janadhvani

Kannada Online News Paper

ರಾಯ್ಪುರ್: ಫೆ 14: ಸಾರ್ವಜನಿಕ ವಲಯದ ಬ್ಯಾಂಕ್ ಗಳಲ್ಲಿ ಗ್ರಾಹಕ ನಿಷ್ಠೆ ಎಂಬ ವಿಷಯದಲ್ಲಿ ಶ್ರೀ ಶೇಖ್ ಬಾವ ಮಂಗಳೂರುರವರು ಕಳಿಂಗ ವಿಶ್ವವಿದ್ಯಾನಿಲಯಕ್ಕೆ ಸಲ್ಲಿಸಿದ ಮಹಾಪ್ರಬಂದಕ್ಕೆ, ಅಲ್ಲಿನ ಸ್ನಾತಕೋತ್ತರ ಮತ್ತು ವಾಣಿಜ್ಯ ಸಂಶೋಧನಾ ಇಲಾಖೆಯು PhD ಪದವಿಯನ್ನು ನೀಡಿರುತ್ತದೆ.ಈ ಪ್ರಬಂಧವನ್ನು ಅವರು ಕಳಿಂಗ ಯೂನಿವರ್ಸಿಟಿ ಫ್ಯಾಕಲ್ಟಿ ಓಫ್ ಮ್ಯಾನೇಜ್ ಮೆಂಟ್ ಇದರ ಸಂಶೋಧನಾ ಸಲಹೆಗಾರ ಡಾ| ಕೃಷ್ಣಗೋಪಾಲ್ ಚೌಬಿ ರವರ ಮಾರ್ಗದರ್ಶನದಲ್ಲಿ ಸಿದ್ಧಗೊಳಿಸಿದ್ದಾರೆ.

ಶ್ರೀಯುತರು ಅಬುಧಾಬಿಯ ಪ್ರತಿಷ್ಠಿತ ತೈಲೋತ್ಪನ್ನ ಸಂಸ್ಥೆಯಾದ ADNOCನ ಹಣಕಾಸು ವಿಭಾಗದಲ್ಲಿ ಹುದ್ದೆಯಲ್ಲಿದ್ದುಕೊಂಡು, ಹಲವಾರು ಜೀವಕಾರುಣ್ಯ ಸೇವೆಯಲ್ಲಿ ಗುರುತಿಸಿಕೊಂಡಿದ್ದಾರಲ್ಲದೆ, KCF ಅಂತಾರಾಷ್ಟ್ರೀಯ ಸಮಿತಿಯ ಹಣಕಾಸು ನಿಯಂತ್ರಕರಾಗಿದ್ದಾರೆ.

error: Content is protected !! Not allowed copy content from janadhvani.com