ದಮ್ಮಾಂ: ಸೌದಿಯ ಕಾರ್ಮಿಕ ನ್ಯಾಯಾಲಯವು ಕಾರ್ಮಿಕರಿಗೆ ವೇತನವನ್ನು ನೀಡಲು ವಿಳಂಬ ಮಾಡುತ್ತಿದ್ದ ಕಂಪೆನಿಗಳ ವಿರುದ್ದ ದಂಡ ವಿಧಿಸಲು ಆರಂಬಿಸಿದೆ.ಸೌದಿ ಕಾರ್ಮಿಕ ಕಾನೂನು ಸಂಖ್ಯೆ 94 ರ ಪ್ರಕಾರ ಈ ನಡೆ ಎನ್ನಲಾಗಿದೆ.
ಈ ಪ್ರಕರಣದಲ್ಲಿ ಕಾರ್ಮಿಕರ ವೇತನದ ಅರ್ಧದಷ್ಟು ಹಣವನ್ನು ದಂಡ ರೂಪದಲ್ಲಿ ಪಾವತಿಸಬೇಕು. ಅನೇಕ ಕಂಪನಿಗಳ ವಿರುದ್ದ ದಂಡ ವಿಧಿಸಲು ಆರಂಭಿಸಿದಾಗ ಪ್ರಕರಣವು ನ್ಯಾಯಾಲಯಕ್ಕೆ ತಲುಪುವ ಮುಂಚೆ ಕಾರ್ಮಿಕರೊಂದಿಗೆ ಒಪ್ಪಂದದ ಮೂಲಕ ಪರಿಹರಿಸಲು ಹಲವಾರು ಕಂಪೆನಿಗಳು ಮುಂದಾಗಿವೆ ಎನ್ನಲಾಗಿದೆ.
ಸೌದಿ ಕಾರ್ಮಿಕ ನ್ಯಾಯಾಲಯ ಆರಭಗೊಂಡ ಎರಡು ತಿಂಗಳಲ್ಲಿ, ಅನೇಕ ಜನರು ಪರಿಹಾರಕ್ಕಾಗಿ ನ್ಯಾಯಾಲವನ್ನು ಸಂಪರ್ಕಿಸಿರುವುದಾಗಿ ವರದಿಯಾಗಿವೆ.ರಿಯಾದ್ನಲ್ಲಿ ಅತಿ ಹೆಚ್ಚು ಪ್ರಕರಣಗಳನ್ನು ವರದಿ ಮಾಡಿದೆ. 4000 ಪ್ರಕರಣಗಳ ಪೈಕಿ, 1619 ಪ್ರಕರಣಗಳನ್ನು ರಿಯಾದ್ ಕಾರ್ಮಿಕ ನ್ಯಾಯಾಲಯ ದಾಖಲಿಸಿಕೊಂಡಿದೆ. ದಮ್ಮಾಂನಲ್ಲಿ 903, ಬುರೈದಾದಲ್ಲಿ 376, ಅಲ್ಹಸಾದಲ್ಲಿ 329 ಮತ್ತು ತಬೂಕ್ನಲ್ಲಿ 326 ಜಿದ್ದಾದಲ್ಲಿ 293 ಪ್ರಕರಣಗಳು ದಾಖಲಾಗಿವೆ.
ಇಪ್ಪತ್ತು ಸಾವಿರ ರಿಯಾಲ್ ಗಿಂತ ಕೆಳಗಿನ ಸಂಖ್ಯೆಗಾಗಿ ಉಚ್ಛ ನ್ಯಾಯಾಲಯವನ್ನು ಸಮೀಪಿಸಲು ಸಾಧ್ಯವಿಲ್ಲ ಎನ್ನುವ ವ್ಯವಸ್ಥೆ ಇದೆ. ರಿಯಾದ್ನ ಸ್ಥಳೀಯನನ್ನು ಯಾವುದೇ ಕಾರಣವಿಲ್ಲದೆ ಕೆಲಸದಿಂದ ವಜಾ ಮಾಡಿರುವ ಪ್ರಕರಣದಲ್ಲಿ ಒಂದು ಕಂಪೆನಿಯ ವಿರುದ್ದ ಹತ್ತು ಲಕ್ಷ ರಿಯಾಲ್ ದಂಡ ವಿಧಿಸಿ ನ್ಯಾಯಾಲಾಯ ತೀರ್ಪು ನೀಡಿದೆ. ಕಾರ್ಮಿಕರ ಪ್ರಕರಣಗಳು ವಿಳಂಬವಾಗುವುದನ್ನು ತಪ್ಪಿಸಲು ಅಲ್ಲಿನ ನ್ಯಾಯಾಲಯ ನಿರ್ಧರಿಸಿದೆ ಎನ್ನಲಾಗಿದೆ.















ಇನ್ನಷ್ಟು ಸುದ್ದಿಗಳು
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಸೌದಿ ಅರೇಬಿಯಾ ವಿರುದ್ಧ ಹೌತಿಗಳ ದಾಳಿ; 73 ನಾಗರಿಕರಿಗೆ ಗಾಯ
ಹಾರ್ಮುಜ್ ತೆರೆಯುವುದಕ್ಕೆ ಆದ್ಯತೆ; ಬಿಕ್ಕಟ್ಟು ಮುಂದುವರಿದರೆ ಕೈಗಾರಿಕಾ ದುರಂತ- ಕತಾರ್
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