janadhvani

Kannada Online News Paper

ಕೆಸಿಎಫ್ ಬಹರೈನ್ ಸಲ್ಮಾಬಾದ್ ಸೆಕ್ಟರ್ ಗೆ ನವ ಸಾರಥ್ಯ

ಮನಾಮ: ಕರ್ನಾಟಕ ಕಲ್ಚರಲ್ ಫೌಂಡೇಷನ್ ಸಲ್ಮಾಬಾದ್ ಸೆಕ್ಟರ್ ಬಹರೈನ್ ಇದರ ಅಧೀನದಲ್ಲಿ ನಡೆಸಿಕೊಂಡು ಬರುವಂತಹ ಮಾಸಿಕ ಸ್ವಲಾತ್ ಮಜ್ಲಿಸ್ ಮತ್ತು ಸೆಕ್ಟರ್ನ ವಾರ್ಷಿಕ ಮಹಾಸಭೆಯು ನೋರ್ತ್ ಸೆಹ್ಲಾದಲ್ಲಿ ಸೆಕ್ಟರ್ ಅಧ್ಯಕ್ಷರಾದ ನವಾಜ್ ಮುಡಿಮಾರ್ ಅದ್ಯಕ್ಷತೆಯಲ್ಲಿ ಅಬ್ದುಲ್ಲಾ ಸಖಾಫಿ ಎರ್ಮಾಡ್ ಉಸ್ತಾದರ ದುವಾದೊಂದಿಗೆ ಆರಂಭಗೊಂಡಿತು.

ಸೆಕ್ಟರ್ ಪ್ರಧಾನ ಕಾರ್ಯದರ್ಶಿಯಾದ ಆಸಿಫ್ ರೆಂಜಾಡಿಯವರು ಬಂದ ಎಲ್ಲಾ ಅತಿಥಿಗಳನ್ನು ಸ್ವಾಗತಿಸಿದರು. ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಹಾರಿಸ್ ಸಂಪ್ಯ ಸಭೆಯನ್ನು ಉದ್ಘಾಟಿಸಿ ಸಂಘಟನೆಯ ಧ್ಯೇಯೋದ್ದೇಶಗಳನ್ನು ವಿವರಿಸಿದರು.

ಕಳೆದ ವರ್ಷದ ವರದಿಯನ್ನು ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಆಸಿಫ್ ರೆಂಜಾಡಿ ವಾಚಿಸಿದರೆ ಲೆಕ್ಕಾಚಾರವನ್ನು ಕೋಶಾಧಿಕಾರಿ ರವೂಫ್ ರೆಂಜಾಡಿ ಸಭೆಯಲ್ಲಿ ಮಂಡಿಸಿದರು.ಅಧ್ಯಕ್ಷೀಯ ಭಾಷಣವನ್ನು ಮಾಡಿದ ಸೆಕ್ಟರ್ ಅಧ್ಯಕ್ಷ ನವಾಜ್ ಮುಡಿಮಾರ್ ಮಾತನಾಡುತ್ತಾ ಸೆಕ್ಟರ್ನ ಕಾರ್ಯ ಚಟುವಟಿಕೆಗಳಿಗೆ ಕೈ ಜೋಡಿಸಿದ ಎಲ್ಲಾ ಕಾರ್ಯಕರ್ತರನ್ನು ಅಭಿನಂದಿಸುತ್ತಾ,ಇನ್ನು ಮುಂದೆಯೂ ಇನ್ನಷ್ಟು ಅಭಿವೃದ್ಧಿಯನ್ನು ಸಾಧಿಸಲು ನಾವೆಲ್ಲರೂ ಕಾರ್ಯೋನ್ಮುಖ ರಾಗೋಣ ಎಂದರು.

