ಗಗನಕ್ಕೇರಿದ ವಿಮಾನಯಾನ ದರ- ಅನಿವಾಸಿ ಭಾರತೀಯರ ಸಂಕಷ್ಟಕ್ಕೆ ಸ್ಪಂದಿಸುವವರಿಲ್ಲ

ಕೋಝಿಕ್ಕೋಡ್: ರಜಾದಿನದ ಅವಧಿಯಲ್ಲಿ, ವಿಮಾನ ಕಂಪೆನಿಗಳು ತನ್ನ ದರವನ್ನು ಇಮ್ಮಡಿಗೊಳಿ ಯಾತ್ರಿಕರನ್ನು ಶೋಷಣೆಗೊಳಪಡಿಸುತ್ತಿದೆ.

ಪ್ರಯಾಣಿಕರಿಗೆ ಉತ್ತಮ ಸೇವೆಯನ್ನು ಒದಗಿಸುತ್ತಿದ್ದ ಜೆಟ್ ಏರ್ವೇಸ್ ತನ್ನ ಹಾರಾಟವನ್ನು ಸ್ಥಗಿತಗೊಳಿಸಿರುವುದು ಕೂಡಾ ದರ ಏರಿಕೆಗೆ ಪ್ರಮುಖ ಕಾರಣವಾಗಿ ಹೇಳಲಾಗುತ್ತಿದೆ.

ಮುಂಬೈ, ಬೆಂಗಳೂರು, ಮಂಗಳೂರು ಸೇರಿದಂತೆ ದೇಶದ ಎಲ್ಲಾ ವಿಮಾಣ ನಿಲ್ಧಾಣಗಳಿಂದಲೂ ವಿದೇಶಕ್ಕೆ ತೆರಳುವ ಟಿಕೆಟ್ ದರವನ್ನು ಗಗನಕ್ಕೇರಿಸಲಾಗಿದೆ. ವಿದೇಶದಿಂದ ರಜೆ ನಿಮಿತ್ತ ತವರೂರಿಗೆ ಆಗಮಿಸಲು ಇಚ್ಛಿಸುವವರು, ಮದುವೆ ಅಥವಾ ಇನ್ನಿತರ ಪ್ರಮುಖ ಕಾರ್ಯಗಳಲ್ಲಿ ಭಾಗವಹಿಸಲು ಇಚ್ಛಿಸುವ ಅನಿವಾಸಿಗಳು ಸಂಕಷ್ಟಕ್ಕೀಡಾಗಿದ್ದಾರೆ.

ಅದೇ ರೀತಿ ತಮ್ಮ ವೀಸಾ ಕಾಲಾವಧಿ ಮುಗಿಯುವುದರಳೊಗೆ ವಿದೇಶಕ್ಕೆ ಮರಳ ಬೇಕಾದ ಅನಿವಾಸಿಗಳಿಗೆ ಬಲುದೊಡ್ಡ ಆರ್ಥಿಕ ಹೊರೆಯಾಗಿ ಪರಿಣಮಿಸಿದೆ.

ಮಾರ್ಚ್ ಮೊದಲ ವಾರದಲ್ಲಿ ಮಂಗಳೂರಿನಿಂದ ದುಬೈಗೆ 8000- 9000 ಪಡೆಯುತ್ತಿದ್ದರೆ ಇದೀಗ 25000 ದಾಟಿದೆ.

ಕೇರಳದ ಕಲ್ಲಿಕೋಟೆ, ಕರಿಪ್ಪೂರ್‌ನಿಂದ ಸೌದಿಗೆ ರೂ 15,000-16,000 ದರ ಪಡೆಯಲಾಗುತ್ತಿತ್ತು. ಈಗ ಇದು ರೂ. 28,000-31,000ಗೆ ತಲುಪಿದೆ. ಹೆಚ್ಚಿನ ದರ ವಸೂಲಿ ಮಾಡುತ್ತಿದ್ದರೂ, ಟಿಕೆಟ್ ದೊರೆಯುವುದು ಕೂಡಾ ಕಷ್ಟಕರವಾಗಿದೆ.ಉಮ್ರಾ ಯಾತ್ರೆ ಮತ್ತು ರಜಾದಿನಗಳಿಗಾಗಿ ಅನೇಕ ಜನರು ಸೌದಿಗೆ ಹೋಗುತ್ತಿದ್ದಾರೆ. ಸಂದರ್ಶಕ ವಿಸಾದಲ್ಲಿ ಸೌದಿ ಅರೇಬಿಯಾಕ್ಕೆ ಹೋಗುವವರೂ ಇದ್ದಾರೆ.

ರಿಯಾದ್ ನಿಂದ ಈ ಹಿಂದೆ 11,000, 12,000 ಸಾವಿರ ಇದ್ದ ದರವು 24,000- 26,000 ರೂ.ಗೆ ತಲುಪಿದ್ದು, ಹೆಚ್ಚು ಪ್ರಯಾಣಿಕರಿರುವ ದೋಹಾಕ್ಕೆ ಈ ಹಿಂದೆ 7,000- 8,000 ರೂ. ಇದ್ದು ಈಗ ಇದು ರೂ 15,000-16,000ಕ್ಕೆ ಬಂದು ತಲುಪಿದೆ. ಮೇ 2ನೇ ವಾರದ ವರೆಗೆ ವಿಮಾನಯಾನಗಳಿಗೆ ಹೆಚ್ಚಿನ ದರ ವಿಧಿಸಲಾಗುತ್ತದೆ. ನಂತರ ಗಲ್ಫ್ ನಿಂದ ಹಿಂತಿರುಗುವ ಟಿಕೆಟ್ ದರದಲ್ಲಿ ಹೆಚ್ಚಳಗೊಳಿಸಲಾಗುತ್ತದೆ.

ಈದ್ ಆಗಮನದೊಂದಿಗೆ, ದೇಶಕ್ಕೆ ಮರಳುವ ವಲಸಿಗರ ಸಂಖ್ಯೆಯಲ್ಲಿ ಹೆಚ್ಚಳ ಉಂಟಾಗುವ ಕಾರಣ ವಿಮಾನಯಾನ ಸಂಸ್ಥೆಗಳು ದರವನ್ನು ಹೆಚ್ಚಳಗೊಳಿಸುತ್ತದೆ. ಯಾತ್ರಿಕರ ಸಂಖ್ಯೆಯಲ್ಲಿ ಭಾರೀ ಹೆಚ್ಚಳ ಕಂಡುಬಂದಲ್ಲಿ ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರನ್ನು ಸಾಮಾನ್ಯವಾಗಿ ದರ ಹೆಚ್ಚಿಸಿ ಶೋಷಣೆಗೊಳಪಡಿಸುತ್ತದೆ.

ಇದರ ವಿರುದ್ದ ಕ್ರಮ ತೆಗೆದುಕೊಳ್ಳುವುದಾಗಿ ಉನ್ನತ ಮೂಲಗಳು ಭರವಸೆ ನೀಡಿದ್ದರೂ, ಅದು ಕಾರ್ಯರೂಪಕ್ಕೆ ಬರುವುದೇ ಇಲ್ಲ ಎಂಬ ದೂರು ಪ್ರಯಾಣಿಕ ವಲಯದಿಂದ ಕೇಳಿ ಬಂದಿದೆ.

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com
error: Content is protected !!