janadhvani

Kannada Online News Paper

ಬಜ್ಪೆ: ಎಸ್ಸೆಸ್ಸೆಫ್ ವತಿಯಿಂದ ಸ್ವಾತಂತ್ರ್ಯ ಸಂಭ್ರಮಾಚರಣೆ

ಬಜಪೆ: ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ ಎಸ್ಸೆಸ್ಸೆಫ್ ಬಜ್ಪೆ ಸೆಕ್ಟರ್ ವತಿಯಿಂದ 72ನೇ ಸ್ವಾತಂತ್ರ್ಯ ಸಂಭ್ರಮಾಚರಣೆ ಬಜ್ಪೆ ಕೆ.ಪಿ ನಗರದಲ್ಲಿ ನಡೆಯಿತು. ಎಸ್‌ವೈಎಸ್ ಬಜ್ಪೆ ಸೆಂಟರ್ ಮುಖಂಡರಾದ ಅಹ್ಮದ್ ಹುಸೈನ್ ಶಾಫಿ ಧ್ವಜಾರೋಹಣ ಮಾಡಿದರು. ಎಸ್‌ವೈಎಸ್ ಬಜ್ಪೆ ಸೆಂಟರ್ ಉಪಾಧ್ಯಕ್ಷ ಎಂಹೆಚ್ ಹನೀಫ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.ಎಸ್ಸೆಸ್ಸೆಫ್ ಬಜ್ಪೆ ಸೆಕ್ಟರ್ ಅಧ್ಯಕ್ಷರಾದ ಶಾಕಿರ್ ಎಮ್ಮೆಸ್ಸಿ ಕಾರ್ಯಕ್ರಮ ಉದ್ಘಾಟಿಸಿದರು. ಗುರುಪುರ ಸರ್ಕಾರಿ ಪದವಿ ಕಾಲೇಜು ಉಪನ್ಯಾಸಕ ಅಹ್ಮದ್ ಹುಸೈನ್ ಶಾಫಿ ಬಜ್ಪೆ ಸ್ವಾತಂತ್ರ್ಯ ಸಂದೇಶ ಭಾಷಣ ಮಾಡಿದರು.

ವೇದಿಕೆಯಲ್ಲಿ ಎಸ್‌ವೈಎಸ್ ಬಜ್ಪೆ ಸೆಂಟರ್ ಮುಖಂಡರಾದ ಹಾಜಿ ಅಬ್ದುಲ್ ಖಾದರ್ ಬಜ್ಪೆ, ಬಶೀರ್ ಅಲ್ ರಫಾ ಬಜ್ಪೆ, ಅಬ್ದುಲ್ ಖಾದರ್ ಕಿನ್ನಿಪದವು, ಮುಹಮ್ಮದ್ ಹನೀಫ್ ಉದ್ದಬೆಟ್ಟು ಮುಂತಾದವರು ಉಪಸ್ಥಿತರಿದ್ದರು. ಸೆಕ್ಟರ್ ಕಾರ್ಯದರ್ಶಿ ಝುಹೈರ್ ಹುಸೈನ್ ಸ್ವಾಗತಿಸಿ ಡಿವಿಶನ್ ಕಾರ್ಯದರ್ಶಿ ಸಿದ್ದೀಖ್ ಬಜ್ಪೆ ವಂದಿಸಿದರು.