janadhvani

Kannada Online News Paper

ಮಾನವೀಯತೆ ಮೆರೆದ ಮಾದರೀಯೋಗ್ಯ ಯುವಕರಿವರು

ಸಣ್ಣಪುಟ್ಟ ಉದ್ಯೋಗ ಮಾಡಿ ಜೀವನ ನಡೆಸುತ್ತಿರುವ ಎಸ್ಸೆಸ್ಸೆಫ್ ಶಾಂತಿಬಾಗ್ ಶಾಖೆಯ ಕಾರ್ಯಕರ್ತರ ಈ ಸೇವೆಯು ಮಾದರೀ ಯೋಗ್ಯ ಮತ್ತು ಶ್ಲಾಘನೀಯ.

ಸುಮಾರು 7 ವರ್ಷಗಳ ಹಿಂದೆ, ಎಲ್ಲರೂ ಈದ್ ಸಡಗರ, ಸಂಭ್ರಮದಲ್ಲಿ ತಲ್ಲೀನರಾಗಿರುವಾಗ, ಈದ್ ಪ್ರಯುಕ್ತ ಹೋಟೆಲ್ ಗಳು ಮುಚ್ಚಲ್ಪಟ್ಟ ಕಾರಣ ಸಮೀಪದ ಆಸ್ಪತ್ರೆಯಲ್ಲಿ ಒಳರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿರುವವರ ಸಂಬಂಧಿಕರು ಆಹಾರಕ್ಕಾಗಿ ಪರದಾಡುವುದನ್ನು ಕಂಡ ಈ ಸುನ್ನೀ ಕಾರ್ಯಕರ್ತರು ಎಚ್ಚೆತ್ತು, ಈದ್ ದಿನದಂದು ಎಲ್ಲರೂ ಸಂಭ್ರಮಿಸಬೇಕೆಂಬ ಇರಾದೆಯಿಂದ, ಪ್ರತೀ ಈದ್ ದಿನಗಳಲ್ಲಿ ಯೇನೆಪೋಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೂ, ಸಿಬ್ಬಂಧಿಗಳಿಗೂ ಆಹಾರದ ಪೊಟ್ಟಣವನ್ನು ವಿತರಿಸುತ್ತಾ ಬಂದಿದ್ದಾರೆ.

ಸುಮಾರು 80 ಸಾವಿರ ರೂಪಾಯಿ ಖರ್ಚಿನಲ್ಲಿ ಒಂದು ಸಾವಿರ ಆಹಾರದ ಕಿಟ್ ತಯಾರಿಸಿ ಹಂಚುತ್ತಿರುವ ಈ ಕಾರ್ಯಕರ್ತರ ಸೇವೆಯು ಜನಮೆಚ್ಚುಗೆಯನ್ನು ಗಳಿಸಿದೆ.

ಎಸ್ಸೆಸ್ಸೆಫ್ ಶಾಂತಿಬಾಗ್ ಕಾರ್ಯಕರ್ತರಿಗೂ ಈ ಮಹತ್ಕಾರ್ಯಕ್ಕೆ ಸಹಾಯ ಸಹಕಾರವನ್ನು ನೀಡುವವರಿಗೂ ಅಲ್ಲಾಹನು ಒಳಿತನ್ನು ನೀಡಲಿ ಮತ್ತು ಇನ್ನು ಮುಂದಕ್ಕೂ ಇಂತಹಾ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಅಲ್ಲಾಹನು ಕರುಣಿಸಲಿ.

ಕಾರ್ಯಕರ್ತರಿಗೆ ತುಂಬುಹೃದಯದ ಅಭಿನಂದನೆಗಳು

✍🏼ಜಾಫರ್ ಯು ಎಸ್
(ಕಾರ್ಯದರ್ಶಿ ಎಸ್ಸೆಸ್ಸೆಫ್ ಉಳ್ಳಾಲ ಡಿವಿಶನ್)
05-06-2019

error: Content is protected !! Not allowed copy content from janadhvani.com