ಮದೀನಾ ಮುನವ್ವರ: ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆ.ಸಿ.ಎಫ್) ಸೌದಿ ಅರೇಬಿಯಾ.. ಇದರ ಮದೀನಾ ಮುನವ್ವರ ಝೋನ್ ಹಂತದ MRF ಸಾಂತ್ವನ ನಿಧಿ ಯೋಜನೆಯ ಸಭೆಯು ಮದೀನಾದ ಕೆ.ಸಿ.ಎಫ್ ಭವನದಲ್ಲಿ ಇಂದು ನಡೆಯಿತು.
ಕಾರ್ಯಕ್ರಮವನ್ನು ಝೋನ್ ಶಿಕ್ಷಣ ವಿಭಾಗದ ಅಧ್ಯಕ್ಷರಾದ ಅಶ್ರಫ್ ಸಖಾಫಿ ನೂಜಿ ಉದ್ಘಾಟಿಸಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸೌದಿ ರಾಷ್ಟ್ರೀಯ ಸಾಂತ್ವನ ಇಲಾಖೆ ಕನ್ವೀನರ್ ಅಶ್ರಫ್ ಹಾಜಿ ಕಿನ್ಯ ಮಾತನಾಡಿ MRF ಪ್ರಾರಂಭಿಸಿ ವರ್ಷ ಯೋಜನೆಯ ಫಲಾನುಭವಿಗಳಿಗೆ ಹತ್ತು ಲಕ್ಷಕ್ಕಿಂತ ಅಧಿಕ ಹಣವನ್ನು ವಿತರಿಸಲಾಗಿದ್ದು, MRF ಸದಸ್ಯರ ಮರಣ ಸಂಭವಿಸಿದಾಗ ಅವರ ಕುಟುಂಬಕ್ಕೆ ಉತ್ತಮ ರೀತಿಯ ಅರ್ಥಿಕ ಸಹಾಯ ತಲುಪಿಸಲು ಸಾಧ್ಯವಾಗಿದ್ದು 2019-20ಸಾಲಿನ MRF ಯೋಜನೆಗೆ ಸೌದಿಯ ವಿವಿಧ ಕಡೆಗಳಲ್ಲಿ ಇಂದು ಅಧಿಕೃತವಾಗಿ ಚಾಲನೆ ದೊರೆಯಲಿದೆ ಎಂದು ತಿಳಿಸಿದರು.
MRF ಗುರುತಿನ ಚೀಟಿಯನ್ನು ಮದೀನಾ ಸೆಕ್ಟರ್ ಕೋಶಾಧಿಕಾರಿ ಸುಲೈಮಾನ್ ತುರ್ಕಳಿಕೆಯರಿಗೆ ನೀಡುವ ಮೂಲಕ ಮದೀನಾ ಝೋನ್ ಹಂತದಲ್ಲಿ ಅಧಿಕೃತವಾಗಿ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಕೆ.ಸಿ.ಎಫ್ ಮದೀನಾ ಮುನವ್ವರ ಸೆಕ್ಟರ್ ಸಾಂತ್ವನ ವಿಭಾಗದ ಕನ್ವಿನರ್ ಅಬ್ದುಲ್ ಜಬ್ಬಾರ್ ಕಾವಳಕಟ್ಟೆ, ಸಲಾಮ್ ಆತೂರು , ಸಿದ್ದೀಕ್ ಕನ್ಯಾನ, ಆಸಿಫ್ ಬದ್ಯಾರ್ ಸಹಿತ ಸೆಕ್ಟರ್, ಝೋನ್ ಸಮಿತಿಯ ನಾಯಕರು ಭಾಗವಹಿಸಿದ್ದರು.
ಪ್ರಧಾನ ಕಾರ್ಯದರ್ಶಿ ಹುಸೈನಾರ್ ಮಾಪಲ್ ನಿರೂಪಿಸಿ ಸ್ವಾಗತಿಸಿದ, ಕಾರ್ಯಕ್ರಮನ್ನು ಮದೀನಾ ಸೆಕ್ಟರ್ ಕಾರ್ಯದರ್ಶಿ ಅಶ್ರಫ್ ದೇರಳಕಟ್ಟೆ ವಂದಿಸಿದರು.
ಇನ್ನಷ್ಟು ಸುದ್ದಿಗಳು
ಎಸ್ಸೆಸ್ಸೆಫ್ ವಿಟ್ಲ ಡಿವಿಷನ್ ಸಮಿತಿ 2021ನೇ ಸಾಲಿನ ಪದಾಧಿಕಾರಿಗಳ ಆಯ್ಕೆ
ಇಹ್ಸಾನ್ ಸೆಂಟರ್, ಹುಬ್ಬಳ್ಳಿ ಉದ್ಘಾಟನಾ ಸಮಾರಂಭ ಜನವರಿ 17ಕ್ಕೆ
ಶಾಫೀ ಸಅದಿಯವರ ಮೇಲಿನ ಸುಳ್ಳಾರೋಪ: ರಾಜ್ಯ SYS ಖಂಡನೆ
ಎಸ್ಸೆಸ್ಸೆಫ್ ಬೆಳ್ತಂಗಡಿ ಡಿವಿಷನ್ಗೆ ನೂತನ ಸಾರಥ್ಯ
ಎಸ್ಸೆಸ್ಸೆಫ್ ಮೋಂಟುಗೋಳಿ ಸೆಕ್ಟರ್ ವಾರ್ಷಿಕ ಮಹಾಸಭೆ
ಎಸ್ಸೆಸ್ಸೆಫ್ ಮುಡಿಪು ಡಿವಿಷನಿಗೆ ನೂತನ ಸಾರಥ್ಯ