಿ ಕಾರ್ಯನಿರ್ವಹಿಸಲಿದೆ. ಇದು ವೀಸಾಗಳನ್ನು ನೀಡುವ ಬಗೆಗಿನ ಅನುಮಾನಗಳನ್ನು ನಿವಾರಿಸಲಿದೆ.

ಇದಲ್ಲದೆ, ಸೌದಿಯಿಂದ ಉಮ್ರಾಕ್ಕೆ ಪ್ರಯಾಣಿಸುವವರಿಗೂ ನೋಂದಣಿ ಕಡ್ಡಾಯಗೊಳಿಸಲಾಗಿದೆ. ಈ ಕುರಿತು ವಿವರಗಳನ್ನು ಶೀಘ್ರದಲ್ಲೇ ಪೋರ್ಟಲ್‌ನಲ್ಲಿ ಲಭ್ಯಗೊಳಿಸಲಾಗುವುದು ಎಂದು ವರದಿಯು ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!