ದಾರುಲ್ ಹಿಕ್ಮ ಜಿದ್ದಾ ಕಮಿಟಿ: ವಾರ್ಷಿಕ ಮಹಾಸಭೆ ಹಾಗು ಅನುಸ್ಮರಣೆ

ಜಿದ್ದಾ: ದಾರುಲ್ ಹಿಕ್ಮ ಜಿದ್ದಾ ಕಮಿಟಿಯ ಪ್ರಥಮ ವಾರ್ಷಿಕ ಮಹಾಸಭೆ ಹಾಗು ಮಡವೂರ್ ಶೈಖ್ ಅನುಸ್ಮರಣೆ ಮಜ್ಲಿಸ್ ಕಾರ್ಯಕ್ರಮವು 05/07/2019 ರಂದು ಜುಮುಅ ನಮಾಝಿನ ಬಳಿಕ ಜಿದ್ಧ ಬನಿ ಮಾಲಿಕ್ ನಲ್ಲಿ ಇಂದ್ರಾಜೆ ಹಸನ್ ಹಾಜಿಯವರ ಅಧ್ಯಕ್ಷತೆಯಲ್ಲಿ G M ಹಾಫಿಳ್ ಉಸ್ತಾದರ ದುಆ ನೇತ್ರತ್ವದಲ್ಲಿ ನಡೆಯಿತು.

ಸಲಾಂ ಎನ್ಮೂರು ಅವರು ಸ್ವಾಗತಿಸಿ, ಉಧ್ಘಾಟನೆಯನ್ನು ಬಹು ಉಮ್ಮರ್ ಸಖಾಫಿ ಪರಪ್ಪು ಉಸ್ತಾದರು ನೆರವೇರಿಸಿದರು.
ದಾರುಲ್ ಹಿಕ್ಮ ರಿಯಾದ್ ಕಮಿಟಿ ಅಧ್ಯಕ್ಷರಾದ ಯೂಸುಫ್ ಮುಸ್ಲಿಯಾರ್ ಚೆನ್ನಾರ್ ಸಂಸ್ಥೆಯ ಕುರಿತು ಪರಿಚಯಿಸಿದರು.ಸಭೆಯಲ್ಲಿ ಹಳೆಯ ಲೆಕ್ಕಾಚಾರಗಳನ್ನು ಮಂಡಿಸಿ ಕಮಿಟಿಯನ್ನು ಬರ್ಕಾಸು ಗೊಳಿಸಿ 2019-10 ರ ನೂತನ ಕಮಿಟಿಯನ್ನು ರಚನೆ ಮಾಡಲಾಯ್ತು.

ದಾರುಲ್ ಹಿಕ್ಮ ಜಿದ್ದ 2019-20ನೇ ಸಾಲಿತ ನೂತನ ಸಾರಥಿಗಳು.

ಗೌರವಾಧ್ಯಕ್ಷರು ಹಸನ್ ಹಾಜಿ ಇಂದ್ರಾಜೆ.
ಸಲಹೆಗಾರರು: ಹಾಫಿಳ್ GM ಉಸ್ತಾದ್
ಇಬ್ರಾಹಿಂ ಕಿನ್ಯ ,ಮುಹಮ್ಮದ್ ಕಲ್ಲರ್ಬೆ
ಅಧ್ಯಕ್ಷರು:- ಅಬ್ಬಾಸ್ ಹಾರಡಿ,
ಪ್ರ.ಕಾರ್ಯಧರ್ಶಿ :ಜಲೀಲ್ ಎನ್ಮೂರು,
ಕೊಶಾಧಿಕಾರಿ :-ಅಬ್ದುಲ್ ಸಲಾಂ ಎನ್ಮೂರು,
ಉಪಾಧ್ಯಕ್ಷರು :ಬಷೀರ್ ಪಾಲ್ತಾಡ್, ಖಾಲಿದ್ ಮಾಸ್ತಿಕಟ್ಟೆ , ಜೊ.ಕಾರ್ಯಧರ್ಶಿ : ಖಲೀಲ್ ಬೆಳ್ಳಾರೆ, ಸಂಚಾಲಕರು :-ರಶೀದ್ ಉಮ್ಮಿಕ್ಕಳ,
ಕಾರ್ಯಕಾರಿ ಸಧಸ್ಯರು: ದೇಲಂಪಾಡಿ ಉಸ್ತಾದ್,
ನಾಸಿರ್ ಇಂದ್ರಾಜೆ, ಸುಲೈಮಾನ್ ಬಂಡಾಡ್, ಸಿದ್ದೀಕ್ ಬಾಳೆಹೊನ್ನೂರು,ಶಂಸು ಮಡಂತ್ಯಾರ್.

ಕಾರ್ಯಕ್ರಮದಲ್ಲಿ KCF ಶರಫಿಯ್ಯಾ ಸೆಕ್ಟರ್ ಅಧ್ಯಕ್ಷರು ಜಾಫರ್ ಸಖಾಫಿ ಕರಾಯ, ಬವಾದಿ ಸೆಕ್ಟರ್ ಅಧ್ಯಕ್ಷರು ಮ’ಅರೂಫ್ ಮದನಿ, ಜಿದ್ದಾ ಝೋನ್ ಕಾರ್ಯದರ್ಶಿ ಇಬ್ರಾಹಿಂ ಕಿನ್ಯಾ, ಕೋಶಾಧಿಕಾರಿ ಸಿದ್ದೀಖ್ ಬಾಳೆಹೊನ್ನೂರ್, KCF.HVC ಮಕ್ಕಾ ಕ್ಯಾಪ್ಟನ್ ಮೂಸಾ ಹಾಜಿ ಕಿನ್ಯಾ, KCF ಕಾರ್ಯಕರ್ತರು ಹಾಗೂ ದಾರುಲ್ ಹಿಕ್ಮ ಹಿತೈಷಿಗಳು ಭಾಗವಹಿಸಿದ್ದರು.

ಕೊನೆಯಲ್ಲಿ ನೂತನ ಕಾರ್ಯದರ್ಶಿ ಜಲೀಲ್ ಎಣ್ಮೂರು ಧನ್ಯವಾದ ಸಮರ್ಪಿಸಿದರು.
ವರದಿ,: ಅಝೀಝ್ ಮದನಿ ಕೊಕ್ಕಡ ರಿಯಾದ್

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com
error: Content is protected !!