ಕಲ್ಲಿಕೋಟೆ.ಏ,29: ಇಲ್ಲಿನ ಸಮಸ್ತಾಲಯಂ ನಲ್ಲಿ ಕರೆದ ಪತ್ರಿಕಾ ಪತ್ರಿಕಾಗೋಷ್ಠಿಯಲ್ಲಿ ಎ.ಪಿ.ಉಸ್ತಾದರ ಇಂಡಿಯನ್ ಗ್ರಾಂಡ್ ಮುಫ್ತಿ ಪದವಿ ನಕಲಿ ಎಂದು ಕೂರಿಯಾಡ್ ನದ್ವಿ ಸಾಹಿಬರು ಹೇಳಿದ್ದಾರೆ.
ಚೇಲಾರಿ ಸಮಸ್ತದ ಕಾರ್ಯದರ್ಶಿ ಆಲಿಕುಟ್ಟಿ ಮುಸ್ಲಿಯಾರರು ಪತ್ರಿಕಾಗೋಷ್ಠಿಯ ಉದ್ದೇಶವನ್ನು ವಿವರಿಸಿದಾಗ ಬಹು ನಿರೀಕ್ಷೆಯಿಂದ ಆಗಮಿಸಿದ ಮಾಧ್ಯಮ ಪ್ರತಿನಿಧಿಗಳಿಗೆ ನಿರಾಸೆ ಕಾದಿತ್ತು. ಇದು ಅದೇ ರಾಗ, ಅದೇ ಹಾಡು ಕೇವಲ ಕಾಂತಪುರಂ ವಿರೋಧ ಅಷ್ಟೇ..
ಕೆಲವು ದಿನಗಳ ಹಿಂದೆ ಕೂರಿಯಾಡ್ ನದ್ವಿ ಸಾಹಿಬ್ ತನ್ನದೇ ಆದ ಪತ್ರಿಕೆಯಲ್ಲಿ ಇಂಡಿಯನ್ ಗ್ರಾಂಡ್ ಮುಫ್ತಿ ಪದವಿಯನ್ನು ನಕಲಿ ಎಂದು ಸ್ಥಾಪಿಸಲು ಸ್ವಂತವಾಗಿ ತಯಾರಿಸಿದ ಒಂದು ಲೆಟರ್ ಹೆಡ್ ನಲ್ಲಿ ಏನೇನೋ ಗೀಚಿ ಜನಸಾಮಾನ್ಯರನ್ನು ವಂಚಿಸಲು ವಿಫಲ ಯತ್ನ ನಡೆಸಿದ್ದರು. ಬುದ್ಧಿವಂತ ಜನರು ಅದಕ್ಕೆ ಮುಕ್ಕಾಸಿನ ಬೆಲೆಯನ್ನೂ ಕಲ್ಪಿಸದಾಗ ಪತ್ರಿಕಾಗೋಷ್ಠಿ ಎಂಬ ಪ್ರಹಸನ ನಡೆಸಲಾಗಿದೆ.
ಸುನ್ನೀ ಉಲಮಾ,ಉಮರಾ ಗಳು ಐಕ್ಯತೆಗಾಗಿ ಶ್ರಮಿಸುತ್ತಿರುವಾಗ ಜಗತ್ಪ್ರಸಿದ್ಧ ಪಂಡಿತರೋರ್ವರನ್ನು ತೇಜೋವಧೆ ಗೊಳಿಸಲು ಪತ್ರಿಕಾಗೋಷ್ಠಿ ನಡೆಸಿದ ವಿರುದ್ಧ ಸಾಮಾಜಿಕ ತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
—————————————-
ಗ್ರಾಂಡ್ ಮುಫ್ತಿ ಮತ್ತು ನದ್ವಿ ಸಾಹಿಬರ ಪತ್ರಿಕಾಗೋಷ್ಠಿ…!
✍ಇಮ್ತಿ ಬೈರಿಕಟ್ಟೆ…
ನಿಮಗೆ ನೆನಪಿರಬಹುದು ಹದಿನೈದು ವರ್ಷಗಳ ಮುಂಚೆ ಒಂದು ಪ್ರಸ್ ಕ್ಲಬ್ ಕರೆಯಲಾಯಿತು.ಅದೂ ಸಮಸ್ತದ ಹೆಸರಲ್ಲಿ.ನಾಸರ್ ಫೈಝಿ ಕೂಟ್ಟತ್ತಾಯಿ ಆಗಿದ್ದರು ಅಂದಿನ ಕಮಾಂಡರ್.
