ಜಿದ್ದಾ: ಸೌದಿ ಅರೇಬಿಯಾದ ಪುಣೀತ ನಗರಗಳಾದ ಮಕ್ಕಾ, ಮದೀನಾ ಹರಂಗಳಲ್ಲಿ ಪವಿತ್ರ ರಮಝಾನ್ ತಿಂಗಳ ತರಾವೀಹ್, ಖಿಯಾಮುಲ್ಲೈಲ್ (ಮಧ್ಯರಾತ್ರಿ ಯ ನಮಾಝ್)ಗೆ ಸಾರಥ್ಯ ನೀಡಿಲಿರುವ ಇಮಾಮರುಗಳ ಪಟ್ಟಿಗೆ ಅಂಗೀಕಾರ ಲಭಿಸಿದೆ.
ಸೌದಿಯ ಆಡಳಿತಾಧಿಕಾರಿ, ಎರಡೂ ಹರಮ್ಗಳ ಕಾವಲುಗಾರರೂ ಆದ ಸಲ್ಮಾನ್ ರಾಜ ಈ ಅಂಗೀಕಾರ ನೀಡಿದ್ದು, ಡಾ.ಯಾಸಿರ್ ಅಲ್ ದೋಸರಿ, ಡಾ.ಅಹ್ಮದ್ ಅಲ್ ಹುದೈಫಿ, ಡಾ.ಖಾಲಿದ್ ಅಲ್ ಮುಹಮ್ಮದ್ ಮುಂತಾದವರಿಗೆ ಸಾರಥ್ಯ ನೀಡುವ ಅಂಗೀಕಾರವನ್ನು ನೀಡಲಾಗಿದೆ.
ಪವಿತ್ರ ಕಅಬಾಲಯವಿರುವ ಮಕ್ಕಾ ಹರಮ್ನಲ್ಲಿ ರಮಝಾನ್ ರಾತ್ರಿಗಳ ವಿಶೇಷ ಪ್ರಾರ್ಥನೆಯಾದ ತರಾವೀಹ್ಗೆ ಇಮಾಂ ಡಾ. ಯಾಸಿರ್ ಅಲ್ ದೋಸರಿ ನಾಯಕತ್ವ ನೀಡಲಿದ್ದಾರೆ.
ಪ್ರವಾದಿ (ಸ) ಅವರ ರೌಳಾ ಇರುವ ಮದೀನಾ ಹರಮ್ನ ತರಾವೀಹ್ ಪ್ರಾರ್ಥನೆಗೆ ಡಾ.ಅಹ್ಮದ್ ಅಲ್ ಹುದೈಫಿ, ಡಾ. ಖಾಲಿದ್ ಅಲ್ ಮುಹಮ್ಮ ನಾಯಕತ್ವ ನೀಡಲಿದ್ದಾರೆ ಎಂದು ಹರಮ್ ಖಾತೆಯು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದೆ.















ಇನ್ನಷ್ಟು ಸುದ್ದಿಗಳು
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ
ನಿಖರವಲ್ಲದ ಸುದ್ದಿ ಹಂಚಿಕೊಂಡರೆ ಅಪಾಯ- ನಕಲಿ ಸುದ್ದಿಗಳ ವಿರುದ್ಧ ಸೌದಿಯಲ್ಲಿ ಎಚ್ಚರಿಕೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
ಅಂತಾರಾಷ್ಟ್ರೀಯ ಸರ್ವೀಸ್ಗಳಲ್ಲಿ ದರ ಕಡಿತ – ಏರ್ ಇಂಡಿಯಾ ಎಕ್ಸ್ಪ್ರೆಸ್ ಘೋಷಣೆ