janadhvani

Kannada Online News Paper

ಬಿಜೆಪಿ ಅಧಿಕಾರಕ್ಕೆ ಬಂದದ್ದರಿಂದ ಮುಸ್ಲಿಮರು ಆತಂಕಗೊಳ್ಳುವ ಅಗತ್ಯವಿಲ್ಲ-ಉವೈಸಿ

ಈ ವರದಿಯ ಧ್ವನಿಯನ್ನು ಆಲಿಸಿ


ಹೈದರಾಬಾದ್: ಬಿಜೆಪಿ ಅಧಿಕಾರಕ್ಕೆ ಬಂದದ್ದಕ್ಕಾಗಿ ದೇಶದಲ್ಲಿರುವ ಮುಸ್ಲಿಮರು ಆತಂಕಗೊಳ್ಳುವ ಅಗತ್ಯವಿಲ್ಲ ಎಂದು ಎಐಎಂಐಎಂ ನಾಯಕ ಅಸದುದ್ದೀನ್ ಉವೈಸಿ ಹೇಳಿದರು.ಇಲ್ಲಿನ ಮಕ್ಕಾ ಮಸೀದಿಯಲ್ಲಿ ಮೇ.31ರಂದು ನಡೆದ ಜುಮುಅತುಲ್ ವಿದಾದಲ್ಲಿ (ರಮಝಾನಿನ ಕೊನೆಯ ಶುಕ್ರವಾರ) ಅವರು ಮಾತನಾಡುತ್ತಿದ್ದರು.

ಮೋದಿ ದೇವಸ್ಥಾನಕ್ಕೆ ಹೋಗಬಹುದಾದರೆ ನಾವು ಮಸೀದಿಗೆ ಹೋಗಬಹುದು. ಮೋದಿಗೆ ಗುಹೆಯಲ್ಲಿ ಕುಳಿತುಕೊಳ್ಳಲು ಸಾಧ್ಯವಾಗುವುದಾದರೆ ನಮ್ಮ ಮಸೀದಿಯಲ್ಲಿ ನಮಗೂ ಕುಳಿತುಕೊಳ್ಳಬಹುದು ಎಂದು ತುಂಬು ಅಭಿಮಾನದಿಂದ ಹೇಳುತ್ತೇನೆ.

ಬಿಜೆಪಿ 300ಕ್ಕೂ ಹೆಚ್ಚು ಸಂಸದ ಸ್ಥಾನ ಗಳಿಸಿದ್ದೇನೂ ದೊಡ್ಡ ವಿಷಯವಲ್ಲ. ಭಾರತಕ್ಕೆ ಒಂದು ಸಂವಿಧಾನ ಇದೆ. ಬಿಜೆಪಿ 300 ಸೀಟು ಪಡೆದ ಕೂಡಲೇ ನಮ್ಮ ಹಕ್ಕುಗಳನ್ನು ಕಿತ್ತೆಸೆಯಲು ಸಾಧ್ಯವಿಲ್ಲ. ಪ್ರತಿಯೊಬ್ಬ ಪ್ರಜೆಗೂ ಧಾರ್ಮಿಕ ಸ್ವಾತಂತ್ರ್ಯದ ಭರವಸೆಯನ್ನು ಸಂವಿಧಾನ ಕೊಡುತ್ತಿದೆ. ಮುಸ್ಲಿಮರನ್ನು ಪ್ರಜೆಗಳಂತೆ ಪರಿಗಣಿಸಬೇಕು. ವಲಸೆ ಬಂದವರಂತೆ ಅವರಲ್ಲಿ ವರ್ತಿಸಬಾರದು ಎಂದು ಅಸದುದ್ದೀನ್ ಉವೈಸಿ ಹೇಳಿದರು. ಐಎಎಂಐಎಂ ಮುಖ್ಯ ನಾಯಕರಾಗಿರುವ ಅವರು ನಾಲ್ಕನೆ ಬಾರಿಗೆ ಹೈದರಾಬಾದಿನಿಂದ ಸಂಸತ್ತಿಗೆ ಆಯ್ಕೆಯಾಗಿದ್ದಾರೆ.

error: Content is protected !! Not allowed copy content from janadhvani.com