janadhvani

Kannada Online News Paper

ಆಗಸ್ಟ್ 11:ಎಸ್ಸೆಸ್ಸೆಫ್ ನಿಂದ ಕೆ.ಜಿ.ಎನ್ ಮಿತ್ತೂರಿನಲ್ಲಿ ಟೀಮ್ ಹಸನೈನ್ ಖಿಯಾದ-2018

ಬಂಟ್ವಾಳ: ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಸಮಿತಿ ವತಿಯಿಂದ ಟೀಮ್ ಹಸನೈನ್ ಖಿಯಾದ-2018 ಟ್ರೈನಿಂಗ್ ಕ್ಯಾಂಪ್ ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಇಸ್ಮಾಯಿಲ್ ಸಖಾಫಿ ಕೊಡಗು ರವರ ಅಧ್ಯಕ್ಷತೆಯಲ್ಲಿ ಕೆ.ಜಿ.ಎನ್ ಮಿತ್ತೂರು ಸಂಸ್ಥೆಯಲ್ಲಿ ಆಗಸ್ತ್ 11 ಶನಿವಾರ ಬೆಳಿಗ್ಗೆ 9:00 ಗಂಟೆಯಿಂದ ನಡೆಯಲಿರುವುದು.

ದಾರುಲ್ ಇರ್ಷಾದ್ ಮಾಣಿ ಸಂಸ್ಥೆಯ ಶಿಲ್ಪಿ ಝೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.

ಡಾ! ಮುಹ್ಸಿನ್ ಸರ್ ಕ್ಯಾಲಿಕೆಟ್ ತರಗತಿಯನ್ನು ನಡೆಸಲಿದ್ದಾರೆ.

ಎಸ್ಸೆಸ್ಸೆಫ್ ರಾಜ್ಯ ಕೋಶಾಧಿಕಾರಿ ಶರೀಫ್ ಮಾಸ್ಟರ್ ಬೆಂಗಳೂರು ಹಾಗೂ ರಾಜ್ಯ ಕಾರ್ಯದರ್ಶಿ ಸುಫ್ಯಾನ್ ಸಖಾಫಿರವರು ಟೀಂ ಹಸನೈನ್ ಬಗ್ಗೆ ಮಾಹಿತಿಯನ್ನು ನೀಡಲಿದ್ದಾರೆ.
ರಾಜ್ಯ ಸದಸ್ಯ ಸಿರಾಜುದ್ದೀನ್ ಸಖಾಫಿ ಕನ್ಯಾನ,ಇಸ್ಮಾಯಿಲ್ ಮಾಸ್ಟರ್ ಮೊಂಟೆಪದವು,ಅಡ್ವಕೇಟ್ ಶಾಕಿರ್ ಹಾಜಿ ಮಿತ್ತೂರು ಉಪಸ್ಥಿತರಿರುವರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.