ಬೆಂಗಳೂರು:”ಬೇಕಾದ್ರೆ ನಾನು ನನ್ನ ಸ್ಥಾನಕ್ಕೆ ರಾಜೀನಾಮೆ ನೀಡ್ತೇನೆ, ತಾಕತ್ತಿದ್ರೆ ಮತ್ತೆ ಚುನಾವಣೆ ನಡೆಸಿ” ಅಂತ ಸವಾಲೆಸೆದು ಹೈಕಮಾಂಡ್ ವಿರುದ್ಧ ಸಿಎಂ ಯಡಿಯೂರಪ್ಪ ತಿರುಗಿಬಿದ್ದಿದ್ದಾರೆ. ಬಿಎಸ್ವೈ ಹೈ ಕಮಾಂಡ್ ಮೇಲೆ ಇಷ್ಟೊಂದು ಗರಂ ಆಗೋದಕ್ಕೆ ಕಾರಣವಾದ್ರು ಏನು ಅಂದ್ರೆ, ಅಮಿತ್ ಶಾ ಯಡಿಯೂರಪ್ಪರನ್ನು ನಿರ್ಲಕ್ಷ್ಯ ಮಾಡ್ತಿರೋದು. ಹೀಗಂತ ಸ್ವತಃ ಯಡಿಯೂರಪ್ಪನವ್ರೆ ದೆಹಲಿ ಆರ್ ಎಸ್ ಎಸ್ ಕಚೇರಿಯಲ್ಲಿ ಹೇಳಿಕೊಂಡಿದ್ದಾರೆ.
ಹೌದು, ಅಮಿತ್ ಶಾ ಯಡಿಯೂರಪ್ಪರ ಭೇಟಿಗೆ ಅವಕಾಶ ಕೊಡ್ತಿಲ್ಲ. ಮನಸ್ಸಿಗೆ ಬಂದಂತೆ ಸಚಿವರ ಪಟ್ಟಿಯನ್ನು ಕಳಿಸ್ತಿದ್ದಾರೆ. ಸರ್ಕಾರ ಅಧಿಕಾರಕ್ಕೆ ಬರಲು ನಾನು ಪಟ್ಟ ಶ್ರಮ ಹೇಳತೀರದು ಆದರೆ ನನ್ನನ್ನು ಅವಮಾನ ಮಾಡಲಾಗ್ತಿದೆ. ಯಾರಿಗೋ ಮಂತ್ರಿ ಮಾಡಿ ಅನ್ನುತ್ತಾರೆ ನನಗೆ ಇಷ್ಟ ಇಲ್ಲದೇ ಇದ್ದರೂ ಸವದಿಯನ್ನು ಮಂತ್ರಿ ಮಾಡಿದೆ ಉಮೇಶ್ ಕತ್ತಿ, ನಿರಾಣಿ, ಉದಾಸಿ ಅಂಥವರನ್ನೂ ದೂರ ಮಾಡಿಕೊಂಡೆ. ಕರಾವಳಿಯ ಎಸ್ ಅಂಗಾರ, ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೂ ಮಂತ್ರಿ ಸ್ಥಾನಕ್ಕೆ ಅನುಮೋದನೆ ಕೊಡಲಿಲ್ಲ. ಪೂರ್ಣಿಮಾಗೆ ಮಂತ್ರಿ ಮಾಡಿ ಅಂದ್ರೆ ಶಶಿಕಲಾ ಜೊಲ್ಲೆ ಹೆಸರು ಹೇಳ್ತಾರೆ ಅಂತ ದೆಹಲಿಯ ಆರ್ಎಸ್ಎಸ್ ವರಿಷ್ಠ ಅರುಣ್ ಕುಮಾರ್ ಬಳಿ ಬೇಸರ ತೋಡಿಕೊಂಡಿದ್ದಾರೆ
ದೆಹಲಿಗೆ ತೆರಳಿದ್ದ ವೇಳೆ, ಅರುಣ್ ಕುಮಾರ್ರನ್ನು ಭೇಟಿಯಾಗಿ ಅವ್ರ ಬಳಿ ಸುದೀರ್ಘ ಮಾತುಕತೆ ನಡೆಸಿದ್ದಾರೆ. ಅರುಣ್ ಕುಮಾರ್ ದೆಹಲಿ ಬಿಜೆಪಿ ಸರ್ಕಾರ ಮತ್ತು ಆರ್ಎಸ್ಎಸ್ ನಡುವಿನ ಮಹತ್ವದ ಕೊಂಡಿಯಂತೆ ಕಾರ್ಯನಿರ್ವಃಣೆ ಮಾಡುತ್ತಿರೋ ವರಿಷ್ಠ ನಾಯಕರಾಗಿದ್ದು, ನಾನು ಯಾವ ಕಾರಣಕ್ಕೂ ಇವರಿಗೆ ಡಿಸಿಎಂ ಕೊಡಲ್ಲ. ಇವರು ನನ್ನನ್ನು ಈ ರೀತಿ ಕೆಟ್ಟದಾಗಿ ನಡೆಸಿಕೊಂಡರೆ ನಾನು ರಾಜೀನಾಮೆ ನೀಡುತ್ತೇನೆ, ಹೊಸದಾಗಿ ಚುನಾವಣೆ ನಡೆಸಿ, ತಾಕತ್ತಿದ್ದರೆ ಬಿಜೆಪಿಯನ್ನು ಅಧಿಕಾರಕ್ಕೆ ತರಲಿ ಎಂದು ಅರುಣ್ ಕುಮಾರ್ ಬಳಿ ಯಡಿಯೂರಪ್ಪ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.















