ಹಜ್ಜಾಜಿಗಳಿಗೆ ಸೇವೆಗೈಯ್ಯಲು ಸಿದ್ದರಾದ ಸೌದಿ KCF ನ HVC ಸ್ವಯಂ ಸೇವಕರು

ಮದೀನಾ: ಈ ವರ್ಷದ ಪವಿತ್ರ ಹಜ್ಜ್ ಕರ್ಮ ನಿರ್ವಹಿಸಲು ಮಕ್ಕಾ ಮತ್ತು ಮದೀನ ಕ್ಕೆ ಆಗಮಿಸುವ ಅಲ್ಲಾಹನ ಅತಿಥಿಗಳಿಗೆ ಸೇವೆ ಮಾಡಲು KCF ಸೌದಿ ರಾಷ್ಟೀಯ ಸಮಿತಿಯು HVC (Hajj Volunter Core) ಸ್ವಯಂ ಸೇವಕರ ಆಯ್ಕೆ ಗೆ ಸೌದಿ ಕೆ.ಸಿ ಎಫ್ ರಾಷ್ಟೀಯ ಮಟ್ಟದ HVC ಸ್ವಾಗತ ಸಮಿತಿಯನ್ನು ಪವಿತ್ರ ಮದೀನಾದಲ್ಲಿ ನಡೆದ ರಾಷ್ಟೀಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಆಯ್ಕೆ ಮಾಡಲಾಯಿತು.

ಕಳೆದ 4 ವರ್ಷಗಳಿಂದ KCF ಸೌದಿ ರಾಷ್ಟೀಯ ಸಮಿತಿಯು ಅಲ್ಲಾಹನ ಅತಿಥಿಗಳಾದ ಹಜ್ಜಾಜಿಗಳ ಸೇವೆಗೆಯ್ಯಲು HVC ( ಹಜ್ಜ್ ಸ್ವಯಂ ಸೇವಕರನ್ನು ) ನಿಯೋಜಿಸುತ್ತಾ ಬಂದಿದೆ. ಅವರು ಅತ್ಯಂತ ಪ್ರಶಂಸಾರ್ಹ ರೀತಿಯಲ್ಲಿ ಸೇವೆಗೈಯ್ಯುತ್ತಿದ್ದು, ಅದೇ ರೀತಿ ಈ ವರ್ಷವೂ ಕೂಡ ಮಕ್ಕಾ ಮತ್ತು ಮದೀನಗಳಲ್ಲಿ 70 ದಿವಸಗಳ ಕಾಲ ನಿರಂತರವಾಗಿ ಭಾರತದಿಂದ ಬರುವ ಮೊದಲ ವಿಮಾನ ದಿಂದ ಹಿಡಿದು ಹಾಜಿಗಳು ಹಜ್ಜ್ ಕರ್ಮ ಕಳೆದು ಭಾರತಕ್ಕೆ ಮರಳುವ ತನಕ ತಮ್ಮ ಸೇವೆಯನ್ನು ಒದಗಿಸಲಿದ್ದಾರೆ.

ಹಜ್ಜಾಜಿಗಳ ಸೇವೆ ಮತ್ತು ವಿಶೇಷವಾಗಿ ಭಾರತದಿಂದ ಸರಕಾರಿ ಕೋಟಾದಲ್ಲಿ ಬರುವ ಕರ್ನಾಟಕದ ಹಾಜಿಗಳಿಗೆ ನುರಿತ ವಿದ್ವಾಂಸರಿಂದ ಹಜ್ಜ್ ತರಬೇತಿಗಳು, ಮದೀನಾದಲ್ಲಿ ಪ್ರಸಿದ್ಧ ಝಿಯಾರತ್ ಸ್ಥಳಗಳ ಬಗ್ಗೆ ಗೈಡ್ ಮುಂತಾದ ಸೇವೆಗಳನ್ನು ನೀಡಲು ತೀರ್ಮಾನಿಸಿದ್ದು, ಇದಕ್ಕಾಗಿ 100 ರಷ್ಟು ಸ್ವಯಂ ಸೇವಕರು ಮಕ್ಕಾ ಮತ್ತು ಮದೀನಾ ಗಳಲ್ಲಿ 70 ದಿವಸಗಳ ಕಾಲ ನಿರಂತರವಾಗಿ ಸೇವೆಗೈಯ್ಯಲಿದ್ದಾರೆ.

ಅದೇ ರೀತಿ ಹಜ್ಜ್ ನ ವೇಳೆ ಮಿನಾದಲ್ಲಿ ಸೌದಿ ಕೆ.ಸಿ ಎಫ್ ನ ಅನಿವಾಸಿ ಕನ್ನಡಿಗರ 400 ರಷ್ಟು ಸ್ವಯಂ ಸೇವಕರ ತಂಡವು ಈ ವರ್ಷ ಕಾರ್ಯ ನಿರ್ವಹಿಸಲಿದೆ.
ಇದಕ್ಕಾಗಿ HVC ಸ್ವಯಂ ಸೇವಕರಿಗೆ ವ್ಯವಸ್ಥಿತವಾಗಿ ಸೌದಿಯ ವಿವಿಧ ಭಾಗಗಳಲ್ಲಿ ನುರಿತ ತರಬೇತುದಾರರಿಂದ ತರಬೇತಿಗಳನ್ನು ನೀಡಲಾಗುತ್ತದೆ.

