ನವದೆಹಲಿ: 2018-19 ಆರ್ಥಿಕ ವರ್ಷವು ಕೊನೆಗೊಂಡಿದೆ. ಇಂದಿನಿಂದ ನೂತನ(2019-20) ಆರ್ಥಿಕ ವರ್ಷ ಪ್ರಾರಂಭವಾಗಲಿದೆ. 2019-20 ರ ಆರ್ಥಿಕ ವರ್ಷದಲ್ಲಿ ಹಲವು ನಿಯಮಗಳು ಬದಲಾಗಿವೆ. ಈ ನಿಯಮಗಳು ನಿಮ್ಮ ಜೀವನದ ಮೇಲೆ ನೇರ ಪರಿಣಾಮ ಬೀರುತ್ತದೆ.
ಎಪ್ರಿಲ್ 1ರಿಂದ ಬದಲಾಗಲಿರುವ ಕೆಲವು ಪ್ರಮುಖ ನಿಯಮಗಳು:
- ಏಪ್ರಿಲ್ 1 ರಿಂದ ಟ್ರಾಯ್ ಹೊಸ ನಿಯಮಗಳನ್ನು ಜಾರಿಗೆ ತರಲಿದೆ. ಒಂದು ವೇಳೆ ಇನ್ನೂ ಕೂಡ ನೀವೂ ನಿಮ್ಮ ಆಯ್ಕೆಯ ಚಾನಲ್ ಗಳನ್ನು ಸೆಟ್ ಮಾಡಿಲ್ಲವಾದರೆ ಟಿವಿ ಸೆಟ್ ಅಪ್ ಬಾಕ್ಸ್ ಕಾರ್ಯ ನಿರ್ವಹಿಸುವುದಿಲ್ಲ. ಇಂದಿನಿಂದ ಟಿವಿ ವೀಕ್ಷಿಸಲು ನಿಮ್ಮ ನೆಚ್ಚಿನ ಪ್ಯಾಕ್ ಆಯ್ಕೆಮಾಡುವುದು ಮುಖ್ಯ. ಟಿವಿ ವೀಕ್ಷಿಸಲು, ಕನಿಷ್ಠ 153 ಖರ್ಚು (ಜಿಎಸ್ಟಿ ಜೊತೆ) ಮಾಡಬೇಕಾಗುತ್ತದೆ. ಇದರಲ್ಲಿ 100 ಉಚಿತ ಪ್ರಸಾರ ವಾಹಿನಿಗಳನ್ನು ನೋಡಲು ಸಾಧ್ಯವಾಗುತ್ತದೆ. ಇವುಗಳಲ್ಲಿ 25 ದೂರದರ್ಶನದ ಚಾನೆಲ್ ಗಳು, ಉಳಿದ 75 ನೀವು ಆಯ್ಕೆ ಮಾಡಲಾದ ಚಾನಲ್ ಗಳು.
- 2017-18ರ ಹಣಕಾಸು ವರ್ಷಕ್ಕೆ ಆದಾಯವನ್ನು ಸಲ್ಲಿಸುವ ಮಾರ್ಚ್ 31, ಕೊನೆಯ ದಿನಾಂಕ. ಏಪ್ರಿಲ್ 1 ರಿಂದ ಐಟಿ ರಿಟರ್ನ್ಸ್ ಸಲ್ಲಿಸಲು ಅಥವಾ ಯಾವುದೇ ಬದಲಾವಣೆಗಳನ್ನು ಮಾಡಬಹುದು.
- ಬಿಸಿನೆಸ್ ಮಾಡುವ ಜನರಿಗೆ GST ರಿಟರ್ನ್ ಸಲ್ಲಿಸುವ ಕೊನೆಯ ದಿನಾಂಕ ಮಾರ್ಚ್ 31.
- ಏಪ್ರಿಲ್ 1 ರಿಂದ ಕಾರು ಕೊಳ್ಳುವುದು ದುಬಾರಿಯಾಗಿರುತ್ತದೆ. ವಿಭಿನ್ನ ಕಂಪೆನಿಗಳ ಕಾರ್ ಗಳು 75 ಸಾವಿರ ರೂಪಾಯಿಗಳವರೆಗೂ ಹೆಚ್ಚಾಗಲಿವೆ. ಅನೇಕ ಕಂಪನಿಗಳು ಈಗಾಗಲೇ ಇದನ್ನು ಘೋಷಿಸಿವೆ.
- ಆದಾಗ್ಯೂ, ಏಪ್ರಿಲ್ 1 ರ ನಂತರ, ಮನೆ ಖರೀದಿಸುವುದು ಅಗ್ಗವಾಗಲಿದೆ. ನಿರ್ಮಾಣದ ಹಂತದಲ್ಲಿ ಜಿಎಸ್ಟಿ ದರವು 12 ರಿಂದ ಶೇ 5 ಕ್ಕೆ ಇಳಿದಿದೆ.
- ಏಪ್ರಿಲ್ 1 ರಿಂದ ಇಎಂಐ ಅಗ್ಗವಾಗಲಿದೆ. MCLR ಆಧಾರದ ಮೇಲೆ ಮೊದಲ ಸಾಲದ ದರವನ್ನು ನಿಗದಿಪಡಿಸಲಾಗಿದೆ. ಏಪ್ರಿಲ್ 1 ರಿಂದ ಆರ್ಬಿಐ ರೆಪೋ ದರ ಆಧಾರದ ಮೇಲೆ ಇದನ್ನು ನಿಗದಿಗೊಳಿಸಲಾಗುವುದು.
