“ಅನಿವಾಸಿಯ ಪೆರ್ನಾಲ್” ಊರಿಗಿಂತ ಮಿಗಿಲಾದ ಸಂಭ್ರಮ?

ಅನಿವಾಸಿಗರ ಈದ್ ಪ್ರಯಾಸಕರವಾಗಿದೆಯಂತೆ,ಈದ್ ನಮಾಝ್ ನಂತರ ಅತ್ತ ಇತ್ತ ಸ್ವಲ್ಪ ಸುತ್ತಾಡಿ ಚಾಪೆಯತ್ತ
ಸಾಗೂವುದೇ ಹೊರತು ಬೇರೇನಿಲ್ಲವಂತೆ.ಇಂತಹ ಅದೆಷ್ಟೋ ಲೇಖನಳಿಂದ ಪೋಸ್ಟ್ ಗಳ ಕಾರಣಗಳಿಂದ ಅವರ ತಾಯಿಯಂದಿರು ಕಂಪಿಸದೇ ಇರಲಿಲ್ಲ, ಅಯ್ಯೋ ಅನಿಸದಿರಲಿಲ್ಲ.

ಸಂತೋಷದ ದಿನಗಳಲ್ಲಿ ಕೂಡ ಅನಿವಾಸಿಗರ ತಾಯಿಯಂದಿರನ್ನು ಕಣ್ಣೀರು ಹಾಕಿಸುವಂತೆ ಯಾವುದೇ ಲೇಖನಗಳನ್ನು ,ಪೋಸ್ಟ್ ಗಳನ್ನು share ಮಾಡಿ ಅವರನ್ನು ದುಃಖಿಸುವಂತೆ ಮಾಡಬಾರದು.

ಹೌದು,ಕಡಲಾಚೆಯ ಕನಸಿನ ಲೋಕದಲ್ಲಿರುವ ಅನಿವಾಸಿಗಳ ಜೀವನ ಶೈಲಿಯು ಇತ್ತೀಚಿನ ಹಲವಾರು ಸಂಘಟನೆಗಳು ಮೊಳಕೆಯೊಡೆದರೊಂದಿಗೆ ಊರಿಗಿಂತ ಸಂತುಷ್ಟವಾಗಿದೆ.ಹಲವಾರು ಸಾಮಾಜಿಕ ಸೇವೆಯ ಮೊಲಕ ನಾಡಿನ ಬಡನಿರ್ಗತಿಕ ಹಾಗೂ ಜಾತಿ ಧರ್ಮಗಳ ತಾರತಮ್ಯ ನೋಡದೆ ಯಾವುದೇ ಸಂಕಷ್ಟಗಳಲ್ಲಿ ಸಿಲುಕಿಕೊಂಡರೆ ಬೇಕಾದ ಎಲ್ಲಾ ಸಹಾಯ ಸಹಕಾರವನ್ನು ಸಂಘಟನೆಯ ಮೂಲಕ ಮಾಡುವುದರಲ್ಲಿ ಅನಿವಾಸಿಗಳೇ ಊರ್ಜಿತ ವಟವೃಕ್ಷವಾಗಿ ನಿಂತಿರುತ್ತಾರೆ.

ಅನಿವಾಸಿ ಮಿತ್ರರೇ..
ನಾವು ನಮ್ಮ ತಾಯಿ, ಪತ್ನಿ ಮಕ್ಕಳನ್ನು, ಎಲ್ಲವನ್ನೂ ಒತ್ತೆಯಿಟ್ಟು ವಿದೇಶಿ ಜೀವನ ನಡೆಸುವುದು ಕುಟುಂಬವನ್ನು ಸಂತೋಷವಾಗಿಸಲು ಮಾತ್ರ.ಅವರಿಗೆ ಕಾರ್ಯಕ್ರಮಗಳಿಗೆ ಬೇಕಾದ ಎಲ್ಲ ವ್ಯವಸ್ಥೆಯಲ್ಲಿ ಹೆಚ್ಚಿನ ಕಾಳಜಿ ವಹಿಸಿ ನಮ್ಮ ಜೀವನವನ್ನೇ ಮರೆಯುತ್ತೇವೆ.ಅಲ್ಲಾಹು ಎಲ್ಲ ಅನಿವಾಸಿಗಳ ಬಾಳಿನಲ್ಲಿ ಬರಕತ್ ನೀಡಲಿ ಆಮೀನ್.

