ದುಬೈ: ಯುಎಇಯ ಟಪಾಲು ಸೇವೆಯಾದ ಎಮಿರೇಟ್ಸ್ ಪೋಸ್ಟ್ನ ಸೇವೆಯು ತೃಪ್ತಿಕರವಾಗಿಲ್ಲ ಎಂದು ದುಬೈ ಆಡಳಿತಾಧಿಕಾರಿ ಟ್ವೀಟ್ನಲ್ಲಿ ನೀರಸ ವ್ಯಕ್ತಪಡಿಸಿದ್ದಾರೆ. ಕೌಂಟರ್ ಮುಂದುಗಡೆ ಸೇವೆಗಾಗಿ ಕಾಯುತ್ತಿರುವವರ ಪೋಟೊ ಸಮೇತ ಅವರು ಟ್ವೀಟ್ ಮಾಡಿದ್ದಾರೆ.
صورة وصلتني عبر متسوق سري لمستوى الخدمات في بريد الإمارات …
ليس هذا مستوانا .. ولا خدماتنا .. ولن يكون ضمن فريقي من يستمر في تقديم هذا المستوى .. pic.twitter.com/pVXfZrHVCe— HH Sheikh Mohammed (@HHShkMohd) April 22, 2019
ಎಮಿರೇಟ್ಸ್ ಪೋಸ್ಟ್ನ ಕಾರ್ಯಕ್ಷಮತೆ ಬಗ್ಗೆ ಅಧ್ಯಯನ ನಡೆಸಲು ಗೌಪ್ಯವಾಗಿ ನಿಯೋಗಿಸಿದ ವ್ಯಕ್ತಿ ಸೆರೆಹಿಡಿದ ಫೋಟೊ ಎಂದು ಯುಎಇ ಉಪಾಧ್ಯಕ್ಷ, ದುಬೈ ಆಡಳಿತಾಧಿಕಾರಿಯೂ ಆದ ಶೈಖ್ ಮುಹಮ್ಮದ್ ಬಿನ್ ರಾಶಿದ್ ಆಲ್ ಮಖ್ತೂಂ ಮಖ್ದೂಂ, ಫೋಟೊ ಬಗ್ಗೆ ವಿವರಿಸಿದ್ದು, ಅದರಲ್ಲಿ ಉದ್ದನೆಯ ಸಾಲು ಕಂಡು ಬರುತ್ತಿದೆ.
“ಇದು ನಮ್ಮ ಪಾಲಿನ ಗುಣಮಟ್ಟದ ಸೇವೆಯಲ್ಲ” ಇದೇ ರೀತಿ ಮುಂದುವರಿಯುವುದಾದರೆ ಅವರು ತನ್ನ ಗುಂಪಿನ ಭಾಗವಾಗಿ ಉಳಿಯುವುದಿಲ್ಲ” ಎಂದು ಶೈಖ್ ಮುಹಮ್ಮದ್ ತಾಕೀತು ನೀಡಿದ್ದಾರೆ.
ಎಮಿರೇಟ್ಸ್ ಪೋಸ್ಟ್ನ ಸೇವೆಯ ಗುಣಮಟ್ಟ ಕುರಿತು ತಪಾಸಣೆ ನಡೆಸಲು ಆಡಳಿತಾಧಿಕಾರಿ ಒಂದು ತಂಡವನ್ನು ನಿಯುಕ್ತಿಗೊಳಿಸಿದ್ದು, ತಂಡವು ನೀಡಿದ ವಿವರಣೆಯಲ್ಲಿ ಅತ್ಯಂತ ಕಲಪೆ ಮಟ್ಟದ ಸೇವೆಯನ್ನು ಎಮಿರೇಟ್ಸ್ ಪೋಸ್ಟ್ ನೀಡುತ್ತಿರುವುದಾಗಿ ತಿಳಿದು ಬಂದಿತ್ತು.
ತಂಡ ನೀಡಿದ ವರದಿಯ ಸಮೇತ ಅವರು ಟ್ವೀಟ್ ಮಾಡಿದ್ದು, ಕಾರ್ಯ ಚಟುವಟಿಕೆಗಳ ಸುಧಾರಣೆಗಳನ್ನು ಖಾತರಿಪಡಿಸುವ ಉದ್ದೇಶದಿಂದ ವರದಿಯನ್ನು ಲಗತ್ತಿಸಿರುವುದಾಗಿ ಅವರು ವಿವರಿಸಿದ್ದಾರೆ.