janadhvani

Kannada Online News Paper

ಎಚ್ಚರಿಕೆ! ಸೌದಿ ಅರೇಬಿಯಾದಲ್ಲಿ ಮತ್ತೆ ಹರಡುತ್ತಿದೆ ಕೊರೋನ ವೈರಸ್

ರಿಯಾದ್: ಸೌದಿ ಅರೇಬಿಯಾದಲ್ಲಿ ಮತ್ತೊಮ್ಮೆ ಕೊರೋನ ವೈರಸ್ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಸಚಿವಾಲಯವು ಎಚ್ಚರಿಕೆಯನ್ನು ನೀಡಿದೆ. ಸಚಿವಾಲಯದ ಪ್ರಕಾರ,ಒಂದು ವಾರದಲ್ಲಿ ಒಬ್ಬ ವ್ಯಕ್ತಿ ಮರಣ ಹೊಂದಿದ್ದು,24 ಜನರಿಗೆ ಸೋಂಕು ಹರಡಿದೆ. ಒಂಟೆಗಳ ಮೂಲಕ ವೈರಸ್‌ಗಳು ಹರಡಿವೆ ಎಂದು ವರದಿಯಾಗಿವೆ.

2012 ರಿಂದ ಮೆರ್ಸ್ ಕೊರೋನ ವೈರಸ್ ಅನ್ನು ಪತ್ತೆಹಚ್ಚಲಾಗಿದ್ದು, ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಕಳೆದ ನವೆಂಬರ್ ವರೆಗೆ 27 ದೇಶಗಳಲ್ಲಿ 2274 ಪ್ರಕರಣಗಳು ವರದಿಯಾಗಿವೆ. ಆ ಪೈಕಿ 806 ಜನರು ಮೃತಪಟ್ಟಿದ್ದು, 80 ಶೇಕಡಾ ಸೌದಿ ಅರೇಬಿಯಾದಲ್ಲಿದ್ದವರಾಗಿದ್ದರು.

ಸೌದಿ ಆರೋಗ್ಯ ಸಚಿವಾಲಯದ ಪ್ರಕಾರ, ಕಳೆದ ಆರು ವರ್ಷಗಳಲ್ಲಿ 773 ಜನರು ಸಾವನ್ನಪ್ಪಿದ್ದಾರೆ. ಕಳೆದ ವಾರ, ಸೌದಿ ಅರೇಬಿಯಾದಲ್ಲಿ ಮತ್ತೆ ರೋಗವನ್ನು ಪತ್ತೆಹಚ್ಚಲಾಗಿದ್ದು ಆತಂಕಕ್ಕೀಡು ಮಾಡಿದೆ.
ಸುಮಾರು 65% ಮಂದಿ ಸೋಂಕಿತರು ರಿಯಾದ್ ಪ್ರಾಂತ್ಯದ ವಾದಿ ಅಲ್ ದವಾಸಿರ್ ನಿವಾಸಿಗಳಾಗಿದ್ದಾರೆ. ಬುರೈದಾ ಮತ್ತು ಖಮಿಸ್ ಮುಶೈತ್ ಮುಂತಾದೆಡೆಗಳಲ್ಲೂ ಕೆಲವೊಂದು ಪ್ರಕರಣ ವರದಿಯಾಗಿದೆ.

ಒಂಟೆಗಳು ಕರೋನ ವೈರಸ್ ನ ಕೇಂದ್ರವೆಂದು ಕಂಡುಬರುತ್ತಿದ್ದು, ರೋಗ ಹರಡದಂತೆ ಆರೋಗ್ಯ ಸಚಿವಾಲಯವು ಈ ಬಗ್ಗೆ ಮಾರ್ಗದರ್ಶನಗಳನ್ನು ಕೈಗೊಂಡಿದೆ.

ಒಂಟೆ ಮತ್ತು ಅದರ ಪರಿಸರ ಸಂಪರ್ಕವನ್ನು ತ್ಯಜಿಸುವುದು, ಒಂಟೆ ಉತ್ಪನ್ನಗಳು ಮತ್ತು ಪಾಕ ಮಾಡದ ಹಾಲಿನ ಬಳಕೆಯನ್ನು ನಿಯಂತ್ರಿಸುವುದು, ಸೋಂಕು ತಗುಲಿದವರೊಂದಿಗೆ ಸಹವಾಸದಲ್ಲೂ ಜಾಗರೂಕತೆಯಿಂದ ಇರುವುದು ಮುಂತಾದ ನಿರ್ದೇಶಗಳನ್ನು ಆರೋಗ್ಯ ಸಚಿವಾಲಯ ನೀಡಿದೆ.

error: Content is protected !! Not allowed copy content from janadhvani.com