ಮುಖ್ಯಮಂತ್ರಿ ಮಂಡಿಸಲಿರುವ ವಿಶ್ವಾಸಮತದಲ್ಲಿ ಗೆದ್ದೇ ಗೆಲ್ತೀವಿ-ಡಿ.ಕೆ.ಶಿ

ಬೆಂಗಳೂರು: ಮೈತ್ರಿ ಸರಕಾರ ಸುಭದ್ರವಾಗಿದೆ. ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮಂಡಿಸಲಿರೋ ವಿಶ್ವಾಸಮತದಲ್ಲಿ ಗೆದ್ದೇ ಗೆಲ್ತೀವಿ. ಹೀಗಂತ ಸಚಿವ ಡಿ.ಕೆ.ಶಿವಕುಮಾರ್ ಭರವಸೆ ವ್ಯಕ್ತಪಡಿಸಿದ್ದಾರೆ.

ಗುರುವಾರ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವಿಶ್ವಾಸಮತ ಯಾಚನೆ ಮಾಡಲಿದ್ದು, ಮೈತ್ರಿ ಸರಕಾರ ಗೆದ್ದು ಅವಧಿ ಪೂರ್ಣಗೊಳಿಸಲಿದೆ ಎಂದ್ರು.

ವಿಶ್ವಾಸ ಮತ ಸಂದರ್ಭದಲ್ಲಿ ಕಾಂಗ್ರೆಸ್ ನ ಯಾವ ಶಾಸಕರೂ ಸದನಕ್ಕೆ ಗೈರಾಗಲ್ಲ. ಅಲ್ಲದೆ ಯಾರೂ ವಿಪ್ ಉಲ್ಲಂಘನೆ ಕೂಡ ಮಾಡೋಲ್ಲ. ಎಲ್ರೂ ಸದನಕ್ಕೆ ಬರುತ್ತಾರೆ ಎಂದ್ರು.

ಬಿ.ಎಸ್. ಯಡಿಯೂರಪ್ಪನವರು ಸುಪ್ರೀಂ ಕೋರ್ಟ್ ನ ತೀರ್ಪು ಯಾವಾಗಲಾದರೂ ಬರಲಿ. ಆದ್ರೆ ಇಂದೇ ವಿಶ್ವಾಸ ಮತ ಯಾಚನೆ ಮಾಡಬೇಕು ಎಂದಿದ್ರು. ಆದರೆ ಮೂರು ಪಕ್ಷಗಳ ಜತೆ ಸಭೆ ನಡೆಸಿದ ಸ್ಪೀಕರ್ ಗುರುವಾರ 11 ಗಂಟೆಗೆ ವಿಶ್ವಾಸಮತ ಯಾಚನೆಗೆ ಸಮಯ ನಿಗದಿ ಮಾಡಿದ್ರು.

Leave a Reply

Your email address will not be published. Required fields are marked *

error: Content is protected !!