ಸೌದಿ ಲೆವಿ ವಿನಾಯಿತಿ: ಫೆ.19ರಿಂದ ಅರ್ಜಿಗಳ ಸ್ವೀಕಾರ

ರಿಯಾದ್: ಖಾಸಗಿ ಕಂಪನಿಗಳಿಗೆ ಸಲ್ಮಾನ್ ರಾಜರು ಘೋಷಿಸಿದ ಲೆವಿ ವಿನಾಯಿತಿಯ ಅರ್ಜಿಗಳನ್ನು ಫೆಬ್ರವರಿ 19 ರಿಂದ ಸ್ವೀಕರಿಸಲಾಗುವುದು ಎಂದು ಕಾರ್ಮಿಕ ಸಚಿವಾಲಯ ಘೋಷಿಸಿದೆ.

ಕಾರ್ಮಿಕ ಸಚಿವಾಲಯದ ಅಧೀನದಲ್ಲಿರುವ ‘ತಹ್ಫೀಸ್’ ಪೋರ್ಟಲ್ ಮೂಲಕ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿಗಳನ್ನು ಸ್ವೀಕರಿಸಲು ಸಚಿವಾಲಯವು ಐದು ನಿಬಂಧನೆಗಳನ್ನು ಜಾರಿಗೆ ತಂದಿದೆ.
ಈ ನಿಯಮಗಳ ಪ್ರಕಾರ ಆನ್‌ಲೈನ್ ನಲ್ಲಿ ನೋಂದಣಿ ಮಾಡಬೇಕು.

  • ಸಂಸ್ಥೆಯ ಕಾರ್ಪೊರೇಟ್ ನೋಂದಣಿಯು ಕಾಲಾವಧಿಯನ್ನು ಹೊಂದಿರಬೇಕು.
  • ನಿತಾಖಾತ್‌ನಲ್ಲಿ ಸಂಸ್ಥೆಯು ಪಲ್ಲಾಟಿನಂ,ಹಸಿರು ವಿಭಾಗದಲ್ಲಿ ಗುರುತಿಸಿರಬೇಕು.
  • ಹಲದಿ, ಕೆಂಪು ಬಿಭಾಗದಲ್ಲಿದ್ದರೆ ಸ್ವದೇಶಿಗಳನ್ನು ಸೇರಿಸುವ ಮೂಲಕ ಹಸಿರು ವಿಭಾಗಕ್ಕೆ ಬಡ್ತಿಪಡೆದಿರಬೇಕು.
  • ಬ್ಯಾಂಕ್ ಖಾತೆಯ ದಾಖಲೆಗಳನ್ನು ಲಗತ್ತಿಸಿರಬೇಕು.(ಈ ಹಿಂದೆ ಬ್ಯಾಂಕ್ ಖಾತೆಯ ವಿವರಗಳನ್ನು ಸಚಿವಾಲಯಕ್ಕೆ ನೀಡದಿದ್ದರೆ, ಅವುಗಳನ್ನು ಸೇರಿಸಿ ಮಾಹಿತಿಗಳನ್ನು ಲಗತ್ತಿಸಬಹುದು)
  • IBAN ಸೇರಿದಂತೆ ಖಾತೆ ಮಾಹಿತಿಗಳನ್ನು ಒದಗಿಸಬೇಕು.

ಅಪ್ಲಿಕೇಶನ್ ಫೈಲ್ ನಲ್ಲಿ ಸ್ವೀಕರಿಸಿದರೆ, ಸಂಸ್ಥೆಯು ಮೊಬೈಲ್ ಸಂದೇಶವನ್ನು ಪಡೆಯಲಿದೆ ಎಂದು ಸಚಿವಾಲಯ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!