ಪತ್ರಕಾಗೋಷ್ಠಿ ಕರೆದು ಅವರು ಹೇಳಿದ್ದೇನು ಗೊತ್ತೇ? ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರ್ ಗೆ ಕಾಶ್ಮೀರದ ಉಗ್ರವಾದಿಗಳೊಂದಿಗೆ ನಂಟಿದೆ.ಹಾಗಾಗಿ ಕಾಶ್ಮೀರದಿಂದ ಮಕ್ಕಳನ್ನು ಕೇರಳದ ಮರ್ಕಝ್ ಗೆ ಕರೆತಂದು ಬೆಳೆಸುತಿದ್ದಾರೆ.
ಕಾಂತಪುರಂಗೆ ಉಗ್ರರಿಂದ ದೊಡ್ಡ ಫಂಡ್ ಲಭಿಸುತ್ತಿದೆ.ಕಾಂತಪುರಂ ರವರನ್ನು ತೀವ್ರ ವಿಚಾರಣೆಗೆ ಒಳಪಡಿಸಬೇಕೆಂದು ಹೇಳುತ್ತಾ ಎಪಿ ಉಸ್ತಾದರನ್ನು ಅತೀ ದೊಡ್ಡ ಭಯೋತ್ಪಾದಕನಾಗಿ ಚಿತ್ರೀಕರಿಸಿ ಅಬ್ದುನ್ನಾಸರ್ ಮಅದಿನಿಯಂತೆ ಕೊನೆಯುಸಿರು ತನಕ ಜೈಲಲ್ಲಿ ಕೊಳೆಯುವಂತೆ ಮಾಡುವಲ್ಲಿ ತೀವ್ರ ಪ್ರಯತ್ನ ಪಟ್ಟಿದ್ದರು.
ಆದರೆ ಮಹಾತ್ಮರ ದುಆ ಬರಕ್ಕತ್ತಿನಿಂದ ಅದು ಸಾದ್ಯವಾಗಲಿಲ್ಲ.
ಈಗ ಏನಾಯಿತು?
ಕೇವಲ ಗುಂಡಿನ ಶಬ್ದಗಳನ್ನು ಮಾತ್ರ ಕೇಳಿ ಬೆಳಗ್ಗೆ ಏದ್ದೇಳುತ್ತಿದ್ದ ಆ ಕಾಶ್ಮೀರದ ಮಕ್ಕಳು,ವಿಧ್ಯಾಭ್ಯಾಸವಿಲ್ಲದೆ ನಿರುದ್ಯೋಗಿಗಳಾಗಿ ಉಗ್ರರ ತೆಕ್ಕೆಗೆ ಸೇರಿ ತನ್ನನ್ನೇ ತಾನು ಸ್ಪೋಟಿಸಿ ನಾಯಿ ಸತ್ತಂತೆ ಸಾಯಬೇಕಾಗಿದ್ದ ಆ ಮಕ್ಕಳು ಇಂದು ಮರ್ಕಝ್ ನಲ್ಲಿ ಕಲಿತು ಡಾಕ್ಟರ್, ಇಂಜಿನಿಯರ್,ಲಾಯರ್ ಗಳಾಗಿ ಸಮಾಜದ ಮುಖ್ಯವಾಹಿನಿಗೆ ಬಂದು ಕಾಶ್ಮೀರದಲ್ಲಿ ಸುಂದರ ಭಾರತಕ್ಕಾಗಿ ದುಡಿಯುತ್ತಿದ್ದಾರೆ.
ಮರ್ಕಝ್ ಗೆ ಬರುವಾಗ ಪಾಕಿಸ್ತಾನ ಜೈ ಅನ್ನುತ್ತಿದ್ದವರು ಈಗ ಭಾರತ ಪರ ಘೋಷಣೆ ಮೊಳಗಿಸುತ್ತಿದ್ದಾರೆ.
ಸಮಸ್ತ ಪತ್ರಿಕಾಗೋಷ್ಠಿ ಕರೆಯುತ್ತದೆಯೆಂದು ತಿಳಿದಾಗ,ಎಪಿ ಉಸ್ತಾದ್ 30 ಸಾವಿರ ಕೋಟಿ ರೂಪಾಯಿಯ ಮರ್ಕಝ್ ನಾಲೆಜ್ಡ್ ಸಿಟಿ ಯೋಜನೆ 2020 ಮಾರ್ಚಲ್ಲಿ ಸಮಾಜಕ್ಕೆ ಅರ್ಪಿಸಿ 25 ಸಾವಿರ ಉದ್ಯೋಗ ಸ್ರಷ್ಟಿಮಾಡುವಾಗ ಇವರು ಕೂಡಾ ಅಂತಹ ಸಮುದಾಯಕ್ಕೆ ಉಪಕಾರವಾಗುವ ಬ್ರಹತ್ ಯೋಜನೆಯ ಕುರಿತು ಪತ್ರಿಕಾಗೋಷ್ಠಿ ಕರೆಯುತ್ತಿರಬಹುದು ಎಂದು ಮಾಧ್ಯಮದವರು ಧಾವಿಸಿದರು.
