ಕುವೈಟ್: ಭಾರತೀಯ ಬಜೆಟ್ ಏರ್ಲೈನ್ ಕಂಪನಿಯಾದ ಇಂಡಿಗೊ ಕುವೈಟ್-ಕಣ್ಣೂರು ವಲಯದಲ್ಲಿ ನೇರ ಸೇವೆಯನ್ನು ಆರಂಭಿಸಲಿದೆ. ಮಾರ್ಚ್ ಹದಿನೈದರಿಂದ ಕಣ್ಣೂರ್ ನಿಂದ ಕುವೈತ್ಗೆ ಅದೇ ರೀತಿ ಕುವೈತ್ನಿಂದ ಕಣ್ಣೂರಿಗೂ ವಾರದಲ್ಲಿ ಆರು ದಿವಸ ನೇರ ವಿಮಾನಗಳು ಹಾರಾಡಲಿವೆ.
ಪ್ರಸ್ತುತ ಇಂಡಿಗೊ ಚೆನ್ನೈ ಮೂಲಕ ಕಣ್ಣೂರ್ಗೆ ಸಂಪರ್ಕ ಕಲ್ಪಿಸುತ್ತಿದೆ.ಮಂಗಳವಾರ ಹೊರತುಪಡಿಸಿ ವಾರದ ಆರು ದಿವಸಗಳಲ್ಲಿ ಬೆಳಗ್ಗೆ 5 ಗಂಟೆಗೆ ಕಣ್ಣೂರಿನಿಂದ ಹೊರಟು ಬೆಳಗ್ಗೆ 8 ಗಂಟೆಗೆ ಕುವೈತ್ ತಲುಪಲಿದ್ದು, ಕುವೈತ್ ನಿಂದ ಬೆಳಗ್ಗೆ 9 ಗಂಟೆಗೆ ಹೊರಟು ಅದೇ ದಿನ ಸಂಜೆ 4 ಗಂಟೆಗೆ ಕಣ್ಣೂರು ತಲುಪಲಿದೆ. ಏಕ-ದಾರಿಗೆ 35 ಕುವೈಟ್ ದಿನಾರ್ ಶುಲ್ಕ ನಿರ್ಣಯಿಸಲಾಗಿದ್ದು, ಮಾರ್ಚ್ 15 ರಿಂದ ಸೇವೆ ಆರಂಭವಾಗಲಿದೆ.
ಕಣ್ಣೂರ್ಗೆ ನೇರ ಸೇವೆ ಮಲಬಾರ್ ಪ್ರದೇಶದ ಅನಿವಾಸಿಗರಿಗೆ ಸಹಾಯಕವಾಗಲಿದೆ. ಬೆಳಿಗ್ಗೆ 8 ಗಂಟೆಗೆ ಕುವೈತ್ ತಲುಪುವ ಕಾರಣ ಪ್ರಯಾಣಿಕರ ಕೆಲಸದ ದಿನಗಳನ್ನು ಉಳಿಸಬಹುದಾಗಿದೆ. ಕಳೆದ ತಿಂಗಳು ಪ್ರಾರಂಭವಾದ ಕುವೈತ್ -ಚೆನ್ನೈ- ಕಣ್ಣೂರ್ ಸಂಪರ್ಕ ಸೇವೆಯನ್ನು ಅದೇ ರೀತಿ ಉಳಿಸಲಾಗಿದೆ. ಚೆನ್ನೈ ಹೊರತಾಗಿ ಇಂಡಿಗೊ ಕೊಚ್ಚಿ ಮತ್ತು ಅಹಮದಾಬಾದ್ ಗೆ ನೇರ ಹಾರಾಟವನ್ನು ನಿರ್ವಹಿಸುತ್ತಿದೆ.















ಇನ್ನಷ್ಟು ಸುದ್ದಿಗಳು
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ
ನಿಖರವಲ್ಲದ ಸುದ್ದಿ ಹಂಚಿಕೊಂಡರೆ ಅಪಾಯ- ನಕಲಿ ಸುದ್ದಿಗಳ ವಿರುದ್ಧ ಸೌದಿಯಲ್ಲಿ ಎಚ್ಚರಿಕೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
ಅಂತಾರಾಷ್ಟ್ರೀಯ ಸರ್ವೀಸ್ಗಳಲ್ಲಿ ದರ ಕಡಿತ – ಏರ್ ಇಂಡಿಯಾ ಎಕ್ಸ್ಪ್ರೆಸ್ ಘೋಷಣೆ