janadhvani

Kannada Online News Paper

ದಕ್ಷಿಣ ಕನ್ನಡದಲ್ಲಿ ಬುಧವಾರ ಈದುಲ್ ಫಿತ್ರ್- ಜಿಲ್ಲಾ ಸಂಯುಕ್ತ ಖಾಝಿ ಕೂರತ್ ತಂಙಳ್

ಈ ವರದಿಯ ಧ್ವನಿಯನ್ನು ಆಲಿಸಿ


ಮಂಗಳೂರು.ಜೂನ್,3: ಇಂದು ರಾತ್ರಿ ಶವ್ವಾಲ್ ತಿಂಗಳ ಚಂದ್ರ ದರ್ಶನವಾಗದ ಹಿನ್ನೆಲೆಯಲ್ಲಿ ರಮಳಾನ್ 30 ಪೂರ್ತೀಕರಿಸಿ, 05-06-2019 ಬುಧವಾರ ಈದುಲ್ ಫಿತ್ರ್ ( ಪೆರ್ನಾಲ್ ಹಬ್ಬ ) ಆಗಿರುತ್ತದೆ ಎಂದು ಉಳ್ಳಾಲ ಹಾಗೂ ದ.ಕ.ಜಿಲ್ಲಾ ಸಂಯುಕ್ತ ಖಾಝಿ ಗೌರವಾನ್ವಿತ ಖುರ್ರತುಸ್ಸಾದಾತ್ ಅಸ್ಸಯ್ಯಿದ್ ಫಝಲ್ ಕೋಯಮ್ಮ ಮದನಿ ಅಲ್ ಬುಖಾರಿ ಕೂರತ್ ತಂಙಳ್ ಪ್ರಕಟಣೆ ಯಲ್ಲಿ ತಿಳಿಸಿರುತ್ತಾರೆ.

ಚಂದ್ರ ದರ್ಶನವಾಗದ ಹಿನ್ನಲೆಯಲ್ಲಿ ಜೂನ್ 5 ಬುಧವಾರ ಈದುಲ್ ಫಿತ್ರ್ ಹಬ್ಬ ಆಗಿರುತ್ತದೆ ಎಂದು ಮಂಗಳೂರು ಹಾಗೂ ದ.ಕ.ಜಿಲ್ಲಾ ಸಂಯುಕ್ತ ಖಾಝಿ ಅಲ್ ಹಾಜ್ ತ್ವಾಖಾ ಅಹ್ಮದ್ ಅಲ್ ಅಝ್ಹರಿ ಉಸ್ತಾದ್ ರವರು ಘೋಷಿಸಿದ್ದಾರೆ.

ಉಡುಪಿ,ಚಿಕಮಗಳೂರು ಜಿಲ್ಲೆಯಲ್ಲಿ ಬುಧವಾರ ಈದ್ ಆಚರಣೆ

ಉಡುಪಿ: ಸೋಮವಾರ ರಾತ್ರಿ ಚಂದ್ರ ದರ್ಶನವಾಗದ ಹಿನ್ನಲೆಯಲ್ಲಿ ರಮಳಾನ್ 30 ಪೂರ್ತೀಕರಿಸಿ ಜೂನ್ 5 ಬುಧವಾರದಂದು ಈದುಲ್ ಫಿತ್ರ್ ಆಚರಿಸಲಾಗುವುದು ಎಂದು ಉಡುಪಿ , ಚಿಕಮಗಳೂರು, ಹಾಸನ ಜಿಲ್ಲಾ ಸಂಯುಕ್ತ ಖಾಝಿ ತಾಜುಲ್ ಫುಖಹಾಹ್ ಬಹು: ಬೇಕಲ್ ಇಬ್ರಾಹಿಂ ಮುಸ್ಲಿಯಾರ್ ಘೋಷಿಸಿರುವುದಾಗಿ ಪ್ರಕಟನೆಯಲ್ಲಿ ತಿಳಿಸಲಾಗಿದೆ.

error: Content is protected !! Not allowed copy content from janadhvani.com