ಶ್ರೀನಗರ : ಜಮ್ಮು-ಕಾಶ್ಮೀರದ ಪುಲ್ವಾಮ ಜಿಲ್ಲೆಯ ಅವಂತಿಪೊರ ಪ್ರದೇಶದಲ್ಲಿ ಉಗ್ರರು ನಡೆಸಿದ ಭೀಕರ ಬಾಂಬ್ ದಾಳಿಯಲ್ಲಿ 40 ಮಂದಿ ಸೈನಿಕರು ಹುತಾತ್ಮರಾಗಿದ್ದಾರೆ. ಘಟನೆಯಲ್ಲಿ ನಲ್ವತ್ತಕ್ಕೂ ಹೆಚ್ಚು ಯೋಧರು ಗಾಯಗೊಂಡಿದ್ದಾರೆ. 20 ವರ್ಷಗಳಲ್ಲಿ ನಡೆದ ದಾಳಿಗಳಲ್ಲಿ ಅತೀ ದೊಡ್ಡ ದಾಳಿ ಇದಾಗಿದೆ.
ಸ್ಕ್ರಾರ್ಪಿಯೋ ಕಾರಿನಲ್ಲಿ ಬಂದ ಆತ್ಮಾಹುತಿ ಉಗ್ರ ಸುಮಾರು 350 ಕೆ.ಜಿ.ಯ ಸುಧಾರಿತ ಸ್ಫೋಟಕವನ್ನು ಸಿಆರ್ಪಿಎಫ್ ಯೋಧರು ಇದ್ದ ಸ್ಥಳದಲ್ಲಿ ಸ್ಫೋಟಿಸಿದ್ದಾನೆ. 2001ರಲ್ಲಿ ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆಯಲ್ಲಿ ನಡೆದ ಕಾರ್ ಬಾಂಬ್ ಸ್ಫೋಟದ ನಂತರ ನಡೆದ ಅತ್ಯಂತ ಕೆಟ್ಟ ದಾಳಿ ಇದಾಗಿದೆ. ಜೈಶ್ ಎ ಮೊಹಮ್ಮದ್ ಉಗ್ರ ಸಂಘಟನೆ ಈ ದಾಳಿಯ ಜವಾಬ್ದಾರಿಯನ್ನು ಹೊತ್ತುಕೊಂಡಿದೆ.

ಈ ಮುನ್ನ 2004ರಲ್ಲಿ 28 ಬಿಎಸ್ಎಫ್ ಯೋಧರು ಹಾಗೂ 2016 ರಲ್ಲಿ 19 ಯೋಧರು ಹಾಗೂ ಹುತಾತ್ಮರಾಗಿದ್ದರು ಎನ್ನಲಾಗಿದೆ.