ಕೆ.ಸಿ.ಎಫ್ ಜಿದ್ದಾ ಝೋನಲ್ ಮಟ್ಟದಲ್ಲಿ ಎಂ ಆರ್ ಎಫ್  ಸಾಂತ್ವನ ನಿಧಿ  ಚಾಲನೆ

ಕೆಸಿಎಫ್ ರಾಷ್ಟ್ರೀಯ ಸಮಿತಿಯು ತನ್ನ ಕಾರ್ಯಕರ್ತರಿಗಾಗಿ ಹೊರತಂದ ಎಂ ಆರ್ ಎಫ್ ಸಾಂತ್ವನ ನಿಧಿ ಯೋಜನೆಯ ಜಿದ್ದಾ ಝೋನ್ ಮಟ್ಟದಲ್ಲಿ ಚಾಲನೆ ಕಾರ್ಯಕ್ರಮವನ್ನು ದಿನಾಂಕ 05/07/19 ರಂದು ಜುಮುಅ ನಮಾಝಿನ ಬಳಿಕ ಬನಿಮಲಿಕ್ ಸೆಂಟರ್, ಜಿದ್ದಾದಲ್ಲಿ ಮೂಸಾಹಾಜಿ ಕಿನ್ಯಾರವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಪ್ರಭಾಷನ ನಡಸಿದ ಉಮರ್ ಕಾಮಿಲ್ ಸಖಾಫಿ ಪರಪ್ಪು ಉಸ್ತಾದರು ಕೆ.ಸಿ.ಎಫ್ ಸಾಂತ್ವನದ ಬಗ್ಗೆ ವಿಷ್ಲೇಶಣೆ ನೀಡಿದರು, ಜಿದ್ದಾ ಝೋನ್ ಸಾಂತ್ವನ ಇಲಾಖೆಯ ಅಧ್ಯಕ್ಷರಾದ ಮೂಸಾ ಹಾಜಿ ಕಿನ್ಯಾರವರು ಎಂ ಆರ್ ಎಫ್ ಸದಸ್ಯರಾದ ಇಕ್ಬಾಲ್ ಹಾಜಿ ಉಳ್ಳಾಲ ರವರಿಗೆ ಎಂ ಆರ್ ಎಫ್ ಕಾರ್ಡ್ ನೀಡುವ ಮೂಲಕ ಯೋಜನೆಗೆ ಝೋನ್ ಮಟ್ಟದ ಚಾಲನೆ ನೀಡಿದರು.

ಸಭೆಯಲ್ಲಿ ರಾಷ್ಟ್ರೀಯ ಇಹ್ಸಾನ್ ಇಲಾಖೆಯ ಅಧ್ಯಕ್ಷರಾದ ಹಾಫಿಲ್ ಜಿ ಎಂ ಸುಲೈಮಾನ್ ಹನೀಫಿ ಉಸ್ತಾದರು, ರಾಷ್ಟ್ರೀಯ ಸಮಿತಿಯ ಇತರ ಸದಸ್ಯರು, ಜಿದ್ದಾ ಝೋನ್ ನೇತಾರರು,ಕೆಸಿಎಫ್ ರಿಯಾದ್ ಝೋನ್ ಸದಸ್ಯರಾದ ಯೂಸುಫ್ ಮುಸ್ಲಿಯಾರ್ ಚೆನ್ನಾರ್, ಶರಫಿಯ್ಯಾ ಹಾಗೂ ಬವಾದಿ ಸೆಕ್ಟರ್ ಕಾರ್ಯಕರ್ತರು ಹಾಜರಿದ್ದರು.

ಜಿದ್ದಾ ಝೋನ್ ಪ್ರ.ಕಾರ್ಯದರ್ಶಿ ಇಬ್ರಾಹಿಮ್ ಕಿನ್ಯಾ ಸ್ವಾಗತ ಹೇಳಿದ ಸಭೆಗೆ ಕೋಶಾಧಿಕಾರಿ ಸಿದ್ದೀಕ್ ಬಾಳೆಹೊನ್ನೂರು ಧನ್ಯವಾದ ಹೇಳಿದರು

Leave a Reply

Your email address will not be published. Required fields are marked *

error: Content is protected !!