janadhvani

Kannada Online News Paper

ಈ ವರದಿಯ ಧ್ವನಿಯನ್ನು ಆಲಿಸಿ


ಮೈಸೂರು: ‘ನೋಟು ರದ್ಧತಿಯಿಂದಾಗಿ ಕಪ್ಪು ಹಣ ಚಲಾವಣೆ ಕಡಿಮೆುಯಾಗುತ್ತದೆ. ಇದರಿಂದ ಉಗ್ರವಾದ ಕಡಿಮೆ ಆಗುತ್ತದೆ ಎಂಬುದಾಗಿ ಪ್ರಧಾನಿ ಹೇಳಿದ್ದರು. ಆದರೆ, ಈಗ ಆಗಿದ್ದೇನು’ ಎಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದರು.

ನಗರದಲ್ಲಿ ಸುದ್ದಿಗಾರದೊಂದಿಗೆ ಶನಿವಾರ ಮಾತನಾಡಿದ ಅವರು, ಪುಲ್ವಾಮದಲ್ಲಿ ಸಿಆರ್‌ಪಿಎಫ್‌ ಯೋಧರ ಮೇಲೆ ಉಗ್ರರ ದಾಳಿಗೆ ಗುಪ್ತಚರ ಇಲಾಖೆ ವೈಫಲ್ಯವೇ ಕಾರಣ ಎಂದು ಆರೋಪಿಸಿದರು.

‘ಅಮಾನುಷ, ಹೇಯ ಕೃತ್ಯವನ್ನು ಖಂಡಿಸುತ್ತೇನೆ. ಇಂತಹ ಘಟನೆಗೆ ಕಾರಣವಾದ ಉಗ್ರವಾದಿಗಳ ಬಗ್ಗೆ ಸರ್ಕಾರ ಯಾವುದೇ ಕಾರಣಕ್ಕೂ ಮೃದು ಧೋರಣೆ ತಾಳಬಾರದು. ಉಗ್ರರು ಅಡಗಿರುವ ತಾಣಗಳ ಮೇಲೆ ದಾಳಿ ಮಾಡಿ ಅವರನ್ನು ನಾಶ ಮಾಡಬೇಕು’ ಎಂದರು.

error: Content is protected !! Not allowed copy content from janadhvani.com