ಮಲಪ್ಪುರಂ, ಸೆ.15:- ಭಾರೀ ಮಳೆ, ಪ್ರವಾಹ ಹಾಗೂ ಭೂ ಕುಸಿತಗಳಿಂದ ಹಲವಾರು ಸಾವು-ನೋವು, ಆಸ್ತಿ-ಪಾಸ್ತಿ ಹಾನಿಯಿಂದ ಕಂಗೆಟ್ಟಿರುವ ಕೇರಳದಲ್ಲಿ ವಿಸ್ಮಯಕಾರಿ ವಿದ್ಯಮಾನವೊಂದು ಜನರಲ್ಲಿ ಆತಂಕ ಮೂಡಿಸಿದೆ. ಕೇರಳದ ಮಲಪ್ಪುರಂ ಜಿಲ್ಲೆಯ ಪೊನ್ನಾನಿ ತಾಲೂಕಿನ ಪೊನ್ನಾನಿ ಸಮುದ್ರವು ಎರಡು ಭಾಗಗಳಾಗಿದ್ದು, ಜನರು ಭಯಮಿಶ್ರಿತ ಕುತೂಹಲದಿಂದ ತಂಡೋಪತಂಡವಾಗಿ ವೀಕ್ಷಿಸುತ್ತಿದ್ದಾರೆ.
ದಂಡೆ ಬಳಿ ಕಳೆದ ಮೂರು ದಿನಗಳಿಂದ ಸಮುದ್ರ ಇಬ್ಭಾಗವಾಗಿದ್ದು, ಮಧ್ಯದಲ್ಲಿ ಜನರು 1 ಕಿ.ಮೀ ತನಕ ನಡೆದುಕೊಂಡು ಹೋಗಬಹುದಾಗಿದೆ. ಎಡ ಮತ್ತು ಬಲ ಭಾಗದಲ್ಲಿ ನೀರು ಅಲೆಗಳಂತೆ ಸಾಗಿ ಬರುತ್ತಿದ್ದು, ಮಧ್ಯದಲ್ಲಿ ನೀರು ನಿಂತ ಕಾಲು ದಾರಿಯಂತೆ(ಮರಳು ದಂಡೆ ಅಥವಾ ಸ್ಯಾಂಡ್ ಬೆಡ್) ಮಾರ್ಗ ನಿರ್ಮಾಣವಾಗಿದೆ.
ಭಾರೀ ಪ್ರವಾಹದಿಂದಾಗಿ ಪೊನ್ನಾನಿ ಸಮುದ್ರದಲ್ಲಿ ನೀರಿನ ಏರಿಳಿತದಲ್ಲಿ ಭಾರೀ ವ್ಯತ್ಯಾಸವಾಗಿರುವುದೇ ಇದಕ್ಕೆ ಕಾರಣ. ಸಮುದ್ರದ ದಂಡೆಯಲ್ಲಿ ಉದ್ದವಾಗಿ ಒಂದು ಕಿಲೋ ಮೀಟರ್ ವರೆಗೆ ಮರಳು ಮಾರ್ಗ ಸೃಷ್ಟಿಯಾಗಿದ್ದು, ಜನರು ಗುಂಪು ಗುಂಪಾಗಿ ಈ ಮಾರ್ಗದಲ್ಲಿ ನಡೆದಾಡುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಕಂಡುಬರುತ್ತಿವೆ. ಈ ಹಿಂದೆ ಇಂಥ ವಿಶಿಷ್ಟ ವಿದ್ಯಮಾನವನ್ನು ನಾವು ನೋಡಿಲ್ಲ ಎಂದು ಜನರು ಹೇಳುತ್ತಿದ್ದಾರೆ.















ಇನ್ನಷ್ಟು ಸುದ್ದಿಗಳು
ಚುನಾವಣಾ ಸಂಭ್ರಮಾಚರಣೆ: ಪಟಾಕಿ ಸಿಡಿದು ಮುಸ್ಲಿಂ ಲೀಗ್ ಕಾರ್ಯಕರ್ತ ಮೃತ್ಯು
ತಮ್ಮದೇ ಸರ್ಕಾರ ಮಂಡಿಸಿದ ಜಾತಿ ಸಮೀಕ್ಷೆ ವರದಿಯನ್ನು ಸುಟ್ಟು ಹಾಕಿದ ಕಾಂಗ್ರೆಸ್ ಎಂಎಲ್ಸಿ
ಕರ್ನಾಟಕ ಸರ್ಕಾರವನ್ನು ಬೀಳಿಸಲು ಕೇರಳ ದೇವಸ್ಥಾನದಲ್ಲಿ ಮೃಗ ಬಲಿ – ದೇವಸ್ವಂ ಸಚಿವರು ಹೇಳಿದ್ದೇನು?
ನೌಕರರ ಮಿಂಚಿನ ಮುಷ್ಕರ : ಅಂತಾರಾಷ್ಟ್ರೀಯ ವಿಮಾನಯಾನ ರದ್ದು
ಮಣಿಪುರ: ಚುನಾವಣೆ ಬಹಿಷ್ಕಾರ ಕ್ಕೆ ಕರೆ ಕೊಟ್ಟ ಕುಕಿ!!
ಬಡತನದಿಂದ ಬಳಲುತ್ತಿರುವ ಕುಟುಂಬದ ಮಹಿಳೆಯರ ಬ್ಯಾಂಕ್ ಖಾತೆಗೆ ವರ್ಷಕ್ಕೆ 1 ಲಕ್ಷ ರೂಪಾಯಿ
ಸಯ್ಯಿದ್ ಹಸನುಲ್ ಅಹ್ದಲ್ ತಂಙಳರಿಗೆ ಗೌರವ ‘ಅತ್ತಕ್ರೀಂ’- ಸ್ವಾಗತ ಸಮಿತಿ ಅಸ್ತಿತ್ವಕ್ಕೆ
ಪುಟ್ಟ ಬಾಲಕಿಯ ಅತ್ಯಾಚಾರ,ಹತ್ಯೆ ಪ್ರಕರಣ- ಆರೋಪಿ ಅಶ್ಫಾಕ್ ಆಲಂಗೆ ಮರಣ ದಂಡನೆ
ಕಳಮಶ್ಶೇರಿಯಲ್ಲಿ ಬಾಂಬ್ ಸ್ಫೋಟಿಸಿದ್ದು ಡೊಮಿನಿಕ್ ಮಾರ್ಟಿನ್- ದೃಢೀಕರಿಸಿದ ಪೊಲೀಸ್
ಕಳಮಶ್ಶೇರಿಯಲ್ಲಿ ಬಾಂಬ್ ಇಟ್ಟಿದ್ದು ನಾನೇ – ಪೊಲೀಸ್ ಠಾಣೆಯಲ್ಲಿ ಶರಣಾಗಿ ತಪ್ಪೊಪ್ಪಿಗೆ