ಕೋಝಿಕ್ಕೋಡ್: ಕೋಝಿಕ್ಕೋಡ್‌ನಲ್ಲಿ ಪ್ರಾರಂಭವಾಗಲಿರುವ ರಾಜ್ಯದ ಬೃಹತ್ ಸಾಂಸ್ಕೃತಿಕ ಕೇಂದ್ರವು 2020 ಮಾರ್ಚ್ ತಿಂಗಳಲ್ಲಿ ಲೋಕಾರ್ಪಣೆಗಳ್ಳಲಿದೆ.
ಭಾರತದಲ್ಲಿ ಮುಂಚೂಣಿಯಲ್ಲಿರುವ ರಿಯಲ್ ಎಸ್ಟೇಟ್ ನಿರ್ಮಾಣಗಾರರಾದ ಟಾಲನ್‌ಮಾರ್ಕ್‌ನ ವತಿಯಿಂದ ಇತ್ತೀಚೆಗೆ ಅಬುಧಾಬಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಕುರಿತು ಮಾಹಿತಿ ಬಹಿರಂಗ ಪಡಿಸಲಾಗಿದ್ದು, ಭಾರತದ ಬೃಹತ್ ಸಾಂಸ್ಕೃತಿಕ ಕೇಂದ್ರವಾಗಿ ತಲೆ ಎತ್ತಲಿರುವ ಈ ಯೋಜನೆಯ ಕಾಮಗಾರಿಯು ಶರವೇಗದಲ್ಲಿ ಮುಂದುವರಿಯುತ್ತಿದೆ.
ಸಾಮ್ಯತೆ ಇಲ್ಲದ ಕನಸಿನ ಯೋಜನೆಯನ್ನು 125 ಎಕರೆ ಯಲ್ಲಿ ನಿರ್ಮಾಣವಾಗಲಿರುವ ಮರ್ಕಝ್ ನಾಳೇಜ್ ಸಿಟಿಯ ಭಾಗವಾಗಿ ಟಾಲನ್‌ಮಾರ್ಕ್ ನಿರ್ಮಾಣದ ಹೊಣೆಯನ್ನು ಹೊತ್ತುಕೊಂಡಿದೆ.
ಫೆಡರಲ್ ನ್ಯಾಷನಲ್ ಕೌನ್ಸಿಲ್‌ನ ಮಾಜಿ ಎಕ್ಸಿಕ್ಯೂಟಿವ್ ಉಪಾಧ್ಯಕ್ಷ ಶೈಖ್ ಸಲಾಂ ಬಿನ್ ಮುಹಮ್ಮದ್ ಅಲ್ ರಖಾದ್, ಇಂಡಿಯನ್ ಗ್ರಾಂಡ್ ಮುಫ್ತಿ, ಮರ್ಕಝ್ ನಾಲೇಜ್ ಸಿಟಿಯ ಚೇರ್ ಮೆನ್ ಶೈಖ್ ಅಬೂಬಕರ್ ಅಹ್ಮದ್, ಉತೈಬ ಹೋಲ್ಡಿಂಗ್ ಚೇರ ಮನ್ ಉತೈಬ ಅಲ್ ಉತೈಬಾ, ಯುಎಇಯ ಬರಹಾಗಾರ, ಕವಿ ಅಹ್ಮದ್ ಇಬ್ರಾಹೀಂ ಅಲ್ ಹಮ್ಮಾದಿ, ಔಖಾಫ್‌ನ ಮಾಜಿ ಡೈರೆಕ್ಟರ್ ಡಾ.ಸೈಫ್ ಅಲ್ ಜಾಬಿರ್, ಕೇರಳ ರಾಜ್ಯ ಮುಸ್ಲಿಂ ಜಮಾಅತ್‌ನ ಪ್ರಧಾನ ಕಾರ್ಯದರ್ಶಿ ಸಯ್ಯಿದ್ ಇಬ್ರಾಹೀಂ ಖಲೀಲ್ ಅಲ್ ಬುಖಾರಿ, ಕೇರಳ ಹಜ್ ಕಮಿಟಿ ಚೇರ್ ಮೆನ್ ಸಿ.ಮುಹಮ್ಮದ್ ಫೈಝಿ, ಮರ್ಕಝ್ ನಾಲೇಜ್ ಸಿಟಿಯ ಡೈರೆಕ್ಟರ್ ಡಾ.ಅಬ್ದುಲ್ ಹಕೀಂ ಅಝ್ಹರಿ, ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ, ಮರ್ಕಝ್ ನಾಲೇಜ್ ಸಿಟಿ ಸಿಇಒ ಡಾ. ಅಬ್ದುಸ್ಸಲಾಂ ಟಾಲನ್‌ಮಾರ್ಕ್ ಡೈರೆಕ್ಟರ್‌ಗಳಾದ ಹಬೀಬುರ್ರಹ್ಮಾನ್, ಹಿಬತುಲ್ಲಾಹ್, ಮುಹಮ್ಮದ್ ಶಕೀಲ್ ಸೇರಿ ಸಂಯುಕ್ತವಾಗಿ ಈ ಘೋಷಣೆಯನ್ನು ಮಾಡಿದ್ದಾರೆ.