ಇನ್ನಷ್ಟು ಸುದ್ದಿಗಳು
ರಾಜ್ಯ ಸರ್ಕಾರಕ್ಕೆ ದಕ್ಷಿಣ ಕನ್ನಡ ಜಿಲ್ಲಾ ವಖ್ಫ್ ಸಲಹಾ ಸಮಿತಿಯಿಂದ ಅಭಿನಂದನೆಗಳು
ನೌಕರರ ಮಿಂಚಿನ ಮುಷ್ಕರ : ಅಂತಾರಾಷ್ಟ್ರೀಯ ವಿಮಾನಯಾನ ರದ್ದು
ಭಜರಂಗದಳ ಮಾಜಿ ರಾಜ್ಯ ಸಂಚಾಲಕ ರಘು ಪರಾರಿ
‘ಎನ್ ಹಾನ್ಸ್ ಇಂಡಿಯಾ ಕಾನ್ಫರೆನ್ಸ್’- ಮಂಗಳೂರಿನ ಸಮಾವೇಶಕ್ಕೆ ಕ್ಷಣಗಣನೆ
ಖುರ್ಆನ್ ದುರ್ವ್ಯಾಖ್ಯಾನಕಾರರಿಂದ ಇಸ್ಲಾಂಗೆ ಭಾರೀ ಹಾನಿಯುಂಟಾಗುತ್ತಿದೆ- ಡಾ. ಝೈನೀ ಕಾಮಿಲ್
ಪಬ್ಲಿಕ್ ಟಿವಿಯ ರಂಗನಾಥ್ ವಿರುದ್ಧ ಜಾಮೀನು ರಹಿತ ಪ್ರಕರಣ ದಾಖಲಿಸುವಂತೆ ನ್ಯಾಯಾಲಯ ಆದೇಶ
‘ಕೈ’ ಪಾಲಯಕ್ಕೆ ಸಿಎಂ ಇಬ್ರಾಹಿಂ ಗುಡ್ ಬೈ – ಜೆಡಿಎಸ್ ಸೇರುವುದು ಖಚಿತ.?
ಮದ್ರಸಾಗಳಲ್ಲಿ, ಜನಗಳ ಮಧ್ಯೆ ಸೌಹಾರ್ದ, ಸಹಬಾಳ್ವೆ, ಭ್ರಾತೃತ್ವ ಸಂಬಂಧಗಳನ್ನು ಬೆಳೆಸಲು ಕಲಿಸಲಾಗುತ್ತಿದೆ- ರಾಜ್ಯ ಸರ್ಕಾರ
ರೌಳತುಲ್ ಉಲೂಂ ಓಲ್ಡ್ ಸ್ಟೂಡೆಂಟ್ಸ್ ಉಕ್ಕುಡ ಆಯೋಜಿಸಿದ ಸ್ನೇಹ ಸಂಗಮ
ರಾಜ್ಯದಲ್ಲಿ ನೈಟ್ ಕರ್ಪ್ಯೂ- ರಾತ್ರಿ 10 ರಿಂದ ಯಾವುದೇ ವಾಹನಗಳ ಓಡಾಟಕ್ಕೆ ಅವಕಾಶವಿಲ್ಲ