janadhvani

Kannada Online News Paper

ಬೆಂಗಳೂರು: ದೇಶಾದ್ಯಂತ ಇಂದು ಎರಡನೇ ಹಂತದ ಮತದಾನ ಬಹುತೇಕ ಶಾಂತಿಯುತವಾಗಿ ನಡೆದಿದೆ. ಒಟ್ಟು 11 ರಾಜ್ಯಗಳ 95 ಲೋಕಸಭಾ ಕ್ಷೇತ್ರಗಳಿಗೆ ಇಂದು ಮನದಾನ ನಡೆದಿದೆ. ರಾಜ್ಯದ 14 ಕ್ಷೇತ್ರಗಳಿಗೂ ಚುನಾವಣೆ ನಡೆದಿದ್ದು, ಒಟ್ಟಾರೆ ಶೇ.62ರಷ್ಟು ಮತದಾನವಾಗಿದೆ.
ರಾಜ್ಯದ 14 ಕ್ಷೇತ್ರಗಳಲ್ಲಿ ಇಂದು ಬೆಳಗ್ಗೆ 7 ಗಂಟೆಯಿಂದಲ್ಲೇ ಮತದಾನ ಆರಂಭವಾಯಿತು. ಕೆಲವು ಅಹಿತಕರ ಘಟನೆಗಳನ್ನು ಹೊರತುಪಡಿಸಿ, ಬಹುತೇಕ ಶಾಂತಿಯುತವಾಗಿ ಮತದಾನ ನಡೆದಿದೆ.

ಬೆಳಗ್ಗೆ 9 ಗಂಟೆ ವೇಳೆಗೆ ಶೇ.7.57ರಷ್ಟು ಮತದಾನವಾಗಿತ್ತು. 11 ಗಂಟೆಗೆ ಶೇ.19.58, ಮತದಾನ, 1 ಗಂಟೆಗೆ ಶೇ.36.31ರಷ್ಟು ಮತದಾನ, 3 ಗಂಟೆಗೆ 48.97 ಹಾಗೂ 5 ಗಂಟೆಗೆ 61.94ರಷ್ಟು ಮತದಾನವಾಗಿತ್ತು. 6 ಗಂಟೆಗೆ ಮತದಾನ ಮುಕ್ತಾಯದ ಮಾಹಿತಿ ಇನ್ನೂ ಅಧಿಕೃತವಾಗಿ ಪ್ರಕಟಗೊಂಡಿಲ್ಲ. ಅಂದಾಜಿನ ಪ್ರಕಾರ ಜಿಲ್ಲಾವಾರು ಮತದಾನದ ಶೇಕಡವಾರು ವಿವರ ಇಲ್ಲಿದೆ.

  • ದಕ್ಷಿಣ ಕನ್ನಡ – 72.97%
  • ಉಡುಪಿ ಚಿಕ್ಕಮಗಳೂರು – 69.84%
  • ಹಾಸನ – 71.20%
  • ಚಿತ್ರದುರ್ಗ – 61.75%
  • ತುಮಕೂರು – 70.28%
  • ಮಂಡ್ಯ – 71.25%
  • ಮೈಸೂರು – 63.20%
  • ಚಾಮರಾಜನಗರ – 66.51%
  • ಬೆಂಗಳೂರು ಗ್ರಾಮಾಂತರ – 59.43%
  • ಬೆಂಗಳೂರು ಉತ್ತರ – 48.28%
  • ಬೆಂಗಳೂರು ಕೇಂದ್ರ – 42.43%
  • ಕೋಲಾರ – 69.99%
  • ಚಿಕ್ಕಬಳ್ಳಾಪುರ – 69.33%
  • ಬೆಂಗಳೂರು ದಕ್ಷಿಣ – 49.36%
error: Content is protected !! Not allowed copy content from janadhvani.com