ಆದರೆ ಕೇವಲ ಜುಜುಬಿ ಪತ್ರಿಕಾಗೋಷ್ಠಿಯೆಂತು ಅರಿತಾಗ ಅಸಹ್ಯವಾಯಿತು.ಅದೂ ಕೂಡಾ ಪತ್ರಕರ್ತರಿಂದ ತೂರಿ ಬರುವ ಪ್ರಶ್ನೆಗಳಿಗೆ ಸರಿಯಾದ ಉತ್ತರ ಕೊಡಲಾಗದೆ ನದ್ವಿ ಸಾಹಿಬ್ ಆಗಾಗ ನೀರು ಕುಡಿಯುತ್ತಿರುವುದು ಕಾಣಬಹುದು.ಅತ್ಯಂತ ರಹಸ್ಯವಾಗಿ ಆಲಿ ಕುಟ್ಟಿ ಉಸ್ತಾದರೊಂದಿಗೆ ತನ್ನದೇ ವಿಭಾಗದ ಮುಸ್ಲಿಯಾರರಾದ ಉಮರ್ ಫೈಝಿಯ ಕುರಿತು “ಫೈಝಿ ಬಂದಿದ್ದರೆ ಇನ್ನಷ್ಟು ಹೇಸಿಗೆಯಾಗುತ್ತಿತ್ತು” ಎಂದೆಲ್ಲ ಹೇಳುವಾಗ ಮೈಕ್ ಓನ್ ಆಗಿತ್ತು!
ರಹಸ್ಯ ಮಾತು ಬಹಿರಂವಾಗಿ ಪತ್ರಿಕಾಗೋಷ್ಠಿ ನಗೆಪಾಟೀಲಾಯಿತು!
ಅದರೆಡೆಯಲ್ಲೂ ಸಮಾಧಾನಕರವಾದ ಸಂಗತಿಯೆಂದರೆ ಇವರ ಕಚ್ಚರಗೋಷ್ಠಿಗೆ ಸಮಸ್ತ ಅಧ್ಯಕ್ಷರಾದ ಸಯ್ಯದ್ ಜಿಫ್ರಿ ಮುತ್ತುಕೋಯ ತಂಙಳ್ ಗೈರ್ ಹಾಜರಾಗಿದ್ದರು!
ಮರ್ಕಝ್ ನೋಲೆಡ್ಜ್ ಸಿಟಿ ಗೆ 5 ಸೆಂಟ್ಸ್ ಸ್ಥಳ ಇಲ್ಲ ಎಂದು ಹೇಳಿದ ಇವರು ಕೊನೆಗೆ 110 ಎಕರೆ ಭೂಮಿಯಲ್ಲಿ ನೋಲೆಡ್ಜ್ ಸಿಟಿ ಬರುತ್ತದೆ ಎಂದರಿತಾಗ ಅದರ ಶಂಕುಸ್ಥಾಪನೆಗೆ ಬರಲಿದ್ದ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಹೋಗಬಾರದೆಂದು ಇದೇ ನದ್ವಿ ಸಹಿತ ಸಮಸ್ತದ ಉನ್ನತ ನೇತಾರರು ತಡೆದಿದ್ದರು!
ಮಾತ್ರವಲ್ಲ ನೋಲೆಡ್ಜ್ ಸಿಟಿ ನಿರ್ಮಾಣಕ್ಕೆ ಸ್ಟೇ ತಂದು ತಿಂಗಳುಗಟ್ಟಲೆ ಅದರ ಕಾಮಗಾರಿ ತಟಸ್ಥವಾಗಿತ್ತು.ಈ ರೀತಿ ತಡೆ ತಂದೊಡ್ಡುವುದಕ್ಕೆ ಬೇಕಾಗಿ ಮಾತ್ರ ಕಾರ್ಯಾಚರಿಸಿ ಸಿಗುವ ಫಲವಾದರು ಏನು?
ಮರ್ಹೂಂ ನೂರುಲ್ ಉಲಮಾ ಎಂ ಎ ಉಸ್ತಾದರಲ್ಲಿ ಪತ್ರಕರ್ತರು ಕೇಳಿದರಂತೆ,
ಕೇರಳದಲ್ಲಿ ಎರಡು ಸಮಸ್ತ ಇದೆಯಲ್ಲಾ ಅದರೆಡೆಯಲ್ಲಿರುವ ವ್ಯತ್ಯಾಸ ಏನು?
ಆಗ ಉಸ್ತಾದ್ ತಟ್ಟನೆ ಉತ್ತರಿಸಿದರು.
“ನಮ್ಮದು ನಿರ್ಮಾಣ! ಅವರದ್ದು ಸಂಹಾರ!”
