ಸೌದಿ: ಎನರ್ಜಿ ಡ್ರಿಂಕ್ಸ್,ಇಲೆಕ್ಟ್ರಾನಿಕ್ ಸಿಗರೇಟ್‌ಗಳಿಗೆ 100% ವ್ಯಾಟ್

ರಿಯಾದ್: ಸಿಹಿ ಪಾನೀಯಗಳು, ಇಲೆಕ್ಟ್ರಾನಿಕ್ ಸಿಗರೇಟ್‌ಗಳು, ಇಲೆಕ್ಟ್ರಾನಿಕ್ ಸಿಗರೇಟ್‌ಗೆ ಉಪಯೋಗಿಸಲಾಗುವ ಪ್ಲೇವರ್‌ಗಳು ಮುಂತಾದವುಗಳನ್ನು ಮೌಲ್ಯವರ್ಧಿತ ತೆರಿಗೆಯ ವ್ಯಾಪ್ತಿಗೆ ಸೇರಿಸಿದ ಇನ್‌ ಕಮ್ ಟ್ಯಾಕ್ಸ್ ಅಥಾರಿಟಿಯು ವ್ಯಾಟ್ ಕರಡಿನಲ್ಲಿ ಬದಲಾವಣೆ ತಂದಿದೆ.

ಅಭಿವೃದ್ಧಿ ನಡೆಸಲಾದ ನಿಯಮಾವಳಿ ಪ್ರಕಾರ ಹೊಗೆ ಸೊಪ್ಪು ಉತ್ಪನ್ನಗಳು, ಎನರ್ಜಿ ಡ್ರಿಂಕ್ಸ್, ಇಲೆಕ್ಟ್ರಾನಿಕ್ ಸಿಗರೇಟ್‌ಗಳು ಮತ್ತು ಅವುಗಳಿಗೆ ಉಪಯೋಗಿಸುವ ಲಾಯನಿಗಳಿಗೆ ಶೇ.100 ಮೌಲ್ಯವರ್ಧಿತ ತೆರಿಗೆಯನ್ನು ಪಡೆಯಲಾಗುವುದು. ಅದೇ ವೇಳೆ ಸಾಫ್ಟ್ ಡ್ರಿಂಕ್ಸ್, ಸಿಹಿ ಪಾನಿಯಗಳಿಗೆ 50 ಶೇ. ತೆರಿಗೆ ವಿಧಿಸಲಾಗುತ್ತದೆ.

2017 ಜೂನ್ 11ರಿಂದ ಸೌದಿ ಅರೇಬಿಯಾ ಮೌಲ್ಯವರ್ಧಿತ ತೆರಿಗೆಯನ್ನು ಜಾರಿಗೆ ತಂದಿದೆ. ಪ್ರಥಮ ಹಂತದಲ್ಲಿ ತಂಬಾಕು ಉತ್ಪನ್ನಗಳು, ಸಾಫ್ಟ್ ಡ್ರಿಂಕ್ಸ್ ಎನರ್ಜಿ ಡ್ರಿಂಕ್ಸ್ ಮುಂತಾದವುಗಳಿಗೆ ತೆರಿಗೆ ವಿಧಿಸಲಾಗಿ, ನಂತರ ಇತರ ಉತ್ಪನ್ನಗಳನ್ನೂ ವ್ಯಾಟ್‌ನ ವ್ಯಾಪ್ತಿಗೆ ತರಲಾಗಿತ್ತು. ಸೌದಿಯ ಬಳಿಕ ಇತರ ಗಲ್ಫ್ ದೇಶಗಳು ಕೂಡ ಈ ತೆರಿಗೆಯನ್ನು ಜಾರಿಗೆ ತಂದಿದೆ.

Leave a Reply

Your email address will not be published. Required fields are marked *

error: Content is protected !!