janadhvani

Kannada Online News Paper

ಅಲ್ ಖಾದಿಸ ಎಜುಕೇಷನಲ್ ಅಕಾಡೆಮಿ ಕಾವಲ್ಕಟ್ಟೆ, ಖತಾರ್ ಸಮಿತಿ- ರಹಮ್ ಕಾನ್ಫರೆನ್ಸ್’ 2019

ಖತಾರ್: ಅಲ್ ಖಾದಿಸ ಎಜುಕೇಷನಲ್ ಅಕಾಡೆಮಿ ಕಾವಲ್ಕಟ್ಟೆ ಕತಾರ್ ರಾಷ್ಟ್ರೀಯ ಸಮಿತಿ ವತಿಯಿಂದ ರಹಂ ಕಾನ್ಫರೆನ್ಸ್- 2019 ಕಾರ್ಯಕ್ರಮವು  ಜನವರಿ 18 ಶುಕ್ರವಾರ ಜುಮಾ ನಮಾಜಿನ ಬಳಿಕ ದೋಹಾದಲ್ಲಿ  ನಡೆಯಿತು.

ಕೆಸಿಎಫ್ ಕತಾರ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷರಾದ ಅಬ್ದುಲ್ ರಹೀಮ್ ಸಅದಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪ್ರಸ್ತುತ ಸಮಿತಿಯ ಅಧ್ಯಕ್ಷರಾದ ಕಬೀರ್ ದೇರಳಕಟ್ಟೆ ಯವರ ಅಧ್ಯಕ್ಷತೆ ಯಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಸಮಿತಿಯ ಕಾರ್ಯದರ್ಶಿ ಸಾದಿಕ್ ಮೂಳೂರ್ ರವರು ಸ್ವಾಗತಿಸಿದರು.

ಕಾರ್ಯಕ್ರಮದ ಕೇಂದ್ರ ಬಿಂದು ಅಲ್ ಖಾದಿಸ ಎಜುಕೇಷನಲ್ ಅಕಾಡೆಮಿ ಶಿಲ್ಪಿ ಡಾ ಮುಹಮ್ಮದ್ ಫಾಝಿಲ್ ರಜ್ವಿ ಇವರು ಮಾತನಾಡಿ ಶೈಕ್ಷಣಿಕ ಹಾಗೂ ಸಾಂತ್ವನ ಕ್ಷೇತ್ರ ಗಳಲ್ಲಿ ನಮಗಿರುವ ಜವಾಬ್ಧಾರಿಗಳನ್ನು ಕೆಲವೊಂದು ನಿದರ್ಶನ ಗಳ ಉಧಾಹರಣೆ ಸಹಿತ ನೆರೆದಿರುವ ಸಭಿಕರಿಗೆ ಮನದಟ್ಟು ಮಾಡಿಕೊಟ್ಟರು. . ಅಲ್ ಖಾದಿಸ ದೊಂದಿಗೆ ಕೈಜೋಡಿಸಿ ಕತಾರ್ ಸಮಿತಿ ಕಳೆದ ನಾಲ್ಕು ವರ್ಷಗಳಿಂದ ನೀಡುತ್ತಿರುವ ಸಹಾಯ ಸಹಕಾರಗಳನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು.

