janadhvani

Kannada Online News Paper

ಮದೀನಾ: ಅಲ್ ಖಾದಿಸ ಎಜುಕೇಶನಲ್ ಅಖಾಡಮಿ ಕಾವಳಕಟ್ಟೆ ಇದರ ಮದೀನಾ ಮುನವ್ವರ ಘಟಕ ಸಮಿತಿಯ ವತಿಯಿಂದ ಮದೀನಾ ಮುನವ್ವರದ ಕೆ.ಸಿ.ಎಫ್ ಭವನದಲ್ಲಿ “ಅಲ್ ಖಾದಿಸ ಮೀಟ್” ನಡೆಸಲಾಯಿತು

ಕಾರ್ಯಕ್ರಮವನ್ನು ಅಶ್ರಫ್ ಸಖಾಫಿ ನೂಜಿ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಸಂಸ್ಥೆಯ ಪ್ರಾಂಶುಪಾಲರು. ಹಾಗೂ SSF ರಾಜ್ಯ ಸಮಿತಿಯ ಉಪಾಧ್ಯಕ್ಷರಾದ ಬಹು: ಸುಫ್ಯಾನ್ ಸಖಾಫಿ ಮಾತನಾಡಿ, ಸಂಸ್ಥೆಯ ಕಾರ್ಯವೈಖರಿಯನ್ನು ವಿವರಿಸುತ್ತಾ ಸಂಸ್ಥೆಯಲ್ಲಿ ರಾಜ್ಯದ 26 ಜಿಲ್ಲೆಗಳ ಬಡ ವಿದ್ಯಾರ್ಥಿಗಳು ಧಾರ್ಮಿಕ, ಲೌಕಿಕ ಶಿಕ್ಷಣ ಪಡೆಯುತ್ತಿದ್ದು, ವಿಶಾಲವಾದ 30 ಎಕರೆಗಳಷ್ಟು ಜಾಗ ಸಂಸ್ಥೆಗಿದೆ. ಇದಕ್ಕೆಲ್ಲಾ ಕಾರಣ, ಹಿತೈಷಿಗಳ ಸಹಾಯ ಸಂಸ್ಥೆಯ ‌ಶಿಲ್ಪಿ ಕಾವಲ್ ಕಟ್ಟೆ ಹಝ್ರತ್ ಅವರ ನಿಷ್ಕಳಂಕ ನೇತೃತ್ವವಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಘಟಕಾಧ್ಯಕ್ಷರಾದ ಸುಲೈಮಾನ್ ತುರ್ಕಳಿಕೆ ,ಉಪಾಧ್ಯಕ್ಷರಾದ ರಫೀಖ್ ಕಾಪು, ಕಾರ್ಯದರ್ಶಿ ಅಬ್ದುಲ್ ಜಬ್ಬಾರ್ ಕಾವಳಕಟ್ಟೆ, ಸಂಸ್ಥೆಯ ಹಿತೈಷಿಗಳಾದ ಅಶ್ರಫ್ ಕಿನ್ಯ, ಅಬ್ದುಲ್ ರಝ್ಝಾಖ್ ಅಳಕೆಮಜಲ್,ಅಬೂಬಕ್ಕರ್ ಉದ್ದಬೆಟ್ಟು ಹಾಗೂ ಮತ್ತಿತರರು ಭಾಗವಹಿಸಿದ್ದರು.

ಅಲ್ ಖಾದಿಸ ಎಜುಕೇಶನಲ್ ಅಕಾಡಮಿ ಸೌದಿ‌ ಅರೇಬಿಯಾ ಆರ್ಗನೈಸರ್ ಯೂಸುಫ್ ಮದನಿ ಕೊಯ್ಯರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

ವರದಿ:- ಹುಸೈನಾರ್ ಮದೀನಾ

error: Content is protected !! Not allowed copy content from janadhvani.com