janadhvani

Kannada Online News Paper

ಎಸ್ ವೈ ಎಸ್ ಝೋನ್ ಅಸೆಂಬ್ಲಿ ಹಾಗೂ ಮೌಲಿದ್ ಮಜ್ಲಿಸ್ ಕೃಷ್ಣಾಪುರ

ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ಮಂಗಳೂರು ಝೋನ್ ಸಮಿತಿಯ ವಾರ್ಷಿಕ ಅಸೆಂಬ್ಲಿ ಹಾಗೂ ಮೀಲಾದ್ ಕ್ಯಾಂಪೇನ್ ಉದ್ಘಾಟನೆ ಭಾಗವಾಗಿ ಬೃಹತ್ ಮೌಲಿದ್ ಮಜ್ಲಿಸ್ ಕಾರ್ಯಕ್ರಮ ಮಿಸ್ಬಾಹುಲ್ ಹುದಾ ಕಾಲೇಜು ಕೃಷ್ಣಾಪುರ ದಲ್ಲಿ ನಡೆಯಿತು.


ಕಾರ್ಯಕ್ರಮ ಅಧ್ಯಕ್ಷತೆ ಝೋನ್ ಉಪಾಧ್ಯಕ್ಷ ಇಸ್ಮಾಯಿಲ್ ಸಅದಿ ಉರುಮಣೆ ವಹಿಸಿ ಕೂಳೂರು ಬಶೀರ್ ಮದನಿ ಉದ್ಘಾಟನೆ ಮಾಡಿ ದರು .
ಕಾರ್ಯಕ್ರಮ ರಾಜ್ಯ ಜಂಯ್ಯತಲ್ ಉಲಮಾ ನಾಯಕ ಅಬೂಸುಫ್ಯಾನ್ ಮದನಿ ಸಂಘಟನಾ ತರಗತಿ ನಡೆಸಿದರು.
ಕಾರ್ಯಕ್ರಮ ದಲ್ಲಿ ಅಲವಿ ತಂಙಲ್ ಕಿನ್ಯ, ಜಲಾಲ್ ತಂಙಲ್ ಉಳ್ಳಾಲ , ಜಿಲ್ಲಾ ದ್ಯಕ್ಷರಾದ ಪಿ ಎಂ ಉಸ್ಮಾನ್ ಸಅದಿ ಪಟ್ಟೋರಿ, ಕೆ ಕೆ ಎಂ ಕಾಮಿಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಕಿನಾರ ಮಂಗಳೂರು , ಝೋನ್ ನಾಯಕರಾದ ಏಷ್ಯನ್ ಹಾಜಿ , ಜಿಲ್ಲಾ ನಾಯಕರಾದ ಉಮರ್ ಮಾಸ್ಟರ್, ಸಲೀಲ್ ಹಾಜಿ, ಝೋನ್ ನಾಯಕರಾದ ಏಷ್ಯನ್ ಹಾಜಿ ,U B ಹಾಜಿ,ಸುರತ್ಕಲ್ SMA ಅದ್ಯಕ್ಷ ಅಬ್ದುಲ್ ಹಮೀದ್ , ಇಸ್ಹಾಕ್ ಝುಹ್ರಿ ಹಾಗೂ ಸೆಂಟರ್ ಬ್ರಾಂಚ್ ಗಳ ಹಲವು ನಾಯಕರು ಭಾಗವಹಿಸಿದ್ದರು.
ಕಾರ್ಯಕ್ರಮ ದಲ್ಲಿ ಝೋನ್ ಪ್ರಧಾನ ಕಾರ್ಯದರ್ಶಿ ಬಾವ ಫಕ್ರುದ್ದೀನ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಣೆ ಮಾಡಿದರು ಕೊನೆಯಲ್ಲಿ ಡಿಸೆಂಬರ್ 3 CONNECT 2018 ಕಾರ್ಯಕ್ರಮದ ಬಗ್ಗೆ ಪ್ರಚಾರ ಮಾಡಲಾಯಿತು.
*************************

error: Content is protected !! Not allowed copy content from janadhvani.com