ಮಕ್ಕಾ ತಲುಪಿದ ಭಾರತೀಯ ಹಜ್ ತಂಡ- ಕೆ.ಸಿ.ಎಫ್ ಸ್ವಯಂ ಸೇವಕರಿಂದ ಭವ್ಯ ಸ್ವಾಗತ

ಮಕ್ಕಾ, ಜು.13: ಪ್ರಸಕ್ತ (2019ನೇ) ಸಾಲಿನ ಪವಿತ್ರ ಹಜ್ ನಿರ್ವಹಿಸಲು ಭಾರತದ ದಿಲ್ಲಿಯಿಂದ ಅಗಮಿಸಿದ ಪ್ರಥಮ ತಂಡವು ಇಂದು ಪವಿತ್ರ ಮದೀನಾ ಮುನವ್ವರದಿಂದ ಮಕ್ಕಾ ನಗರಕ್ಕೆ ತಲುಪಿದೆ. ಈ ಸಂದರ್ಭ ಯಾತ್ರಾರ್ಥಿಗಳನ್ನು ಕರ್ನಾಟಕ ಕಲ್ಚರಲ್ ಫೌಂಡೇಶನ್(ಕೆಸಿಎಫ್)ನ ಹಜ್ಜ್ ಸ್ಟಯಂ ಸೇವಕರು(ಎಚ್.ವಿ.ಸಿ.) ಆತ್ಮೀಯವಾಗಿ ಸ್ವಾಗತಿಸಿದರು.

ಇದೇ ವೇಳೆ ಭಾರತ ದೂತವಾಸ ಕಚೇರಿಯ ಸಲಹೆಗಾರರಾದ ನೂರ್ ರಹ್ಮಾನ್ ಶೇಖ್ ಅವರನ್ನು ಕೆಸಿಎಫ್ ಮಕ್ಕತ್ತುಲ್ ಮುಕರ್ರಮಃ ಸೆಕ್ಟರ್ ಎಚ್.ವಿ.ಸಿ ತಂಡದ ವತಿಯಿಂದ ಹೂ ಗುಚ್ಛಗಳನ್ನು ನೀಡಿ ಸನ್ಮಾನಿಸಲಾಯಿತು.

ಅದೇ ರೀತಿ ಮಕ್ಕಾದ ವಸತಿ ಕೇಂದ್ರಗಳಲ್ಲಿ ಹಾಜಿಗಳ ಕೂಠಡಿ ಗಳಿಗೆ ಲಗೇಜು, ಸಾಮಾಗ್ರಿಗಳನ್ನು ಕೊಂಡೊಯ್ಯಲು ಸಹಕರಿಸಿದರು.

ಹಜ್ ದಿನಗಳಲ್ಲಿ ಪುಣ್ಯ ಮಕ್ಕಾ ನಗರಗಳಿಗೆ ಆಗಮಿಸುತ್ತಿರುವ ಎಲ್ಲಾ ರಾಷ್ಟ್ರಗಳ ಹಜ್ಜಾಜಿಗಳ ಸಮಸ್ಯೆಗಳಿಗೆ ಸ್ಪಂದಿಸಲಿದ್ದು, ಮಸ್ಜುದುಲ್ ಹರಮ್ ಸೇರಿದಂತೆ ವಿವಿದ ಕಡೆಗಳಲ್ಲಿ ಅನಾರೋಗ್ಯದಿಂದ ಬಳಲುವ ಹಾಗೂ ತಮ್ಮ ವಸತಿಗಳಿಗೆ ಮರಳಲು ದಾರಿ ತಿಳಿಯದೇ ಆತಂಕಕ್ಕೆ ಒಳಗಾಗುವ ನಿಸ್ಸಹಾಯಕ ಹಾಜಿಗಳಿಗೆ ಮಾರ್ಗದರ್ಶನ ನೀಡಲು ಕೆಸಿಎಫ್ ನ (ಎಚ್.ವಿ.ಸಿ.) ಸ್ವಯಂ ಸೇವಕರು ಮಕ್ಕಾ ಹಾಗೂ ಮದೀನಾದಲ್ಲಿ ನಿರಂತರ ಸೇವೆಯಲ್ಲಿರುತ್ತಾರೆ.

Leave a Reply

Your email address will not be published. Required fields are marked *

error: Content is protected !!