janadhvani

Kannada Online News Paper

ಈ ವರದಿಯ ಧ್ವನಿಯನ್ನು ಆಲಿಸಿ


ನವದೆಹಲಿ: ಪುಲ್ವಾಮಾದಲ್ಲಿ ಉಗ್ರರ ದಾಳಿಯಿಂದ ಮೃತಪಟ್ಟ ಸಿಆರ್ಪಿಎಫ್ 40 ಯೋಧರ ಪಾರ್ಥಿವ ಶರೀರವನ್ನು ಇಂದು ಸಂಜೆ ವಿಶೇಷ ವಿಮಾನದ ಮೂಲಕ ದೆಹಲಿಗೆ ತರಲಾಯಿತು.ಪಾರ್ಥಿವ ಶರೀರಗಳನ್ನು ದೆಹಲಿಯ ಪಾಲಂ ವಾಯುನೆಲೆಗೆ ತರಲಾಗಿದೆ. ಪ್ರಧಾನಿ ಮೋದಿ, ರಾಹುಲ್ ಗಾಂಧಿ ಸೇರಿ ರಾಜಕೀಯ ಗಣ್ಯರು, ಸೇನಾ ಮುಖ್ಯಸ್ಥರು ಹಾಗೂ ಗಣ್ಯರು ಪಾರ್ಥಿವ ಶರೀರ ಅಂತಿಮ ದರ್ಶನ ಪಡೆದರು.


ಅಂತಿಮ ದರ್ಶನ ಮುಗಿದ ಬಳಿಕ ಪಾರ್ಥಿವ ಶರೀರಗಳನ್ನು ಮೃತರ ಊರುಗಳಿಗೆ ಕಳುಹಿಸಿಕೊಡುವ ವ್ಯವಸ್ಥೆ ಮಾಡಲಾಗಿದೆ. ಇಂದು ಮಧ್ಯರಾತ್ರಿ ಆಯಾ ರಾಜ್ಯಗಳಿಗೆ ಮೃತರ ಪಾರ್ಥಿವ ಶರೀರಗಳು ತಲುಪಲಿವೆ ಎಂದು ಹೇಳಲಾಗುತ್ತಿದೆ.

ನಾಳೆ ಬೆಳಗ್ಗೆ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದಾಳಿ ಕುರಿತಾಗಿ ಮಹತ್ವದ ಸರ್ವ ಪಕ್ಷ ಸಭೆ ನಡೆಯಲಿದೆ.

error: Content is protected !! Not allowed copy content from janadhvani.com