ದುಬೈ: ದುಬೈ ಶಾರ್ಜಾ ನಡುವೆ ಫೆರ್ರಿ ಸೇವೆಯನ್ನು ಪ್ರಾರಂಭಿಸಲಾಗುತ್ತಿದೆ. ದುಬೈ ರಸ್ತೆ ಮತ್ತು ಸಾರಿಗೆ ಇಲಾಖೆ (ಆರ್ಟಿಎ) ವತಿಯಿಂದ ದಿನನಿತ್ಯ 42 ಫೆರ್ರಿ ಸೇವೆಗಳನ್ನು ಒದಗಿಸಲಾಗುತ್ತದೆ.
ಯಾತ್ರಾ ಸಮಯವು 35 ನಿಮಿಷವಾಗಿದ್ದು, ಪ್ರತೀ ಯಾತ್ರೆಯಲ್ಲಿ 125 ಯಾತ್ರಿಕರಿಗೆ ಸಂಚರಿಸಬಹುದಾಗಿದೆ. ದುಬೈ ಶಾರ್ಜಾ ನಡುವಿನ ಸಾರಿಗೆ ದಟ್ಟಣೆಗೆ ಈ ಮೂಲಕ ಪಾರಿಹಾರವಾಗಲಿದೆ ಎನ್ನಲಾಗಿದೆ.
ಸಿಲ್ವರ್ ಕ್ಲಾಸ್ಗೆ 15 , ಗೋಲ್ಡ್ ಕ್ಲಾಸ್ಗೆ 25 ದಿರ್ಹಂ ಯಾತ್ರಾ ದರವನ್ನು ನಿಗದಿ ಪಡಿಸಲಾಗಿದೆ.ಶಾರ್ಜಾ ಅಕ್ವೇರಿಯಂ ಮರೈನ್ ಫೆರ್ರಿ ಸ್ಟೇಷನ್ ನಿಂದ ಬೆಳಿಗ್ಗೆ ಐದು ಗಂಟೆಗೆ ಮತ್ತು ದುಬೈ ಅಲ್ ಗುಬೈಬಾ ಸ್ಟೇಷನ್ ನಿಂದ ಬೆಳಿಗ್ಗೆ 5:15 ಕ್ಕೆ ಸೇವೆ ಆರಂಭಗೊಳ್ಳಲಿದೆ.ಬೆಳಗ್ಗೆ ಮತ್ತು ಸಂಜೆ ಹೊತ್ತು ದಟ್ಟಣೆಯ ಅವಧಿಯಲ್ಲಿ ಅರ್ಧ ಗಂಟೆಗೊಮ್ಮೆ ಸೇವೆ ಲಭ್ಯವಾಗಲಿದ್ದು, ಉಳಿದ ವೇಳೆ ಒಂದೂವರೆ ಗಂಟೆಗೊಮ್ಮೆ ಸೇವೆ ಲಭ್ಯವಾಗಲಿದೆ. ಶಾರ್ಜಾ ಸ್ಟೇಷನ್ ನಲ್ಲಿ ಉಚಿತ ವಾಹನ ಪಾರ್ಕಿಂಗ್ ವ್ಯವಸ್ಥೆ ಲಭ್ಯವಿದೆ. ಐದು ವರ್ಷದ ಕೆಳಗಿನ ಮಕ್ಕಳಿಗೆ ಉಚಿತ ಪ್ರಯಾಣ.















ಇನ್ನಷ್ಟು ಸುದ್ದಿಗಳು
ದುಬೈ-ಇಸ್ರೇಲ್ ವಿಮಾನದಲ್ಲಿ ಪೈಲಟ್ಗಳ ನಡುವೆ ಸಂಘರ್ಷ : ಸೌದಿಯಲ್ಲಿ ತುರ್ತು ಭೂಸ್ಪರ್ಶ
ಅಣು-ವಿಕಿರಣ ಸೋರಿಕೆಯಾದರೆ ಏನು ಮಾಡಬೇಕು?; ಜಾಗರೂಕತೆಯ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದ CDAA
ಒಮಾನ್:ಕಾರ್ಮಿಕ ಕಾಯ್ದೆ ಉಲ್ಲಂಘನೆ ವಿರುದ್ಧ ಕಠಿಣ ಕ್ರಮ- ಫೀಲ್ಡ್ ತಪಾಸಣೆಗೆ ಮುಂದಾದ ಕಾರ್ಮಿಕ ಸಚಿವಾಲಯ
ರಸ್ತೆ ಬದಿಯ ಪೈಪ್ ಸರಿಪಡಿಸಿದ ಭಾರತೀಯ ಡೆಲಿವರಿ ಯುವಕ – ದುಬೈ ಸರ್ಕಾರದ ಗೌರವ
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಸೌದಿ ಅರೇಬಿಯಾ ವಿರುದ್ಧ ಹೌತಿಗಳ ದಾಳಿ; 73 ನಾಗರಿಕರಿಗೆ ಗಾಯ
ಹಾರ್ಮುಜ್ ತೆರೆಯುವುದಕ್ಕೆ ಆದ್ಯತೆ; ಬಿಕ್ಕಟ್ಟು ಮುಂದುವರಿದರೆ ಕೈಗಾರಿಕಾ ದುರಂತ- ಕತಾರ್
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