ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲದ ಗ್ರಾಮವೊಂದರ ಅಪ್ರಾಪ್ತ ಬಾಲಕಿಯನ್ನು ಬೇರೆ ಬೇರೆ ಸಂದರ್ಭದಲ್ಲಿ ಐವರು ಅತ್ಯಾಚಾರ ನಡೆಸಿರುವ ಆಘಾತಕಾರಿ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ವಿಟ್ಲ ನಿವಾಸಿಯಾಗಿರುವ ಅಪ್ರಾಪ್ತೆ ಮೇಲೆ ಗ್ರಾಮ ಪಂಚಾಯತ್ ಸಿಬ್ಬಂದಿ ಸೇರಿ ಐವರು ನಿರಂತರ ಅತ್ಯಾಚಾರ ನಡೆಸಿದ್ದಾರೆ ಎನ್ನಲಾಗಿದೆ.
ಇನ್ನು ಈ ಕುರಿತು ಯುವತಿ ಐವರ ವಿರುದ್ಧ ಸಂತ್ರಸ್ತೆ ವಿಟ್ಲ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾಳೆ.
ಐವರಲ್ಲಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಗಣೇಶ್, ಧನುಷ್ ನಾಯ್ಕ್ ಮತ್ತು ಕೃಷ್ಣ ನಾಯ್ಕ್ ಬಂಧಿತರು.ಬಾಲಕಿಯನ್ನು ಗಣೇಶ್ ಎಂಬಾತ ಕಳೆದ ವರ್ಷ ಡಿಸೆಂಬರ್ನಲ್ಲಿ ಮತ್ತು ಈ ವರ್ಷದ ಮಾರ್ಚ್ನಲ್ಲಿ ಸುಬ್ರಹ್ಮಣ್ಯದಲ್ಲಿ ಪೂಜೆ ನೆಪದಲ್ಲಿ ಕರೆದುಕೊಂಡು ಹೋಗಿ ಎರಡು ಬಾರಿಯು ಎರಡು ದಿನ ಲಾಡ್ಜ್ನಲ್ಲಿರಿಸಿ ಅತ್ಯಾಚಾರ ಎಸಗಿದ್ದಾನೆ ಎಂದು ದೂರಲಾಗಿದೆ.
ಈ ವರ್ಷದ ಜನವರಿಯಿಂದ ಯುವತಿ ಆರೋಗ್ಯದಲ್ಲಿ ಏರುಪೇರಾಗಿದ್ದು, ಈ ಸಂದರ್ಭದಲ್ಲಿ ಅತ್ಯಾಚಾರ ಮಾಡಿದ ಆರೋಪಿಗಳು ವಿಷಯವನ್ನು ಯಾರಿಗಾದರೂ ತಿಳಿಸಿದರೆ ಕೊಂದು ಬಿಡುತ್ತೇವೆ ಎಂದು ಬೆದರಿಸಿದ್ದರು ಎನ್ನಲಾಗಿದೆ. ಇಂದು ವಿಟ್ಲ ಠಾಣೆಯಲ್ಲಿ ಬಾಲಕಿ ನೀಡಿದ ದೂರಿನಂತೆ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಇನ್ನಷ್ಟು ಸುದ್ದಿಗಳು
ಅಜಿಲಮೊಗರಿಗೆ ಇಂದು ಗ್ರ್ಯಾಂಡ್ ಮುಫ್ತಿ ಎಪಿ ಉಸ್ತಾದ್- ಯಶಸ್ವಿಗೆ ಎಸ್ಸೆಸ್ಸೆಫ್ ಬಂಟ್ವಾಳ ಡಿವಿಷನ್ ಕರೆ
ಸ್ವತಂತ್ರ ಪ್ಯಾಲಸ್ತೀನ್ ನಿರ್ಮಾಣಗೊಳ್ಳದೆ ಇಸ್ರೇಲ್ ಜೊತೆ ಶಾಂತಿ ಒಪ್ಪಂದಕ್ಕಿಲ್ಲ- ಸೌದಿ ಅರೇಬಿಯಾ
ಚುನಾವಣಾ ಗುರುತಿನ ಚೀಟಿ: ಡಿಜಿಟಲ್ ಆವೃತಿ ನಾಳೆಯಿಂದ ಲಭ್ಯ
ದೇಶಾದ್ಯಂತ ಕೋವಿಡ್ ಲಸಿಕೆ ವಿತರಣೆ: ಒಂದೇ ದಿನದಲ್ಲಿ 6 ಮಂದಿ ಸಾವು
ಮಠ ಬ್ರಾಂಚ್ ಎಸ್ಡಿಪಿಐ: ಕುಡಿಯುವ ನೀರಿನ ಟ್ಯಾಂಕ್ ಸ್ವಚ್ಛತೆ
ಕಾಣಿಕೆ ಡಬ್ಬಿಗೆ ಅವಹೇಳನೆ: ಶಾಂತಿ ಕದಡಲು ಯತ್ನಿಸಿಸುವವರನ್ನು ಬಂಧಿಸಿ- ಯು.ಟಿ ಖಾದರ್