ನಿಜವಾಗಿಯೂ ಉಸ್ತಾದರ ಮಾತು ಎಷ್ಟೊಂದು ಸರಿ ಅಲ್ಲವಾ?
ನೂತನವಾದಿಗಳ ವಿರುದ್ಧ ಕಾರ್ಯಾಚರಿಸಲು ಆರಂಭಿಸಿದ ಸಮಸ್ತ, ವಹ್ಹಾಬಿಸಂ ಭಯೋತ್ಪಾದಕರಾಗಿ ಸ್ಪೋಟಗೊಳ್ಳುವ ಈ ಸಂಧರ್ಭದಲ್ಲಿ ವಿಶೇಷವಾಗಿ ಶ್ರೀಲಂಕಾದಲ್ಲಿ ನಡೆದ ಸ್ಫೋಟದ ಜಾಡು ಹಿಡಿದು ಕೇರಳಕ್ಕೆ ತನಿಖಾ ಸಂಘ ಬಂದ ಸಂದರ್ಭದಲ್ಲಿ ಅದರ ಕುರಿತು ಅಧಿಕೃತವಾಗಿ ಪತ್ರಿಕಾಗೋಷ್ಠಿ ಕರೆದಿದ್ದರೆ.ಆದಕ್ಕೊಂದು ಬೆಲೆ ಇರುತ್ತಿತ್ತು.
ಅದರೊಟ್ಟಿಗೆ ಸಮಸ್ತದ ಉಪಾಧ್ಯಕ್ಷರಾಗಿದ್ದ ಚೆಂಬರಿಕ ಖಾಝಿಯನ್ನು ಕೊಲೆ ಮಾಡಿದವರು ಮಂಗಳೂರು ಖಾಝಿ ತಾಖಾ ಅಹ್ಮದ್ ಮುಸ್ಲಿಯಾರ್ ಗೆ ಬೆದರಿಕೆ ಹಾಕಿದ ವಿಷಯದಲ್ಲಿ ಖಾಝಿಯವರೆ ಅಳಲು ತೋಡಿಕೊಂಡಿರುವ ಈ ಸಮಯದಲ್ಲಿ ಅದರ ಕುರಿತು ಅಧಿಕೃತ ಪ್ರಸ್ ಕ್ಲಬ್ ಕರೆದಿದ್ದರೆ ಮತ್ತಷ್ಟು ಘನತೆ ಸಿಗುತ್ತಿತ್ತು,ಜೊತೆಗೆ ಮಂಗಳೂರು ಖಾಝಿಗೆ ಮತ್ತಷ್ಟು ಮುಂದುವರೆಯಲು ಆನೆಬಲ ಸಿಗುತ್ತಿತ್ತು.
ಇಷ್ಟೆಲ್ಲಾ ಅವಕಾಶಗಳಿದ್ದರೂ ಅದ್ಯಾವುದರ ಬಗ್ಗೆ ಚಕಾರವೆತ್ತದೆ ಕೇವಲ ಗ್ರಾಂಡ್ ಮುಫ್ತಿ ವಿಷಯದಲ್ಲಿ ಮಾತ್ರ ಪತ್ರಿಕಾಗೋಷ್ಠಿ ಕರೆದದ್ದು ಯಾತಕ್ಕೆ?
ಚೆಂಬರಿಕ ಖಾಝಿಯವರ ಕೊಲೆಗಾರರು ತಮ್ಮದೇ ಹಡಗಿನಲ್ಲಿ ವಿರಾಮರಾಜರಾಗಿ ವಿಹರಿಸುತ್ತಿರುವುದು ಬಹುತೇಕ ಖಚಿತವಾದ ಹಿನ್ನಲೆಯಲ್ಲಿ ಆ ವಿಷಯವನ್ನು ವಿಷಯಾಂತರ ಮಾಡಿ ಅನುಚರರನ್ನು ಹಿಡಿದು ಕಟ್ಟುವ ತಂತ್ರ ಗ್ರಾಂಡ್ ಮುಫ್ತಿ ಪತ್ರಿಕಾಗೋಷ್ಠಿಯಲ್ಲಿ ಅಡಗಿದೆ ಎಂಬ ಕೂಗಿನಲ್ಲಿರುವ ಸತ್ಯಾಂಶವನ್ನು ತಳ್ಳಲಾಗದು.
ಸಮುದಾಯದ ಅಸ್ತಿತ್ವವೆ ಅಪಾಯದಲ್ಲಿರುವಾಗ ಸಮುದಾಯವನ್ನು ಪರಸ್ಪರ ಕಚ್ಚಾಡಿಸುವ ಈ ಪತ್ರಿಕಾಗೋಷ್ಠಿಯ ಅಗತ್ಯವಿದೆಯೇ?