ದಿಕ್ಸೂಚಿ ಭಾಷಣವನ್ನು ಮಾಡಿದ ಕೆ ಸಿ ಎಫ್ ಐ ಎನ್ ಸಿ ಸಾಂತ್ವನ ವಿಭಾಗದ ಅಧ್ಯಕ್ಷರಾದ ಜಮಾಲ್ ವಿಠ್ಠಲ್ ರವರು ಮಾತನಾಡುತ್ತಾ ಸಲ್ಮಾಬಾದ್ ಸೆಕ್ಟರ್ ಕಳೆದ ವರ್ಷಗಳಲ್ಲಿ ನಡೆಸಿದ ಕಾರ್ಯ ವೈಖರಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಅಕೈಕುಂ ಬಿಲ್ ಜಮಾಅದಲ್ಲಿ ಅತೀ ಹೆಚ್ಚು ಸದಸ್ಯತ್ವವನ್ನು ಮಾಡಿದ ಸಲ್ಮಾಮಾದ್ ಸೆಕ್ಟರ್ ಸಾಧನೆಯನ್ನು ಶಾಘಿಸಿದರು.

ಕೆ ಸಿ ಎಫ್ ರಾಷ್ಟ್ರೀಯ ಸಮಿತಿಯ ಇಹ್ಸಾನ್ ಕಾರ್ಯದರ್ಶಿ ಮಜೀದ್ ಮಾದಾಪುರ ಮಾತನಾಡಿ ಕೆ ಸಿ ಎಫ್ ಸಲ್ಮಾಬಾದ್ ಸೆಕ್ಟರ್ ನಡೆಸಿಕೊಂಡು ಬರುವ ಸಾಹಿತ್ಯ ಸಮಾಜದದಿಂದ ಹಲವಾರು ಪ್ರತಿಭೆಗಳು ಹೊರ ಹೊಮ್ಮಲು ಸಾಧ್ಯವಾಗಿದೆ ಎಂದರು.

ಸೆಕ್ಟರಿನ ಎಲ್ಲಾ ಪದಾಧಿಕಾರಿಗಳು ಮತ್ತು ಸದಸ್ಯರ ನಿರ್ದೇಶನ ಮೇರೆಗೆ ಹಳೆ ಸಮಿತಿಯನ್ನು ಬರ್ಕಾಸ್ತು ಗೊಳಿಸಲಾಯಿತು.

ಚುನಾವಣಾ ಅಧಿಕಾರಿಯಾಗಿ ಆಗಮಿಸಿದ ಕೆ ಸಿ ಎಫ್ ಬಹರೈನ್ ರಾಷ್ಟ್ರೀಯ ಸಮಿತಿಯ ಸ್ಕಿಲ್ ಡೆವೆಲಪ್ಪ್ಮೆಂಟ್ ಚೇರ್ಮ್ಯಾನ್ ಬಶೀರ್ ಕಾರ್ಲೆಯವರು ಪ್ಯಾನೆಲ್ ಓದುವ ಮೂಲಕ ಹೊಸ ಸಮಿತಿಯನ್ನು ಘೋಷಿಸಿಸರು.

ಕೆ. ಸಿ .ಎಫ್ ಸಲ್ಮಾಬಾದ್ ಸೆಕ್ಟರ್ ಬಹರೈನ್

2019-2021 ಸಾಲಿನ ನೂತನ ಪದಾಧಿಕಾರಿಗಳು

ಅಧ್ಯಕ್ಷರು : ನವಾಜ್ ಮಂಜೇಶ್ವರ್

ಪ್ರಧಾನ ಕಾರ್ಯದರ್ಶಿ : ಆಸಿಫ್ ರೆಂಜಾಡಿ

ಕೋಶಾಧಿಕಾರಿ : ಅಬ್ದುಲ್ ರವೂಫ್ ರೆಂಜಾಡಿ

ಸಂಘಟನಾ ಇಲಾಖೆ

ಅಧ್ಯಕ್ಷರು : ಮಾಝಿನ್ ಎರ್ಮಾಳ್
ಸಂಘಟನಾ ಕಾರ್ಯದರ್ಶಿ : ಅಶ್ರಫ್ ಮಡಂತ್ಯಾರ್

ಶಿಕ್ಷಣಾ ಇಲಾಖೆ :

ಅಧ್ಯಕ್ಷರು:
ಅಬ್ದುಲ್ಲಾ ಸಖಾಫಿ ಎರ್ಮಾಡ್
ಕಾರ್ಯದರ್ಶಿ : ಅಬ್ದುಲ್ ಖಾದರ್ ಜೀಲಾನಿ ಉಳ್ಳಾಲ

ಸಾಂತ್ವಾನ ಇಲಾಖೆ :

