ಕೆಸಿಎಫ್ ಒಮಾನ್ ಐ ಟೀಮ್ ಮಾಸಿಕ ಮಹ್ಳರತುಲ್ ಬದ್ರಿಯಾ ಹಾಗೂ ಬೀಳ್ಕೊಡುಗೆ ಸಮಾರಂಭ

ಒಮಾನ್: ಕರ್ನಾಟಕ ಕಲ್ಚರಲ್ ಫೌಂಡೇಷನ್ ಒಮಾನ್ ಸಮಿತಿಯ ಅಧೀನದಲ್ಲಿರುವ ಐ ಟೀಮ್ ಇದರ ಮಾಸಿಕ ಮಹ್ಳರತುಲ್ ಬದ್ರಿಯಾ ಕಾರ್ಯಕ್ರಮವು ಇಕ್ಬಾಲ್ ಬರ್ಕ ರವರ ನಿವಾಸದಲ್ಲಿ ನಡೆಯಿತು.

ಈ ಕಾರ್ಯಕ್ರಮಕ್ಕೆ RSC ಒಮಾನ್ ಅಧ್ಯಕ್ಷರಾದ ನಿಶಾದ್ ಅಹ್ಸನಿ ನೇತೃತ್ವವನ್ನು ವಹಿಸಿ ನಂತರ ಕಾರ್ಯಕರ್ತರಿಗೆ ಸಂಘಟನಾ ತರಗತಿಯನ್ನು ನಡೆಸಿದರು.

ಈ ವರ್ಷ ಹಜ್ಜ್ ಯಾತ್ರೆಗೆ ತೆರಳಲಿರುವ ಕೆಸಿಎಫ್ ಒಮಾನ್ ರಾಷ್ಟ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿಯೂ, ಐಟೀಮ್ ಕಾರ್ಯಕರ್ತರೂ ಆದ ಸ್ವಾದಿಕ್ ಸುಳ್ಯ ಇವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.
ಕಾರ್ಯಕ್ರಮದಲ್ಲಿ ಐ ಟೀಮ್ ಚೇರ್ ಮೇನ್ ಆದ ಇಕ್ಬಾಲ್ ಬೊಳ್ಮಾರ್ ಬರ್ಕ, ಮುಹಮ್ಮದ್ ಯಮ್ಲಿಕ್ ಮುಸ್ಲಿಯಾರ್ ಬರ್ಕ, ಕೆಸಿಎಫ್ ನಾಯಕರು ಹಾಗೂ ಐಟೀಮ್ ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!