ಮರ್ಕಿನ್ಸ್ ವಿದ್ಯಾಸಂಸ್ಥೆ: ಮಜ್ಲಿಸ್‍ಗೆ ಹೊಸ ನಾಯಕತ್ವ

ಹಲಸೂರು: ಮರ್ಕಿನ್ಸ್ ವಿದ್ಯಾಸಂಸ್ಥೆಯ ವಿದ್ಯಾರ್ಥಿ ಸಂಘಟನೆ ಮಜ್ಲಿಸ್‍ಗೆ ಹೊಸ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ಮರ್ಕಿನ್ಸ್ ಪ್ರಾಂಶುಪಾಲರಾದ ಜಾಫರ್ ಅಹ್ಮದ್ ನೂರಾನಿಯವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮಜ್ಲಿಸ್‍ನ ಕೆಳಘಟಕಗಳಾದ ಏಳು ಲಜ್ನಗಳಿಗೆ ಮುಸ್ತಶಾರ್ ಹಾಗೂ ನಾಯಿಬ್ ಮುಸ್ತಶಾರರನ್ನು ಮತದಾನದ ಮೂಲಕ ಚುಣಾಯಿಸಲಾಯಿತು.

ಮುಸ್ತಶಾರ್, ನಾಯಿಬ್ ಮುಸ್ತಶಾರ್ ಹಾಗೂ ಮರ್ಕಿನ್ಸ್ ಅಧ್ಯಾಪಕರು ಭಾಗವಹಿಸಿದ ಕಾರ್ಯಕ್ರಮದಲ್ಲಿ ಮಜ್ಲಿಸ್‍ನ ನೂತನ ಮುಹಾಫಿಳಾಗಿ ಅಬ್ದುರ್ರಹ್ಮಾನ್ ಮಾಣಿ ಹಾಗು ನಾಯಿಬ್ ಮುಹಾಫಿಳಾಗಿ ಇರ್ಫಾನ್ ಕೊಡಗು ಮತ್ತು ಸೈಫುದ್ದೀನ್ ಬೆಂಗಳೂರು ಚುನಾಯಿತರಾದರು ಎಂದು ಸಂಘಟನೆಯ ಮುಹಾಫಿಳ್ ಅಬ್ದುರ್ರಹ್ಮಾನ್ ಮಾಣಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!