- ಏಪ್ರಿಲ್ 1 ರಿಂದ, ಹೊಸ ತೆರಿಗೆ ಕಾನೂನು ಅನ್ವಯಿಸುತ್ತದೆ. 2019-20ರ ಆರ್ಥಿಕ ವರ್ಷದಲ್ಲಿ 5 ಲಕ್ಷ ರೂ.ವರೆಗೆ ತೆರಿಗೆ ರಿಯಾಯಿತಿ ನೀಡಲಾಗಿದೆ.
- ಹೊಸ ಹಣಕಾಸಿನ ವರ್ಷದಲ್ಲಿ 50 ಸಾವಿರ ಸ್ಟ್ಯಾಂಡರ್ಡ್ ತೆರಿಗೆ ವಿನಾಯಿತಿ, ಬ್ಯಾಂಕ್ ಠೇವಣಿಗಳಲ್ಲಿ 50,000 ರೂ. ತೆರಿಗೆಯಿಂದ ಮುಕ್ತವಾಗಲಿದೆ. ಮೊದಲು ಅದು 10 ಸಾವಿರ ರೂ. ಇತ್ತು.
- ಹೊಸ ಹಣಕಾಸಿನ ವರ್ಷದಲ್ಲಿ, ಎರಡನೆಯ ಮನೆ ಕೊಳ್ಳಲು ಕೂಡಾ (ಆ ಮನೆಯನ್ನು ಬಾಡಿಗೆಗೆ ನೀಡದಿದ್ದಲ್ಲಿ) ತೆರಿಗೆಯನ್ನು ಪಾವತಿಸಬೇಕಾಗಿಲ್ಲ.
- ಪಾನ್ ಕಾರ್ಡ್ ಜೊತೆ ಆಧಾರ್ ಜೋಡಣೆ ಮಾಡಲು ಇಂದು ಕೊನೆಯ ದಿನವಾಗಿದ್ದು, ಈಗ ಸರ್ಕಾರ ಈ ಅವಧಿಯನ್ನು ಆರು ತಿಂಗಳ ಕಾಲ ಅಂದರೆ 2019 ಸೆಪ್ಟೆಂಬರ್ 30 ರ ವರೆಗೆ ವಿಸ್ತರಿಸಿದೆ.















ಇನ್ನಷ್ಟು ಸುದ್ದಿಗಳು
ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ: ಏರ್ ಇಂಡಿಯಾ ಮತ್ತು ಇಂಡಿಗೋ ವಿಮಾನ ಹಾರಾಟ ರದ್ದು
ಚೀನಾದಲ್ಲಿ HMPV ವೈರಸ್ ವ್ಯಾಪಕ,ಆಸ್ಪತ್ರೆಗಳು ಫುಲ್: ಆತಂಕ ಬೇಡ- ಕೇಂದ್ರ ಸರ್ಕಾರ
ನೌಕರರ ಮಿಂಚಿನ ಮುಷ್ಕರ : ಅಂತಾರಾಷ್ಟ್ರೀಯ ವಿಮಾನಯಾನ ರದ್ದು
ಅಲ್ಪಸಂಖ್ಯಾತರ ಧಾರ್ಮಿಕ ಸ್ಥಳಗಳ ಮೇಲಿನ ದಾಳಿ ಖಂಡನೀಯ: ತೆಲಂಗಾಣ ಸಿಎಂಗೆ ಎ ಪಿ ಉಸ್ತಾದ್ ಪತ್ರ
ಲಂಚ: ಮೇಘಾ ಇಂಜಿನಿಯರಿಂಗ್ ವಿರುದ್ಧ ಸಿಬಿಐ ಪ್ರಕರಣ – 966 ಕೋಟಿ ಮೌಲ್ಯದ ಎಲೆಕ್ಟೋರಲ್ ಬಾಂಡ್ಗಳನ್ನು ಖರೀದಿಸಿದ್ದ ಕಂಪನಿ ಮೇಘಾ
ಸಮಗ್ರ ಅಭಿವೃದ್ಧಿ ಗೆ ಅಂಬೇಡ್ಕರ್ ತತ್ವ ಪಾಲನೆ ಅಗತ್ಯ : ದ್ರೌಪದಿ ಮುರ್ಮು
ಹರಿಯಾಣ : ಶಾಲಾ ಬಸ್ ಪಲ್ಟಿ; ಆರು ಮಕ್ಕಳು ಸಾವು ಈದ್ ರಜೆಯಲ್ಲೂ ತೆರೆದಿದ್ದ ಶಾಲೆ!
ಭಜರಂಗದಳ ಮಾಜಿ ರಾಜ್ಯ ಸಂಚಾಲಕ ರಘು ಪರಾರಿ
ಮುಸ್ಲಿಂ 2ಬಿ ಮೀಸಲು ರದ್ಧತಿ ಮತಬ್ಯಾಂಕ್ ಭದ್ರಪಡಿಸುವ ಸರಕಾರದ ನಡೆ ಖಂಡನೀಯ- ಎಸ್ ವೈ ಎಸ್
ದೇವಸ್ಥಾನಕ್ಕೆ ಮಾಂಸ ಎಸೆದು, ಕೋಮುಗಲಭೆ- ಪ್ರಮುಖ ಆರೋಪಿ ಚಂಚಲ್ ತ್ರಿಪಾಠಿ ಬಂಧನ