janadhvani

Kannada Online News Paper

ಸೌದಿ :ಕಾರ್ಮಿಕರ ವೇತನ ವಿಳಂಬ- ದಂಡ ವಿಧಿಸಲು ಆರಂಭಿಸಿದ ಕಾರ್ಮಿಕ ನ್ಯಾಯಾಲಯ

ದಮ್ಮಾಂ: ಸೌದಿಯ ಕಾರ್ಮಿಕ ನ್ಯಾಯಾಲಯವು ಕಾರ್ಮಿಕರಿಗೆ ವೇತನವನ್ನು ನೀಡಲು ವಿಳಂಬ ಮಾಡುತ್ತಿದ್ದ ಕಂಪೆನಿಗಳ ವಿರುದ್ದ ದಂಡ ವಿಧಿಸಲು ಆರಂಬಿಸಿದೆ.ಸೌದಿ ಕಾರ್ಮಿಕ ಕಾನೂನು ಸಂಖ್ಯೆ 94 ರ ಪ್ರಕಾರ ಈ ನಡೆ ಎನ್ನಲಾಗಿದೆ.

ಈ ಪ್ರಕರಣದಲ್ಲಿ ಕಾರ್ಮಿಕರ ವೇತನದ ಅರ್ಧದಷ್ಟು ಹಣವನ್ನು ದಂಡ ರೂಪದಲ್ಲಿ ಪಾವತಿಸಬೇಕು. ಅನೇಕ ಕಂಪನಿಗಳ ವಿರುದ್ದ ದಂಡ ವಿಧಿಸಲು ಆರಂಭಿಸಿದಾಗ ಪ್ರಕರಣವು ನ್ಯಾಯಾಲಯಕ್ಕೆ ತಲುಪುವ ಮುಂಚೆ ಕಾರ್ಮಿಕರೊಂದಿಗೆ ಒಪ್ಪಂದದ ಮೂಲಕ ಪರಿಹರಿಸಲು ಹಲವಾರು ಕಂಪೆನಿಗಳು ಮುಂದಾಗಿವೆ ಎನ್ನಲಾಗಿದೆ.

ಸೌದಿ ಕಾರ್ಮಿಕ ನ್ಯಾಯಾಲಯ ಆರಭಗೊಂಡ ಎರಡು ತಿಂಗಳಲ್ಲಿ, ಅನೇಕ ಜನರು ಪರಿಹಾರಕ್ಕಾಗಿ ನ್ಯಾಯಾಲವನ್ನು ಸಂಪರ್ಕಿಸಿರುವುದಾಗಿ ವರದಿಯಾಗಿವೆ.ರಿಯಾದ್‌ನಲ್ಲಿ ಅತಿ ಹೆಚ್ಚು ಪ್ರಕರಣಗಳನ್ನು ವರದಿ ಮಾಡಿದೆ. 4000 ಪ್ರಕರಣಗಳ ಪೈಕಿ, 1619 ಪ್ರಕರಣಗಳನ್ನು ರಿಯಾದ್ ಕಾರ್ಮಿಕ ನ್ಯಾಯಾಲಯ ದಾಖಲಿಸಿಕೊಂಡಿದೆ. ದಮ್ಮಾಂನಲ್ಲಿ 903, ಬುರೈದಾದಲ್ಲಿ 376, ಅಲ್ಹಸಾದಲ್ಲಿ 329 ಮತ್ತು ತಬೂಕ್‌ನಲ್ಲಿ 326 ಜಿದ್ದಾದಲ್ಲಿ 293 ಪ್ರಕರಣಗಳು ದಾಖಲಾಗಿವೆ.

ಇಪ್ಪತ್ತು ಸಾವಿರ ರಿಯಾಲ್ ‌ಗಿಂತ ಕೆಳಗಿನ ಸಂಖ್ಯೆಗಾಗಿ ಉಚ್ಛ ನ್ಯಾಯಾಲಯವನ್ನು ಸಮೀಪಿಸಲು ಸಾಧ್ಯವಿಲ್ಲ ಎನ್ನುವ ವ್ಯವಸ್ಥೆ ಇದೆ. ರಿಯಾದ್ನ ಸ್ಥಳೀಯನನ್ನು ಯಾವುದೇ ಕಾರಣವಿಲ್ಲದೆ ಕೆಲಸದಿಂದ ವಜಾ ಮಾಡಿರುವ ಪ್ರಕರಣದಲ್ಲಿ ಒಂದು ಕಂಪೆನಿಯ ವಿರುದ್ದ ಹತ್ತು ಲಕ್ಷ ರಿಯಾಲ್ ದಂಡ ವಿಧಿಸಿ ನ್ಯಾಯಾಲಾಯ ತೀರ್ಪು ನೀಡಿದೆ. ಕಾರ್ಮಿಕರ ಪ್ರಕರಣಗಳು ವಿಳಂಬವಾಗುವುದನ್ನು ತಪ್ಪಿಸಲು ಅಲ್ಲಿನ ನ್ಯಾಯಾಲಯ ನಿರ್ಧರಿಸಿದೆ ಎನ್ನಲಾಗಿದೆ.

error: Content is protected !! Not allowed copy content from janadhvani.com