ಸಂಘಟನಾ, ಹಜ್ಜ್ ಮತ್ತು ಮಿನಾ, ಅರಫಾ ಗಳ ಬಗ್ಗೆ ನಕ್ಷೆ ಆಧಾರಿತ ತರಬೇತಿಯನ್ನು ನಡೆಸಲು ರಾಷ್ಟೀಯ HVC ತಂಡವು ಈಗಾಗಲೇ ಸಿದ್ಧತೆಗಳನ್ನು ನಡೆಸಿದೆ. HVC ಕಾರ್ಯಕ್ಕೆ ರಾಷ್ಟೀಯ ಮಟ್ಟದ ಹೊರತಾಗಿ ಪ್ರತಿ ಝೋನ್ ಮಟ್ಟದಲ್ಲಿ ಮತ್ತು ಮಕ್ಕಾ, ಮದೀನಾಗಳಲ್ಲಿ ಸೆಕ್ಟರ್ ಮಟ್ಟದಲ್ಲಿ HVC ತಂಡವನ್ನು ರಚಿಸಲಾಗಿದೆ.

KCF ನಡೆಸುವ ಸ್ವಯಂ ಸೇವೆಯು ಯಾವುದೇ ಲಾಭದ ನಿರೀಕ್ಷೆಯಿಂದ ಮಾಡುವ ಸೇವೆಯಲ್ಲ. ಬದಲಾಗಿ ಅಲ್ಲಾಹನ ತೃಪ್ತಿಗಾಗಿ ಮತ್ತು ಅಲ್ಲಾಹನ ಅತಿಥಿಗಳಾದ ಹಾಜಿಗಳ ದುಆ ಮಾತ್ರ ಪ್ರತೀಕ್ಷೆಯಿಂದ ಮಾಡುವ ಉಚಿತವಾಗಿ ಮಾಡುವ ಸೇವೆಯಾಗಿದೆ.

ಈ ವರ್ಷದ HVC ಕಾರ್ಯಾಚರಣೆಗೆ ಸುಮಾರು 30 ಲಕ್ಷ ರೂಪಾಯಿಗಳಷ್ಟು ಖರ್ಚು ತಗಲಬಹುದೆಂದು ಅಂದಾಜಿಸಲಾಗಿದ್ದು. ಕಾರ್ಯಕರ್ತರ ಮತ್ತು ಹಿತೈಷಿಗಳ ಸಹಕಾರದಿಂದ ಹಜ್ಜ್ ಸೇವೆಯ ಯೋಜನೆಯನ್ನು ಕೆ,ಸಿ ಎಫ್ ನಡೆಸಿಕೊಂಡು ಬಂದಿದೆ.

KCF ಸೌದಿ ರಾಷ್ಟೀಯ HVC ಸಮಿತಿ-2019
ಅಧ್ಯಕ್ಷರು: ಫೈಸಲ್ ಕೃಷ್ಣಾಪುರ (ದಮ್ಮಾಮ್)
ಕಾರ್ಯದರ್ಶಿ: ಇಬ್ರಾಹಿಂ ಕಿನ್ಯ (ಜಿದ್ದಾ)
ಕೋಶಾಧಿಕಾರಿ: ಬಷೀರ್ ತಲಪಾಡಿ (ರಿಯಾದ್)

ಸದಸ್ಯರು:
– DP. ಯೂಸುಫ್ ಸಖಾಫಿ ಬೈತಾರ್
– ಸಾಲಿ ಬೆಳ್ಳಾರೆ
– ಮಹಮ್ಮದ್ ಕಲ್ಲಾರ್ಬೆ
– ಮೂಸಾ ಹಾಜಿ ಕಿನ್ಯ
– ಸಿದ್ದಿಕ್ ಬಾಳೆಹೊನ್ನೂರ್
– ಇಕ್ಬಾಲ್ ಕಕ್ಕಿಂಜೆ
– ಅಬ್ದುಲ್ ಸಲಾಂ ಎನ್ಮೂರ್
– ತಾಜುದ್ದೀನ್ ಸುಳ್ಯ
– ರಝಾಕ್ ಉಳ್ಳಾಲ
– ಅಶ್ರಫ್ ಕಿನ್ಯ
– ಅಶ್ರಫ್ ಸಖಾಫಿ ನೂಜಿ
– ರಮೀಝ್ ಕುಳಾಯಿ
– ಹನೀಫ್ ಕಣ್ಣೂರ್
– ಝಹೀರ್ ಅಬ್ಬಾಸ್
– ಹಂಝ ಮೈಂದಲ
– ಶಫೀಕ್ ಕಾಟಿಪಳ್ಳ
– ಇಕ್ಬಾಲ್ ಗುಲ್ವಾಡಿ
– ನಿಝಾರ್ ಗೂಡಿನಬಳಿ
– ಮುಹಮ್ಮದ್ ಮಲೆಬೆಟ್ಟು
– ಹಿದಾಯತ್ ತೀರ್ಥಹಳ್ಳಿ
– ಅಬ್ದುಲ್ ಜಬ್ಬಾರ್ ಹರೇಕಳ
– ಮುಸ್ತಾಫಾ ಹಾಸನ
– ತಾಜುದ್ದೀನ್ ಕೆಮ್ಮಾರ

ವರದಿ: ಪಬ್ಲಿಕೇಷನ್ ಇಲಾಖೆ – ಸೌದಿ ರಾಷ್ಟೀಯ ಸಮಿತಿ

Leave a Reply

Your email address will not be published. Required fields are marked *

error: Content is protected !!