ಮಕ್ಕಾ: ಮಸ್ಜಿದುಲ್ ಹರಾಮಿನ ವಿವಿಧ ದಿಕ್ಕುಗಳಲ್ಲಿ ನೆರಳು ನೀಡುವ ಕೊಡೆಗಳನ್ನು ರಮಝಾನಿನ ಮುಂಚಿತವಾಗಿ ಸ್ಥಾಪಿಸಲಾಗುತ್ತಿದೆ. ಈ ಮೂಲಕ ತೀರ್ಥ ಯಾತ್ರಿಕರಿಗೆ ಬಿಸಿಲ ತಾಪದಿಂದ ರಕ್ಷಣೆ ದೊರೆಯಲಿದೆ.
ವಿಶ್ವದ ಅತೀ ದೊಡ್ಡ ಕೊಡೆಗಳನ್ನು ಮದೀನಾದ ಮಸ್ಜಿದುನ್ನಬವಿಯ ಮುಂದುಗಡೆ ಸ್ಥಾಪಿಸಲಾಗಿದ್ದು, ಅದನ್ನು ಅವಶ್ಯಾನುಸಾರವಾಗಿ ತೆರೆಯುವುದು ಮತ್ತು ಮಡಚುವುದು ಸಾಧ್ಯವಿದೆ. ಇದೇ ರೀತಿಯ ಕೊಡೆಗಳನ್ನು ಮಕ್ಕಾದ ಮಸೀದಿ ಮುಂಭಾಗ ಮತ್ತು ಮಹಡಿಯಲ್ಲೂ ಸ್ಥಾಪಿಸಲಾಗುವುದು ಎಂದು ಹರಮ್ಗಳ ಕಾರ್ಯಾಂಗ ವಿಭಾಗ ತಿಳಿಸಿದೆ.
ಮೂರನೇ ಹಂತದ ಅಭಿವೃದ್ಧಿ ಕಾಮಗಾರಿ ನಡೆಯುವ ಕಡೆಗಳಲ್ಲಿ ಈ ಕೊಡೆಗಳನ್ನು ಸ್ಥಾಪಿಸಲಾಗುತ್ತಿದ್ದು, ನಂತರ ಇತರ ಕಡೆಗಳಲ್ಲೂ ಸ್ಥಾಪಿಸಲಾಗುವುದು. ರಮಝಾನ್ಗೆ ಮುಂಚಿತವಾಗಿ ಕೊಡೆ ಸ್ಥಾಪಿಸುವ ಕಾಮಗಾರಿ ಮುಗಿಯಲಿದೆ ಎಂದು ಕಾರ್ಯಾಲಯ ವಿಭಾಗ ತಿಳಿಸಿದೆ.















ಇನ್ನಷ್ಟು ಸುದ್ದಿಗಳು
ಸೌದಿ ಅರೇಬಿಯಾ ವಿರುದ್ಧ ಹೌತಿಗಳ ದಾಳಿ; 73 ನಾಗರಿಕರಿಗೆ ಗಾಯ
ಹಾರ್ಮುಜ್ ತೆರೆಯುವುದಕ್ಕೆ ಆದ್ಯತೆ; ಬಿಕ್ಕಟ್ಟು ಮುಂದುವರಿದರೆ ಕೈಗಾರಿಕಾ ದುರಂತ- ಕತಾರ್
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ
ನಿಖರವಲ್ಲದ ಸುದ್ದಿ ಹಂಚಿಕೊಂಡರೆ ಅಪಾಯ- ನಕಲಿ ಸುದ್ದಿಗಳ ವಿರುದ್ಧ ಸೌದಿಯಲ್ಲಿ ಎಚ್ಚರಿಕೆ