ಮುಖ್ಯ ಅತಿಥಿ ಕರ್ನಾಟಕ ರಾಜ್ಯ ಎಸ್ ಎಸ್ ಫ್ ನ ಪ್ರದಾನ ಕಾರ್ಯದರ್ಶಿ, ಹಾಫಿಲ್ ಸುಫಿಯಾನ್ ಸಖಾಫಿ ಯವರು ಆರ್ಥಿಕ, ಸಾಮಾಜಿಕ, ಹಾಗೂ ಧಾರ್ಮಿಕವಾಗಿ ಬಹಳ ಶೋಚನೀಯ ಪರಿಸ್ಥಿತಿಯಲ್ಲಿರುವ ಮುಗ್ಧ ಕುಟುಂಬಗಳತ್ತ ಕಾರುಣ್ಯದ ಪವಿತ್ರ ಹಸ್ತವನ್ನು ಚಾಚುವಲ್ಲಿ ಕೇವಲ ಹೃಸ್ವ ಸಮಯದಲ್ಲಿ ಅಲ್ ಖಾದಿಸ ಎಜುಕೇಶನ್ ಅಕಾಡೆಮಿ ಮಾಡಿರುವ ಕ್ರಾಂತಿಕಾರಿ ಸಾಧನೆ ಗಳನ್ನು ಹಾಫಿಲ್ ಸುಫಿಯಾನ್ ಸಖಾಫಿಯವರು ವಿವರಿಸಿ ಕೊಟ್ಟರು.ಈ ಸಂದರ್ಭ ದಲ್ಲಿ 2019 – 20 ನೇ ಸಾಲಿಗೆ ನೇಮಕಗೊಂಡ ಪದಾಧಿಕಾರಿಗಳ ಹೆಸರುಗಳನ್ನೂ ಪ್ರಕಟಿಸಲಾಯಿತು.

ಕಬೀರ್ ದೇರಳಕಟ್ಟೆಯವರು ಅಧ್ಯಕ್ಷರಾಗಿ ಹಾಗೂ ಸಾದಿಕ್ ಮೂಳೂರ್ ರವರು ಕಾರ್ಯದರ್ಶಿಗಳಾಗಿ ಮುಂದುವರಿಯಲಿದ್ದು, ಉಪಾದ್ಯಕ್ಷರುಗಳಾಗಿ ಅಬ್ದುಲ್ ರಹಿಮಾನ್ ಪುಂಜಾಲಕಟ್ಟೆ, ಇಕ್ಬಾಲ್ ಪುಂಜಾಲಕಟ್ಟೆ, ಜತೆ ಕಾರ್ಯದರ್ಶಿಗಳಾಗಿ ಹಾಸನ್ ಪುಂಜಾಲಕಟ್ಟೆ, ಅಬ್ದುಸ್ಸತ್ತಾರ್ ಅಶ್ರಫಿ ಮಠ, ಹಾಗೂ ಖಜಾಂಜಿ ಯಾಗಿ ಮುಹಮ್ಮದ್ ಪುಂಜಾಲಕಟ್ಟೆ ಇವರನ್ನು ನೇಮಿಸಲಾಯಿತು.
ಹಜ್ರತ್ ಡಾ! ಮುಹಮ್ಮದ್ ಫಾಝಿಲ್ ರಝ್ವಿ  ಸಮಿತಿಯ ಪ್ರಧಾನ ನಿರ್ದೇಶಕರಾಗಿದ್ದು, ಸಲಹಾ ಸಮಿತಿ ಸದಸ್ಯರಾಗಿ ಹಾಫಿಳ್  ಉಮರುಲ್ ಫಾರೂಖ್  ಸಖಾಫಿ , ರಹೀಮ್ ಸಅದಿ, ಇಸ್ಹಾ ಕ್ ನಿಝಾಮಿ, ಇಸ್ಮಾಯಿಲ್ ಪಿ ಹೆಚ್ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಅಶ್ರಫ್, ಕಬೀರ್ ಮಡಿಕೇರಿ, ಖಾದರ್ ಕರೋಪಾಡಿ, ಅಂದುಮಾನ್ ನಾವುಂದ, ಫಾರೂಕ್ ಕಾಯರ್ತಡ್ಕ, ಸಿದ್ದಿಕ್ ಕೃಷ್ಣಾಪುರ, ಖಲೀಲ್ ಕಟ್ಟೆಮಾರ್.
ಇವರುಗಳು ಕಾರ್ಯ ನಿರ್ವಹಿಸಲಿದ್ದಾರೆ,

error: Content is protected !! Not allowed copy content from janadhvani.com