ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಸಮರ್ಥನೆ- ಪ್ರಗ್ಯಾಸಿಂಗ್ ಗೆ ಮತ್ತೊಂದು ನೋಟೀಸ್

ನವದೆಹಲಿ: ಬಾಬ್ರಿ ಮಸೀದಿ ಧ್ವಂಸ ಪ್ರಕರಣವನ್ನು ಸಮರ್ಥಿಸಿಕೊಂಡ ಹಿನ್ನಲೆಯಲ್ಲಿ ಈಗ ಚುನಾವಣಾ ಆಯೋಗ ಪ್ರಗ್ಯಾಸಿಂಗ್ ಠಾಕೂರ್ ಅವರಿಗೆ ನೋಟಿಸ್ ನ್ನು ಜಾರಿ ಮಾಡಿದೆ.ಖಾಸಗಿ ಚಾನಲ್ ಗೆ ನೀಡಿದ ಸಂದರ್ಶನವೊಂದರಲ್ಲಿ ಪ್ರಜ್ಞಾ ಠಾಕೂರ್  1992 ರ ಡಿಸೆಂಬರ್ 6 ರಂದು ಅಯೋಧ್ಯೆಯಲ್ಲಿ ನಡೆದ ಬಾಬರಿ ಮಜೀದ್ ಧ್ವಂಸಕ್ಕೆ ಯಾವುದೇ ಪಶ್ಚಾತ್ತಾಪವಿಲ್ಲವೆಂದು ಹೇಳಿದರು. 

“ನಾವೇಕೆ ಬಾಬರಿ ಮಸೀದಿ ಧ್ವಂಸಕ್ಕೆ ವಿಷಾದ ವ್ಯಕ್ತಪಡಿಸಬೇಕು? ನಮಗೆ ಅದರ ಬಗ್ಗೆ  ಹೆಮ್ಮೆಇದೆ. ರಾಮ ಮಂದಿರದಲ್ಲಿ ಕೆಲವು ತ್ಯಾಜ್ಯ ಉತ್ಪನ್ನಗಳಿದ್ದವು ನಾವು ಅವುಗಳನ್ನು ತೆಗೆದು ಹಾಕಿದ್ದೇವೆ. ಇದು ನಮ್ಮ ದೇಶದ ಸ್ವಾಭಿಮಾನವನ್ನು ಜಾಗೃತಗೊಳಿಸಿದೆ, ನಾವು ರಾಮ ಮಂದಿರವನ್ನು ಕಟ್ಟುತ್ತೇವೆ “ಎಂದು ಪ್ರಗ್ಯಾ ಸಿಂಗ್ ಠಾಕೂರ್ ಸಂದರ್ಶನದಲ್ಲಿ  ಹೇಳಿದ್ದರು. 

ಇದಕ್ಕೂ ಮೊದಲು ಮುಂಬೈ 2008 ರ ಭಯೋತ್ಪಾದನಾ ದಾಳಿಯಲ್ಲಿ ಹೇಮಂತ್ ಕರ್ಕರೆ ಅವರು ತಮ್ಮ ಶಾಪದಿಂದಾಗಿ ಕರ್ಕರೆ ಮೃತಪಟ್ಟರು ಎಂದು ಪ್ರಗ್ಯಾ ಹೇಳಿದ್ದರು. ಈ ಹೇಳಿಕೆಗೆ ದೇಶಾದ್ಯಂತ ತೀವ್ರ ಖಂಡನೆ ವ್ಯಕ್ತವಾಗಿತ್ತು. “ಹೇಮಂತ್ ಕರ್ಕರೆ ರಾಷ್ಟ್ರ ವಿರೋಧಿಯಾಗಿದ್ದು, ಅವರು ಧರ್ಮ ವಿರೋಧಿ ಆಗಿದ್ದರು ಎಂದು  ಹೇಳಿದರೆ ಅದನ್ನು ನೀವು ನಂಬುವುದಿಲ್ಲ, ನಾನು ಅವರಿಗೆ ನಾಶವಾಗುತ್ತಿರಿ ಎಂದು ಹೇಳಿದೆ, ಅದಾದ ನಂತರ ಅವರು ಭಯೋತ್ಪಾದಕರಿಂದ ಅವರು ಹತ್ಯೆಯಾದರು” ಎಂದು ಈ ಬಾರಿ  ಭೂಪಾಲ್ ನಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಪ್ರಗ್ಯಾ ಸಿಂಗ್ ಹೇಳಿಕೆ ನೀಡಿದ್ದರು.

ಪ್ರಗ್ಯಾ ಠಾಕೂರ್ ಅವರು ಸದ್ಯ 2008 ರ ಮಾಲೆಗಾಂವ್ ಸ್ಪೋಟ ಪ್ರಕರಣದಲ್ಲಿ, ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯಿದೆ ಅಡಿಯಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ. ಈ ಪ್ರಕರಣದಲ್ಲಿ ಅವರು ಪ್ರಸ್ತುತ ಜಾಮೀನು ಪಡೆದಿರುತ್ತಾರೆ.2008 ರ ಸೆಪ್ಟೆಂಬರ್ 29 ರಂದು ಉತ್ತರ ಮಹಾರಾಷ್ಟ್ರದ ಮಾಲೆಗಾಂವ್ನಲ್ಲಿನಡೆದ ಸ್ಫೋಟದಲ್ಲಿ ಆರು ಜನರು ಮೃತಪಟ್ಟಿದ್ದರು. ಇದಕ್ಕೆ ಎಟಿಎಸ್  ತನಿಖಾ ಸಂಸ್ಥೆ ಈ ಘಟನೆ ಹಿಂದೆ  ಹಿಂದೂ ಉಗ್ರಗಾಮಿಗಳ ಗುಂಪಿನ ಕೈವಾಡವಿದೆ ಎಂದು ಆರೋಪಿಸಿತ್ತು. 
 

Leave a Reply

Your email address will not be published. Required fields are marked *

error: Content is protected !!