ಅಧ್ಯಕ್ಷರು : ಶಾಕಿರ್ ಕಂಬಳಬೆಟ್ಟು
ಕಾರ್ಯದರ್ಶಿ : ನೌಫಲ್ ರೆಂಜಾಡಿ

ಪ್ರಕಾಶನ ಇಲಾಖೆ :

ಅಧ್ಯಕ್ಷರು : ಸ್ವಾದಿಕ್ ಸಂಪಾಜೆ
ಕಾರ್ಯದರ್ಶಿ : ಸಲ್ಮಾನ್ ಫಾರಿಸ್ ಬೇಕೂರ್

ಆಡಳಿತ ಇಲಾಖೆ
ಅಧ್ಯಕ್ಷರು : ಉಬೈದುಲ್ಲಾ ಉಳ್ಳಾಲ
ಕಾರ್ಯದರ್ಶಿ: ಶಕೀಲ್ ರೆಂಜಾಡಿ

ಇಹ್ಸಾನ್ ಇಲಾಖೆ:

ಅಧ್ಯಕ್ಷರು : ನೂರ್ ಮುಹಮ್ಮದ್ ಸೂರಿಂಜೆ
ಕಾರ್ಯದರ್ಶಿ : ಸ್ವಾದಿಕ್ ಕಂಬಳಬೆಟ್ಟು

ಕಾರ್ಯಕಾರಿ ಸಮಿತಿ ಸದಸ್ಯರು:

ಉಮ್ಮರ್ ಉಸ್ತಾದ್ ಉಪ್ಪಿನಂಗಡಿ,ರಶೀದ್ ಸುಳ್ಯ, ನೌಫಲ್ ಜೋಕಟ್ಟೆ, ಫೈಝಲ್ ಗಂಗೊಳ್ಳಿ, ಜಾಬಿರ್ ಸಕ್ಲೇಶಪುರ, ಹಸೈನಾರ್ ಸಕ್ಲೇಶಪುರ, ಮುನೀರ್ ತೋಕೆ, ರಿಯಾಜ್ ಕೋಟ, ಅಝೀಜ್ ಕೋಟ, ಮುಖ್ತರ್ ಹಸನ್, ರಫೀಕ್ ಮುಡಿಮಾರ್.

ಕೆ.ಸಿ.ಎಫ್ ರಾಷ್ಟ್ರೀಯ ಸಮಿತಿ ಸಂಘಟನಾ ಇಲಾಖೆ ಅಧ್ಯಕ್ಷ ಇಕ್ಬಾಲ್ ಮಂಜನಾಡಿ, ಇಹ್ಸಾನ್ ಕಾರ್ಯದರ್ಶಿ ಮಜೀದ್ ಮಾದಾಪುರ , ಶಿಕ್ಷಣ ಕಾರ್ಯದರ್ಶಿ ತೌಫೀಕ್ ಬೆಳ್ತಂಗಡಿ, ಕೆ.ಸಿ.ಎಫ್ ಒರ್ಗನೈಸೇರ್ ವೇನೂರ್ ಮುಹಮ್ಮದ್ ಮುಸ್ಲಿಯಾರ್,ಸೌತ್ ಝೋನ್ ಅಧ್ಯಕ್ಷರಾದ ಮನ್ಸೂರ್ ಬೆಳ್ಮ ,ಪ್ರಧಾನ ಕಾರ್ಯದರ್ಶಿ ಅಶ್ರಫ್ ರೆಂಜಾಡಿ, ಮತ್ತು ಇತರ ಸೆಕ್ಟರ್ ನೇತಾರರು ಸದಸ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ಅಶ್ರಫ್ ರೆಂಜಾಡಿ ಮಾಡಿದರು. ಕೊನೆಗೆ ನೂತನ ಕಾರ್ಯದರ್ಶಿ ಆಸೀಫ್ ರೆಂಜಾಡಿ ದನ್ಯವಾದವಿತ್ತರು.

error: Content is protected !! Not allowed copy content from janadhvani.com