ಆದರೆ ಕೆಲವರು ತಮ್ಮ ಅವಿವೇಕಿತನದಿಂದ ಹಾಸಿಗೆಯ ಫೂಟೋ ಅಥವಾ ಮಳಗುವ ಫೂಟೋ ಹಾಕುವುದನ್ನು ನೋಡಬಹುವುದು.ಇಂತಹ ಫೊಟೋಗಳಿಂದ ಆಗುವ ದುಷ್ಪರಿಣಾಮ ಎಷ್ಟರಮಟ್ಟಿಗೆ ಅಂದರೆ ಊರಿಗೆ ಕಾಲ್ ಮಾಡಿದಾಗ ಎಲ್ಲರಿಂದ ಬರುವ response ನಿಮಗೆ ಪೆರ್ನಾಲ್ ಇಲ್ಲವಂತೆ ಕೇವಲ ನಿದ್ರೆಗೆ ಜಾರೂದಂತೆ, ಅವರಿಗೆ ಹಾಗೇನಿಲ್ಲ ಇಲ್ಲಿ ಸಂತೋಷ (very happy) ವೆಂದು ಹೇಳಿದರು ಅವರಿಗೆ ನಂಬಿಕೆ ಮೂಡಲು ಅಸಾಧ್ಯವಾಗುತ್ತಿದೆ.

ಪೆರ್ನಾಲ್, ಎಲ್ಲಾ ಅನಿವಾಸಿಗಳು ಪೆರ್ನಾಲಿನ ಮುಂಜಾನೆ ಅತ್ಯುತ್ಸಾಹದಿಂದ ತನ್ನ ರೂಮಿನಲ್ಲಿರುವ friends ನೊಂದಿಗೆ ಮಸೀದಿಯ ಕಡೆಗೆ ಹೋಗುವ ದೃಶ್ಯವನ್ನು ವರ್ಣಿಸಲು ಅಸಾಧ್ಯ .
ಊರಿನಲ್ಲಿ ಉಸ್ತಾದರುಗಳು ಮೈಕ್ ನಲ್ಲಿ ಹೇಳುವುದಾದರೆ ಇಲ್ಲಿನ special ಪುಟ್ಟ ಪುಟ್ಟ ಮಕ್ಕಳಿಂದ ಇಂಪಾದ ತಕ್ಬೀರ್ ಧ್ವನಿ ಕೇಳಬಹುದು. ಪ್ರತ್ಯೇಕವಾಗಿ ಎಲ್ಲಾ ರಾಷ್ಟ್ರಗಳ ಶಾಂತಿಗಾಗಿ ಇಮಾಮ್ ದುಃಆ ಮಾಡಿ ಎಲ್ಲರೊಂದಿಗೆ ಬೆರೆತು ಎಲ್ಲರನ್ನೂ ಸಂತೋಷಗೊಳಿಸುತ್ತಾರೆ.

ಊರಿನಂತೆ ತಮ್ಮ ತಮ್ಮ ಸಂತೋಷವನ್ನು ವಿನಿಮಯ ಗೊಳಿಸಿ ಮಸೀದಿಯ ಹೊರಾಂಗಣದಲ್ಲಿ ಬಂದು ಗ್ರೂಪ್ ಪೋಟೋಗಳನ್ನು ತೆಗೆದುಕೊಳ್ಳವ ರೀತಿ ನೋಡಿದರೆ ಮರುಭೂಮಿಯಲ್ಲೊಂದು ನೆರಳಿನ ಅಣುಭವ ಬಾಸವಾಗುತ್ತದೆ.

ಇದೇ ರೀತಿಯಲ್ಲಿ ಹಲವು ಕಾರ್ಯಕ್ರಮದಲ್ಲಿ ಬ್ಯುಸಿ ಇರುವ ಅನಿವಾಸಿಗೆ ಚಾಪೆಯತ್ತ ಸಾಗುವುದು ಬಿಡಿ ನಿದ್ರೆ ಇಲ್ಲದೆ ಪೆರ್ನಾಲ್ ನ್ನು ಸ್ವಾಗತಿಸುತ್ತಾನೆ.ನಮ್ಮೆಲ್ಲ ಅನಿವಾಸಿ ಮಿತ್ರರಿಗೆ ಪೆರ್ನಾಲ್ ಹಬ್ಬದ ದಿನ ಸಂತಸಪಡುಲು ಅಲ್ಲಾಹು ತೌಪೀಕ್ ನೀಡಲಿ ಆಮೀನ್.

✍ಹಸೈನಾರ್ ಮೊಂಟೆಪದವು

Leave a Reply

Your email address will not be published. Required fields are marked *

error: Content is protected !!